Suddilive || Thirthahalli
ಮಾತ್ರೆ ನುಂಗಿ ಮಹಿಳೆ ಸಾವು-Woman dies after swallowing pills
ಗಂಡ ಹೆಂಡತಿ ನಡುವಿನ ಜಗಳ, ಜಗಳದಿಂದ ಬೇಸತ್ತ ಪತ್ನಿ ಏಕಾಏಕಿ ಮಾತ್ರೆ ನುಂಗುವ ಮೂಲಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ತೀರ್ಥಹಳ್ಳಿಯ ಕೊಪ್ಪ ವೃತ್ತದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗಂಗಾಧರ್ ಮತ್ತು ಲತಾ ಮೇ1 ರಂದು ಜಗಳವಾಡಿಕೊಂಡಿದ್ದಾರೆ. ಜಗಳದಿಂದ ಬೇಸತ್ತ ಪತ್ನಿ ಲತಾ ಏಕಾಏಕಿ ಡೋಲೋ 650 ಮಾತ್ರೆ ನುಂಗಿದ್ದರ ಪರಿಣಾಮ ನಿತ್ರಾಣಗೊಂಡಿದ್ದರು.
ನಿತ್ರಾಣಗೊಂಡ ಲತಾರನ್ನ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಣಮುಖರಾಗದ ಲತಾರನ್ನ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಗೆ ಕರೆತರಲಾಗಿದೆ. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವಾಗಿದೆ. ಗಂಗಾಧರ್ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕ ದರ್ಜೆಯ ನೌಕರ ಸಹ ಆಗಿರುವುದಾಗಿ ತಿಳಿದು ಬಂದಿದೆ.
Woman dies after swallowing pills