ಎಸ್ಪಿ ನೇತೃತ್ವದಲ್ಲಿ ಪೊಲೀಸರ ದಿಡೀರ್ ರೂಟ್ ಮಾರ್ಚ್-Sudden route march

Suddilive || Shivamogga

ಎಸ್ಪಿ ನೇತೃತ್ವದಲ್ಲಿ ಪೊಲೀಸರ ದಿಡೀರ್ ರೂಟ್ ಮಾರ್ಚ್-Police conduct a sudden route march led by the SP

Sudden, route March


ಪೊಲೀಸರಿಂದ ದಿಡೀರ್ ರೂಟ್ ಮಾರ್ಚ್ ನಡೆದಿದೆ. ಕಾನೂನು ಸುವ್ಯವಸ್ಥೆಯ ಹಿನ್ನಲೆಯಲ್ಲಿ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆದಿದೆ. 

ನಾಳೆ ವಕ್ಫ್ ತಿದ್ದುಪಡಿ ಕಾನೂನು ವಿರುದ್ಧ ನಗರದಲ್ಲಿ ಮುಸ್ಲೀಂರ ಪ್ರತಿಭಟನೆ ಇದ್ದು, ಪ್ರತಿಭಟನೆ ಹಿನ್ನಲೆಯಲ್ಲಿ ಈ ರೂಟ್ ಮಾರ್ಚ್ ನಡೆದಿದೆ ಎಂದು ಒಂದು ಕಡೆ ಹೇಳಲಾದರೂ, ಮಂಗಳೂರಿನಲ್ಲಿ ನಡೆದ ಹತ್ಯೆಯ ಹಿನ್ನಲೆಯಲ್ಲಿಯೂ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. 

ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಿತ ದೃಷ್ಟಿಯಿಂದ  ಮಿಥುನ್ ಕುಮಾರ್ ಜಿ.ಕೆ  ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಈ ದಿನ ದಿನಾಂಕಃ 02-05-2025 ರಂದು ಸಂಜೆ  ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್) ವನ್ನು ಹಮ್ಮಿಕೊಂಡಿದ್ದು, ಪಥ ಸಂಚಲನವನ್ನು ಶಿವಮೊಗ್ಗ ನಗರದ  ಡಿ.ಎ.ಆರ್ ಪೊಲೀಸ್ ಮೈಧಾನದಿಂದ ಪ್ರಾರಂಭಿಸಿ, ಅಶೋಕ ವೃತ್ತ, ಎ.ಎ. ವೃತ್ತ, ಎಸ್. ಎನ್ ವೃತ್ತ, ಕರ್ನಾಟಕ ಸಂಘ, ಡಿ. ವಿ. ಎಸ್ ವೃತ್ತ, ಮಹಾವೀರ ವೃತ್ತ, ಗೋಪಿ ವೃತ್ತ ದಿಂದ ಪುನ್ಹ ಎ.ಎ. ವೃತ್ತದಿಂದ ಅಶೋಕ ವೃತ್ತ ಮೂಲಕ ಡಿ.ಎ.ಆರ್ ಪೊಲೀಸ್ ಮೈಧಾನಕ್ಕೆ ಬಂದು  ಮುಕ್ತಾಯ ಮಾಡಲಾಯಿತು. 

ಪೊಲೀಸ್ ಪಥ ಸಂಚಲನದಲ್ಲಿ,  ಅನಿಲ್ ಕುಮಾರ್ ಭೂಮ ರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ, ಎ ಜಿ ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು,  ಪೊಲೀಸ್ ಉಪ ನಿರೀಕ್ಷಕರು,  06 ಕೆ.ಎಸ್.ಆರ್.ಪಿ ತುಕಡಿ, 05 ಡಿ.ಎ.ಆರ್ ತುಕಡಿ ಮತ್ತು 700 ಜನ ಪೊಲೀಸ್ ಅಧಿಕಾರಿ & ಸಿಬ್ಬಂಧಿಗಳು ಸಿಬ್ಬಂಧಿಗಳು ಭಾಗವಹಿಸಿದ್ದರು.

sudden route march

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close