Suddilive || Shivamogga
ಹಂದಿ ಅಣ್ಣಿ ಕೊಲೆ ಪ್ರಕರಣ, 7 ಜನ ಆರೋಪಿಗಳನ್ನ ಖುಲಾಸೆಗೊಳಿಸಿ ಕೋರ್ಟ್ ತೀರ್ಪು-Handi Anni murder case, court acquits 7 accused
ಹಂದಿ ಅಣ್ಣಿ ಕೊಲೆ ಆರೋಪಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೊಲೆ ಪ್ರಕರಣವನ್ನ ಖುಲಾಸೆಗೊಳಿಸಿ ಶಿವಮೊಗ್ಗ ನ್ಯಾಯಾಲಯ ಆದೇಶಿಸಿರುವ ಹಿನ್ನೆಲೆಯಲ್ಲಿ 7 ಜನ ಆರೋಪಿಗಳ ವಿರುದ್ಧದ ಕೊಲೆ ಆರೋಪ ಮುಕ್ತ ಗೊಂಡಿದೆ.
ಕಾಡಾ ಕಾರ್ತಿಕ್, ನಿತಿನ್ ಯಾನೆ ಭಜರಂಗಿ, ಮದನ್ ರಾಜ್, ಯಾನೆ ಮದನ್ ರಾಯ್, ಚಂದನ್ ಯಾನೆ ಚಾರ್ಲಿ, ಫಾರುಕ್ ಯಾನೆ ಯಾನೆ ಉಮ್ಮರ್, ಮಧುಸೂಧನ್, ಅಲಿಯಾಸ್ ಅಲಿಯಾಸ್ ಕರಿಯಾ, ಮಧು ಮತ್ತು ಆಂಜನೇಯ ಎಂಬುವರು ಹಂದಿ ಅಣ್ಣಿಯ ಕೊಲೆ ಆರೋಪಿಗಳಾಗಿದ್ದಾರೆ. ಮಧು ಈ ಪ್ರಕರಣ ನಡೆಯುವಾಗಲೆ ಕೊಕೆಯಾಗಿದ್ದನು. 2024ವರಲ್ಲಿ ಹೊನ್ನಾಳಿ ತಾಲೂಕಿನಲ್ಲಿ ಕೊಲೆ ಮಾಡಲಾಗಿತ್ತು. ಉಳಿದ ಏಳು ಜನರ ವಿರುದ್ಧ ಕೊಲೆ ಆರೋಪದ ತೂಗುಗತ್ತಿಯಿಂದ ತಪ್ಪಿಸಿಕೊಂಡಿದ್ದಾರೆ. ಕೊಲೆಗೆ ಸಾಕ್ಷಿ ಇಲ್ಲದ ಕಾರಣ ಪ್ರಕರಣ ಖುಲಾಸೆಯಾಗಿರುವುದಾಗಿ ತಿಳಿದು ಬಂದಿದೆ.
ಶಿವಮೊಗ್ಗದಲ್ಲಿ 2024 ಜುಲೈ 14 ರಂದು ಹೊನ್ನಪ್ಪ ಯಾನೆ ಹಂದಿ ಅಣ್ಣಿಯ ಕೊಲೆಯಾಗುತ್ತಿದ್ದಂತೆ ಕಾಡ ಕಾರ್ತಿಕ್ ಮತ್ತು ಆತನ ಗ್ಯಾಂಗ್ ಚಿಕ್ಕಮಗಳೂರಿನಲ್ಲಿ ಪೊಲೀಸರ ಬಳಿ ಸರೆಂಡರ್ ಆಗಿದ್ದರು. ಅವರನ್ನ ಶಿವಮೊಗ್ಗಕ್ಕೆ ತಂದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಕೋರ್ಟ್ ಕಲಾಪದ ನಡುವೆ 2024 ರಲ್ಲಿ ಮಧು ಎಂಬಾತನನ್ನ ಕೊಲೆ ಮಾಡಲಾಗಿತ್ತು. ಇದಾದ ನಂತರ ಮಾ.17 ರಂದು ಕೊಲೆ ಆರೋಪಿಗಳ ಮೇಲೆ ದಾಳಿ ನಡೆಸಲು ಯತ್ನಿಸಿ ಮೂವರು ಬಂಧಿತರಾಗಿದ್ದರು. ವಿನೋಬ ನಗರದ ಮಲ್ಲೇಶ್, ಕಾಶೀಪುರದ ರಾಕೇಶ್, ಮೇದಾರಕೇರಿಯ ಗುರುಮೂರ್ತಿ, ಹಾಗೂ ವಿನಯ್ ಎಂ ಎಂಬಾತನನ್ನ ಬಂಧಿಸಿ ಜಯನಗರ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು.
ಚಂದನ್, ಫಾರೂಕ್, ಮದನ್ ರಾಜ್, ಮಧುಸೂದನ್ ಮತ್ತು ಮದು ಎಂಬ ಐವರು ಹಾಜರಾಗಬೇಕಿತ್ತು. ನಂಬರ್ ಪ್ಲೇಟ್ ಇಲ್ಲದ ಡಿಯೋ ಗಾಡಿ ತಂದು ಕೋರ್ಟ್ ನಲ್ಲಿ ನುಗ್ಗಿಸಿ ಐವರ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಅಡ್ಡಗಟ್ಟಿದ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಮಾರಕಾಸ್ತ್ರಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ. ಗುರುಮೂರ್ತಿ ಬಳಿ 9.6 ಫೊಲ್ಡಿಂಗ್ ಚಾಕು ಪತ್ತೆಯಾಗಿತ್ತು.
ಇದಾದ ನಂತರ ಮೇ.2 ರಂದು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶಿಸಿದೆ.
Handi Anni murder case