ಎಕ್ಸ್ ಎಂಎಲ್ ಸಿಯ ಸಿಬ್ಬಂದಿ ಬಳಿ ಗನ್ ಪತ್ತೆ? ಪ್ರಕರಣ ದಾಖಲಾಗುತ್ತಾ? Gun found with XMLC staff

SUDDILIVE || SHIVAMOGGA

ಎಕ್ಸ್ ಎಂಎಲ್ ಸಿಯ ಸಿಬ್ಬಂದಿ ಬಳಿ ಗನ್ ಪತ್ತೆ? ಪ್ರಕರಣ ದಾಖಲಾಗುತ್ತಾ? Gun found with XMLC staff? Will a case be registered?

Gun, XMLC


ಕಾಂಗ್ರೆಸ್ ಲೀಡರ್ ನ ಸಿಬ್ಬಂದಿಯ ಬಳಿ   ಗನ್ ಪತ್ತೆಯಾಗಿದ್ದು,  ಈ ಗನ್ ಹಲವು ಅನುಮಾನಕ್ಕೆ ಆಸ್ಪದ ನೀಡಿದೆ. ಆತನೇ ಗನ್ ತೋರಿಸಿರುವುದರಿಂದ ಆತನ ವಿರುದ್ಧ ದೂರು ದಾಖಲಾಗುತ್ತದೆಯೇ ಎಂಬ ಅನುಮಾನ ಶುರುವಾಗಿದೆ. 

ಗನ್ ತೋರಿಸಿರುವುದರಿಂದ ಆತನ ಬಳಿಯಿರುವುದು ಗನಾ ..!?  ಪಿಸ್ತೂಲಾ..!?  ಏರ್ ಗನಾ..!? ಈತನ ಬಳಿ ಇರುವುದಾದರೂ ಏನು..?! ಎಂಬುದು ಗೊತ್ತಾಗಬೇಕಿದೆ. ಮಾಜಿ ಎಂಎಲ್ ಸಿಯ ಸಿಬ್ಬಂದಿ ಜಗದೀಶ್ ಗನ್ ಮ್ಯಾನೋ, ಕಾರು ಚಾಲಕನೋ? ಎಂಬುದು  ತಿಳಿಯಬೇಕಿದೆ. ಆತನ ಬಳಿ ಏರ್ ಗನ್ನೇ ಪತ್ತೆಯಾದರೂ ದೂರು ದಾಖಲಾಗಬೇಕಿದೆ. 

ಒಂದು ವೇಳೆ ಈತನ ಬಳಿ ನಿಜವಾದ ಗನ್ ಆಗಿದ್ದರೆ, ಆ ಗನ್ ನ ಇಟ್ಟುಕೊಂಡಿರುವ ಬಗ್ಗೆ ತಪಾಸಣೆ ನಡೆದು ದೂರು ದಾಖಲಾಗಬೇಕು. ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಪರವಾಗಿಯ ಬಗ್ಗೆ ಹಾಗೂ ತರಬೇತಿಯ ಬಗ್ಗೆ ಪರಿಶೀಲಿಸಬೇಕಿದೆ. ಇದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಎಂಎಲ್ಸಿ ಆರ್ ಪ್ರಸನ್ನ ಕುಮಾರ್ ಅವರ ಸಿಬ್ಬಂದಿ ಜಗದೀಶ್ ಮೊದಲು ಚಾಲಕನಾ, ಗನ್ ಮ್ಯಾನಾ? ಎಂಬುದು ಸ್ಪಷ್ಟವಾಗಬೇಕಿದೆ. ನಂತರ ಆತನ ಬಳಿ ಗನ್ ಪತ್ತೆಯಾಗಿದ್ದು ಸಾಕಷ್ಟು ಅನುಮಾನಗಳು ಹೆಚ್ಚಾಗಿದೆ. 

ಒಂದು ವೇಳೆ ಇದು ಏರ್ ಗನ್ ಎಂದು ಸಹ ಸಾಬೀತಾದರೆ ದೂರು ದಾಖಲಾಗಬೇಕು. ಎರಡೂ ರೀತಿಯಲ್ಲಿ ಈ ಪ್ರಕರಣ ದಾಖಲಾಗಿ ಎಫ್ಐಆರ್ ಆಗಬೇಕಿದೆ. ಕಾರಣ ಇತ್ತೀಚಿಗಷ್ಟೇ ಶಿವಮೊಗ್ಗದ ಟಿಪ್ಪು ನಗರದಲ್ಲಿ ಏರ್ ಗನ್ ಫೈರ್ ಮಾಡಿದ್ದ. ರೌಡಿಶೀಟರ್ ಇರ್ಫಾನ್.! ನ ಮೇಲೆ ದೂರು ದಾಖಲಾಗಿತ್ತು. ಇಲ್ಲಿ ಜಗದೀಶ್ ಫೈರ್ ಮಾಡದಿದ್ದರೂ ಗನ್ ತೋರಿಸಿ ಹೋಗಿರುವ ಬಗ್ಗೆ ದೂರು ದಾಖಲಾಗಬೇಕಿದೆ. ಸಣ್ಣಪುಟ್ಟ ವ್ಯಕ್ತಿಗಳ ಬಳಿ ಏರ್ ಗನ್ ಪತ್ತೆಯಾದರೂ ದೂರು ದಾಣಕಲಾಗುವುದಾದರೆ, ಜಗದೀಶ್ ಬಳಿ ಪತ್ತೆಯಾಗುವ ಗನ್ವ ಬಳಿ ದೂರು ದಾಖಲಾಗಬೇಕಿದೆ. 

ಇದೀಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಿಬ್ಬಂದಿ ಗನ್ ಸೊಂಟಕ್ಕೆ ಕಟ್ಟಿ ಕೊಂಡು ತಿರುಗಾಡುತ್ತಿದ್ದಾನೆ. ಬೇರೆಯವರಿಗೆ ಜೀವ ಭಯ ಹುಟ್ಟಿಸುವ ರೀತಿಯಲ್ಲಿ ಗನ್ ಇಟ್ಟು ಕೊಂಡಿದ್ದರೂ ದೂರು ದಾಖಲಾಗದಿರುವುದು ಅನುಮಾನ ಹೆಚ್ಚಿಸಿದೆ. 

ಜಗದೀಶ ಗನ್ ಇಟ್ಟುಕೊಳ್ಳಲು ಅನುಮತಿ ಇದೆಯೇ? ಅಥವಾ ಈತ ಗನ್ ಮ್ಯಾನ್ ಮಾದರಿ ವೇಷಕ್ಕೆ ಅನುಮತಿ ಕೊಟ್ಟಿದ್ದಾದರೂ ಯಾರು? ಹಾಗೂ  ಪ್ರಸನ್ನ ಕುಮಾರ್ ಗೆ ಗನ್ ಮ್ಯಾನ್ ಕೊಡಲಾಗಿದೆಯಾ? ಕೊಟ್ಟರೂ ಆತ ಗನ್ ಮ್ಯಾನಾ ಅಥವಾ ಕಾರು ಚಾಲಕನಾ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕಾರು ಚಾಲಕನ ಬಳಿ ಇರುವ ಗನ್ ಆದರೂ ಯಾರದ್ದು?ಈ ರೀತಿ ಗನ್ ಇಟ್ಟುಕೊಳ್ಳಲು ಮಾಜಿ ಎಂಎಲ್ಸಿ ಪ್ರಸನ್ನ ಕುಮಾರ್ ಅನುಮತಿ ನೀಡಿದ್ದಾರೆಯೇ? ಎಂಬ ಕೂಲಂಕುಷ ತನಿಖೆಯಾಗಬೇಕಿದೆ. 

ಕಾರು ಚಾಲಕ ಜಗದೀಶ್ ಬಳಿ ಇರುವ ಗನ್ ಅಸಲಿಯೋ ?ನಕಲಿಯೋ? ಪೊಲೀಸ್ ಇಲಾಖೆ ಈ ಬಗ್ಗೆ ತನಿಖೆ ನಡೆಸುತ್ತದೆಯೇ?ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸುತ್ತದೆಯೇ..!?ಸಾರ್ವಜನಿಕರು ಕೇಳುವ ಅನುಮಾನದ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆ ಉತ್ತರ ನೀಡಬೇಕಿದೆ.

Gun found with XMLC staff

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close