18 ಶಾಸಕರ ಅಮಾನತ್ತು ವಾಪಾಸ್ ಪಡೆದಿರುವುದು ಕಾನೂನು ಬಾಹಿರ-ಆಯನೂರು-Lifting of suspension

 SUDDILIVE || SHIVAMOGGA

18 ಶಾಸಕರ ಅಮಾನತ್ತು ವಾಪಾಸ್ ಪಡೆದಿರುವುದು ಕಾನೂನು ಬಾಹಿರ-ಆಯನೂರು-Lifting of suspension of 18 MLAs is illegal - Ayanur

Lifting, suspension


18 ಜನ ಶಾಸಕರ ಅಮಾನತ್ತನ್ನ ಹಿಂಪಡೆದಿರುವುದು ಸಂಸದೀಯ ವಿರೋಧಿ ಎಂದು ಮಾಜಿ ಶಾಸಕ ಆಯನೂರು ಮಂಜುನಾಥ್ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಮಾತನಾಸಿದ ಅವರು, 6 ತಿಂಗಳ ವರೆಗೆ 18 ಜನ ಶಾಸಕರ ಅಮಾನತ್ತು ಆಗಿದೆ. 348 ರ ಪ್ರಕಾರ ಕಾನೂನು ಮತ್ತು ಸಂಸದೀಯ ಸಚಿವರು ಸದನಕ್ಕೆ ಮಂಡಿಸಬೇಕು. ಸದನದಲ್ಲಿ ಚರ್ಚೆಯಾಗಿ ಅಭಿಪ್ರಾಯ ಕ್ರೂಢಿಕರಿಸಿ ಶಾಸಕರ ಅಮಾನತ್ತನ್ನ ಹಿಂಪಡೆಯಬೇಕಿತ್ತು ಎಂದರು

ಆದರೆ ಸಭಾಧ್ಯಕ್ಷರು, ಸಿಎಂ ಡಿಸಿಎಂ, ಕಾನೂನು ಸಚಿವರು ವಿಪಕ್ಷ ನಾಯಕರು ನಾಲ್ಕೈದು ಜನ ಸೇರಿ ಅಮಾನತ್ತು ವಾಪಾಸ್ ಪಡೆದಿರುವುದು ನಿಯಮ‌ ಉಲ್ಲಂಘನೆಯಾಗಿದೆ. ಸೆಕ್ಷನ್ 348 ನಿಯಮದ ಅಡಿ ಅಮಾನತ್ತು ವಾಪಾಸ್ ಪಡೆಯಲಾಗಿದೆ. ಯಾವ ಕಾನೂನು ಅಡಿ ವಾಪಾಸ್ ಪಡೆಯಲಾಗಿದೆ? ಸದನದಲ್ಲಿ ಆದ ಅಮಾನತ್ತನ್ನ ಹೊರಗಡೆ ಕೂತು ವಾಪಾಸ್ ಹೇಗೆ ಪಡೆಯುತ್ತಾರೆ ಎಂದು ಪ್ರಶ್ನಿಸಿದರು.

ಸಭಾಧ್ಯಕ್ಷರಿಗೆ ರೂಲಿಂಗ್ ಅಧಿಕಾರವಿದೆ. ಸದನದ ಗಮನಕ್ಕೆ ತಾರದೆ ಬದಲಾವಣೆ ಮಾಡಲು ಅಧಿಕಾರವಿಲ್ಲ. ಸದನ ಪಡೆದ ತೀರ್ಮಾನವನ್ನ ಹೊರಗಡೆ ಅಮಾನತ್ತು ವಾಪಾಸ್ ಪಡೆಯಲು ಯಾರಿಗೂ ಅಧಿಕಾರವಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಎಚ್ಚರಿಕೆಯಿಂದ ಇರಬೇಕಿತ್ತು. ಆದರೆ  ಇಲ್ಲಿ ಇವರೆಲ್ಲ ಎಡವಿದ್ದಾರೆ ಎಂದು ದೂರಿದರು. 

ಕಾರ್ಯದರ್ಶಿಗಳು ಸದನದ ಒಳಗೆ ವಾಪಾಸ್ ಪಡೆಯಬೇಕು ಎಂದು ಹೇಳಿದರೂ ಓವರ್ ರೂಲಿಂಗ್ ಮಾಡಿ ಅಮಾನತ್ತು ವಾಪಾಸ್ ಪಡೆದಿರುವುದು ಸರಿಯಲ್ಲ. ಅಶೋಕ್, ಸಿಎಂ, ಕಾನೂನು ಸಚಿವರು ನಾವಿದ್ದೇವೆ ಮಾಡಿ ಎಂದಿದ್ದಾರೆ. ಸದನದ ಭಾಗ ಆದವರು ಸದನಕ್ಕಿಂತ ಹೆಚ್ಚು ಹೇಗೆ ನಡೆದುಕೊಂಡಿದ್ದಾರೆ. ಸದನದಿಂದ ಉತ್ಪತ್ತಿಯಾದ ಇವರು. ಇವರಿಂದ ಸದನವಲ್ಲ. ಹಾಗಾಗಿ ನಿನ್ನೆ ತೆಗೆದುಕೊಂಡ ತೀರ್ಮಾನ ಸದನಕ್ಕೆ, ಸಂವಿಧಾನಕ್ಕೆ ಮಾಡಿರುವ ಅವಮಾನ ಎಂದು ದೂರಿದರು. 

 ಅರ್ಜೆಂಟಾಗಿ ಯಾಕೆ ತೀರ್ಮಾನಿಸಲಾಯಿತು? ಸದನ ಕರೆಯಲಾಗಿದೆಯಾ? ಶಾಸಕರಾಗಿ ಕರ್ತವ್ಯ ನಿರ್ವಹಿಸಬಹುದಾಗಿತ್ತು‌. ಸದನದ ಕಾರ್ಯಕಲಸಪಕ್ಕೆ ಅಮಾನತ್ತಾಗಿತ್ತು. ತುಟ್ಟಿಭತ್ಯೆ ಮಾತ್ರ ಅಮಾನತ್ತು ಶಾಸಕರಿಗೆ ನಷ್ಟವಾಗಿತ್ತು. ವಿಪಕ್ಷ ನಾಯಕರ ಒತ್ತಡಕ್ಕೆ ಮಣಿದು ಸರ್ಕಾರ ವಾಪಾಸ್ ಪಡೆಯಲಾಗಿದೆ. ಕ್ರಮ ಅನುಸರಿಸದೆ ಅಪಚಾರವಾಗಿದೆ. ಬ್ಯಾಡ್ ಪ್ರೊಸಿಡಿಂಗ್ ಆಗಿ ಮುಂದುವರೆಯಲಿದೆ. ಕೊನೆಯ ಸಾಲಿನಲ್ಲಿ ಘಟನೋತ್ತರ ಅನುಮತಿ ಪಡೆಯಲಾಗುವುದು ಎಂದು ಉಲ್ಲೇಖಿಸಲಾಗಿದೆ ಆದರೆ ಇದು ಬರೋದಿಲ್ಲ. ಇದು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು. ತಂದರೆ ಅಪಚಾರಚಾಗಲಿದೆ.  ಇದನ್ನ ವಿರೋಧಿಸುತ್ತೇನೆ ಎಂದರು. 

ಸಂವಿಧಾನದ ಆಶೆಯಕ್ಕೆ ಚ್ಯುತಿ ಬಾರದಂತೆ ಅಮಾನತ್ತುಗೊಂಡ ಶಾಸಕರ ಕರ್ತವ್ಯವನ್ನ ಜಾರಿ ಮಾಡಲು ಸಡಿಲ ಮಾಡಬಹುದಿತ್ತು. ಮುಂದಿನ ಸದನದಲ್ಲಿ ಅಮಾನತ್ತನ್ನ ಕೈಗೆ ತೆಗೆದುಕೊಂಡು ವಾಪಾಸ್ ಪಡೆಯಬೇಕಿತ್ತು. ಶಾಸಕರು ಕಾನೂನು ಬದ್ಧ ಅಮಾನತ್ತು ವಾಪಾಸ್ ಪಡೆಯುವರೆಗೂ ಸದನಕ್ಕೆ ಬರೊಲ್ಲ ಎಂದು 18 ಶಾಸಕರು ನಡೆದುಕೊಳ್ಳ ಬೇಕೆಂದು ಬುದ್ದಿವಾದ ಹೇಳಿದರು. 

ನಿಯಮ ಪಾಲಿಸದಿದ್ದರೆ ದಂಗೆಗಳಾಗುತ್ತದೆ. ಹಾಗಾಗಿ ನಿನ್ನೆಯ ತೀರ್ಮಾನ ಪುನರ್ ವಿಮರ್ಶೆಯಾಗಬೇಕು. ಸರಿಯಾದ ಕ್ರಮದಲ್ಲಿ ಅಮಾನತ್ತು ರದ್ದನ್ನ ಪಾಲಿಸಿ ಸದನಕ್ಕೆ ಒಳಗೆ ಹೋಗಿ. ದೀರ್ಘಾವಧಿ ಅಮಾನತ್ತು ಸರಿಪಡಿಸಲು ಸರಿಪಡಿಸಲು ಮತ್ತೊಂದು ತಪ್ಪುಮಾಡೋದಲ್ಲ. ಸದನದಲ್ಲಿಯೇ ಅಮಾನತ್ತು ವಾಪಾಸ್ ಪಡೆಯಬೇಕು ಎಂದರು. 

Lifting of suspension

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close