SUDDILIVE || SHIVAMOGGA
ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಗೃಹ ಇಲಾಖೆ ತಪ್ಪಿತಸ್ಥಾನದಲ್ಲಿದೆ-ಈಶ್ವರಪ್ಪ-Home Department is at fault in gold smuggling case - Eshwarappa
ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ, ಗೃಹ ಇಲಾಖೆ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವಂತಾಗಿದೆ ಎಂದು ಮಾಜಿ ಡಿಸಿಎಂ ಈಶ್ವಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಡಿ ದಾಳಿ ನಂತರ ಗೃಹ ಮಂತ್ರಿ ನಿವಾಸಕ್ಕೆ ಸಿಎಂ, ಡಿಸಿಎಂ ಹೋಗಿ ಬಂದಿದ್ದಾರೆ. ಇದು ಗೃಹ ಮಂತ್ರಿಗೆ ಮಾತ್ರ ಸಿಮೀತವಾದ ವಿಷಯವಲ್ಲ. ರನ್ಯಾ ರಾವ್ ಗೆ ೪೦ ಲಕ್ಷ ರೂಪಾಯಿ ವರ್ಗಾವಣೆ ಆಗಿದೆ. ಈ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ ಎಂದರು.
ಆ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯಿಸುವ ಬದಲು ಶಿವಕುಮಾರ್ ಅವರನ್ನೇ ಕೇಳಿಕೊಳ್ಳಿ ಎಂದು ಹೇಳಿದ್ದಾರೆ. ಡಿಸಿಎಂ ಹಾಗೂ ಪರಮೇಶ್ವರ ನಡುವೆ ಏನು ಮಾತುಕತೆ ನಡೆದಿದೆ ಎಂದು ತಿಳಿಸಲಿ. ರನ್ಯಾ ರಾವ್ ಗೆ ಚಿನ್ನ ಸಾಗಾಣಿಕೆಗೆ ಹಣ ನೀಡಿದರೆ, ಬೇರೆ ಉದ್ದೇಶಕ್ಕೆ ಹಣ ನೀಡಿದರೆ ಎಂದು ತಿಳಿಸಲಿ ಎಂದರು.
ಅಭಿನವ ಗವಿಸಿದ್ದೇಶ್ವರ ಶಿವಯೋಗಿಗಳಿಂದ ಬಾಳ ಬೆಳಕು" ಎಂಬ ಪ್ರವಚನ ಕಾರ್ಯಕ್ರಮ
ಇದರ ಅಂಗವಾಗಿ ದಿನಾಂಕ:- 30-05-2025 ನೇ ಶುಕ್ರವಾರ ಸಂಜೆ 6:00 ಗಂಟೆಗೆ ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ನಗರದ ಕುವೆಂಪು ರಂಗಮಂದಿರದಲ್ಲಿ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಶಿವಯೋಗಿಗಳಿಂದ ಬಾಳ ಬೆಳಕು" ಎಂಬ ಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶ್ರೀ ಅಭಿನವ ಗವಿಸಿದ್ದೇಶ್ವರ ಶಿವಯೋಗಿಗಳು ಶ್ರೀ ಗವಿಮಠವನ್ನು ಅನ್ನ, ಅಕ್ಷರ ಮತ್ತು ಅಧ್ಯಾತ್ಮ ದಾಸೋಹದಡಿ ಅಭಿವೃದ್ಧಿಪಡಿಸಿದ್ದಲ್ಲದೇ ಹಲವು ಸತ್ಕಾರ್ಯಗಳಿಂದ ಸಾಮಾಜಿಕ ಕ್ರಾಂತಿಯನ್ನು ಕೈಗೊಂಡಿರುತ್ತಾರೆ. ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದಿರುವ ಶ್ರೀಗಳು ಐಡ ಮಕ್ಕಳಿಗೆ ಉಚಿತ ವಿದ್ಯಭ್ಯಾಸದ ಜೊತೆಗೆ ದಾಸೋಹವನ್ನೂ ನಡೆಸುತ್ತಿದ್ದಾರೆ. ಸರಳತೆಯ ಸಾಕಾರ ಮೂರ್ತಿಯಾಗಿರುವ ಶ್ರೀಗಳು ಮಠದ ಭಕ್ತರ ಕಷ್ಟ ಸುಖಗಳನ್ನು ಆಲಿಸಿ ತಮ್ಮಿಂದಾದ ಪರಿಹಾರವನ್ನು ಸೂಚಿಸುವುದು ದಿನ ನಿತ್ಯದ ಕಾಯಕವಾಗಿದೆ. ಜಾತಿ ಮತ ಬೇದವಿಲ್ಲದೆ ಸಮಾಜದ ಏಳಿಗೆಯಲ್ಲಿ ಶ್ರೀಮಠವು ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಪ್ರತಿ ವರ್ಷ ಪುಷ್ಯ ಮಾಸದಲ್ಲಿ ಜರುಗುವ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವು ನಾಡಿನ ಇತಿಹಾಸದಲ್ಲಿ ಹೊಸ ಭಾಷ್ಯವನ್ನೇ ಬರೆದಿದೆ ಎಂದರು.
Home Department is at fault in gold smuggling case