ಫೈನಾನ್ಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ವಂಚನೆ ಪ್ರಕರಣ ದಾಖಲು-Fraud case registered

Suddilive || Shivamogga

ಫೈನಾನ್ಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ವಂಚನೆ ಪ್ರಕರಣ ದಾಖಲು-Fraud case registered against finance officials and staff

Fraud, case

ಶಿವಮೊಗ್ಗದ ಫೈನಾನ್ಸ್ ಕಂನಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ವಂಚನೆ ಪ್ರಕರಣದ ಆರೋಪ ಕೇಳಿಬಂದಿದೆ. ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮೂವರು ಅಧಿಕಾರಿಗಳು ಮತ್ತೊಂದು ಫೈನಾನ್ಸ್ ನಿಂದ ಸಾಲಕೊಡಿಸುತ್ತಿದ್ದ ಕುರಿತು ದೂರು ದಾಖಲಾಗಿದೆ. 

ಶಿವಮೊಗ್ಗದ ಗೋಪಾಳದಲ್ಲಿರುವ ಶೀ-ಕಾಮರ್ಸ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿರುವ ಜುನೇದ್ ಉಲ್ಲಾ ಖಾನ್, ಫೀಲ್ಡ್ ಆಫೀಸರ್ ಮಧುಕುಮಾರ್, ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಶಿವಶಕ್ತಿ ನಾಯಕ್, ವೆರಿಫಿಕೇಷನ್ ಮ್ಯಾನೇಜರ್ ಮಂಜುನಾಥ್ ಜಿ.ಟಿ ಮತ್ತು ಟೀಂ ಲೀಡರ್ ವಿನಾಯಕ್ ಎಂಬುವರ ವಿರುದ್ಧ ಕೆಲಸ ಮಾಡುತ್ತಿದ್ದ ಕಂಪನಿಯನ್ನ ದುರುಪಯೋಗ ಪಡಿಸಿಕೊಂಡು ಮತ್ತೊಂದು ಫೈನಾನ್ಸ್ ನಿಂದ ಗ್ರಾಹಕರಿಗೆ ಹಣ ಕೊಡಿಸಿರುವ ಆರೋಪ ಕೇಳಿ ಬಂದಿದೆ. 

ಶೀ ಕಾಮರ್ಸ್ ಫೈನಾನ್ಸ್ ನ ಎಜಿಎಂ ಬೆಂಗಳೂರಿನಲ್ಲಿದ್ದು ಶಿವಮೊಗ್ಗದ ಬ್ರಾಂಚ್ ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಲ ನೀಡಿರುವುದು ಕಡಿಮೆಯಾದ ಬಗ್ಗೆ ರೀಜನಲ್ ಹೆಡ್ ಶೇಕ್ ಸಾಧಿಕ್ ಪಾಷ ತಿಳಿಸಿದ್ದರಿಂದ ಶಿವಮೊಗ್ಗಕ್ಕೆ ಬಂದು  ಪರಿಶೀಲಿಸಿದ್ದಾರೆ.  

ಐದು ಜನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಂಪನಿಗಳಲ್ಲೇ ಇದ್ದುಕೊಂಡು ಆರ್ ಬಿಐ ನಿಯಮ ಉಲ್ಲಂಘಿಸಿ ನ್ಯೂ ವೇ ಫಿನ್ ಸರ್ವ್ ಪ್ರೈ.ಲಿಮಿಟೆಡ್ ನಿಂದ 22,50,000 ಸಾಲ ನೀಡಿರುವುದು ತಿಳಿದು ಬಂದಿರುತ್ತದೆ. ಗ್ರಾಹಕರನ್ನೂ ವಿಚಾರಿಸಿದ ಬೇರೆ ಫೈನಾನ್ಸ್ ನಿಂದ ಸಾಲ ಕೊಡಿಸಿರುವ ಸತ್ಯ ಬೆಳಕಿಗೆ ಬಂದಿದೆ. 

ಆರ್ ಬಿಐ ನಿಯಮದ ಪ್ರಕಾರ ನ್ಯೂ ವೇ ಫಿನ್ ಸರ್ವ್ ಸಂಸ್ಥೆಯನ್ನ ನೋಂದಣಿ ಮಾಡಿಸದೆ ಆರ್ ಬಿ ಐ ನಿಯಮಗಳ ವಿರುದ್ಧ ವ್ಯವಹಾರ ನಡೆಸಿರುವ ಆರೋಪದ ಅಡಿ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Fraud case registered

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close