SUDDILIVE || SHIVAMOGGA
ತಿಂಗಳು ಒಳಗೆ ನಗರದ 35 ವಾರ್ಡ್ ಗಳ ಚರಂಡಿಗಳ ಹೂಳೆತ್ತಲು ಶಾಸಕರು ಸೂಚನೆ-MLAs instructed to clear the drains of 35 wards of the city within a month
ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಗೆ ನಗರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಯುದ್ದದ ರೂಪದಲ್ಲಿ ತಯಾರಿಯಾಗ ಬೇಕೆಂದು ಶಾಸಕ ಚೆನ್ನಬಸಪ್ಪ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕೆರೆ, ಚರಂಡಿ ಸೂಕ್ತ ರೀತಿಯಲ್ಲಿ ಸ್ವಚ್ಚಗೊಳಿಸುವಂತೆ. ಮಳೆ ನೀರು ಚರಂಡಿಯಲ್ಲೇ ಹರಿಯಲು ಹೂಳೆತ್ತಲು ಶಾಸಕರು ಸೂಚಿಸಿದ್ದು 35 ವಾರ್ಡ್ ಗಳ ಚರಂಡಿಗಳ ಹೂಳನ್ನ ಈ ತಿಂಗಳ ಒಳಗೆ ಹೂಳೆತ್ತಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ಹೂಳೆತ್ತಲು 10 ದಿನಗಳ ಕಾಮಗಾರಿ ನಡೆದಿದೆ. ಯುದ್ದೋಪಾದಿಗಳಲ್ಲಿ ಈ ಕಾಮಗಾರಿ ಮುಗಿಯಬೇಕು. ಈ ತಿಂಗಳ ಒಳಗೆ 35 ವಾರ್ಡ್ ಗಳಲ್ಲಿ ಗುರಿತಿಸಿರಯವ 245 ಪಾಯಿಂಟ್ ಗಳಲ್ಲಿ ಈ ತಿಂಗಳ ಒಳಗೆ ಡಿಶಿಲ್ಟ್ ಮಾಡಲು ಸೂಚಿಸಲಾಯಿತು. ಈ ಸಂಬಂಧ ನಾಳೆ ಬೆಳಿಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಪಾಲಿಕೆ ಇಂಜಿನಿಯರ್ ಗಳ ಜೊತೆ ಸಭೆ ನಡೆಸಿ ಹೂಳೆತ್ತುವ ಕೆಲಸ ನಡೆಯುತ್ತಿರುವ ಸ್ಪಾಟ್ ಗೆ ವಿಸಿಟ್ ಮಾಡುವುದಾಗಿ ಶಾಸಕರು ತೀರ್ಮಾನಿಸಿದರು
ಟಿಪ್ಪುನಗರದ ನಾಲ್ಕು ಮನೆಗಳ ತೆರವಿಗೆ ವಿಳಂಬ ಶಾಸಕರು ಗರಂ
ಟಿಪ್ಪುನಗರದಲ್ಲಿ ಚಾನೆಲ್ ನೀರಿನಲ್ಲಿ ಮಳೆ ನೀರು ಹರಿದು ಬರುವುದರಿಂದ ಇಲ್ಲಿನ ನಾಲ್ಕು ಮನೆಗಳ ತೆರವಿಗೆ ಈಗಾಗಲೇ ಅಧಿಕಾರಿಗಳಿಗೆ ಶಾಸಕ ಚೆನ್ನಬಸಪ್ಪ ಸೂಚಿಸಿದ್ದರೂ ಇಂಜಿನಿಯರ್ ವಿಭಾಗದವರು ಇನ್ನೂ ಕ್ರಮ ಕೈಗೊಳ್ಳದ ಬಗ್ಗೆ ಶಾಸಕರು ಸಭೆಯಲ್ಲಿಯೇ ಅಸಮಾದಾನ ವ್ಯಕ್ತಪಡಿಸಿದರು.
ಎಷ್ಟುದಿನ ಬೇಕು ಆ ಮನೆಗಳನ್ನ ತೆರವುಗೊಳಿಸಿ ಅವರಿಗೆ ಪರಿಹಾರ ನೀಡಲು. ಈ ಬಾರಿ ಮತ್ತೆ ಮಳೆಯಾದರೆ ಈ ನಾಲ್ಕು ಗಳು ಸೇರಿದಂತೆ ಹಲವೆಡೆ ಸಮಸ್ಯೆಯಾಗಲಿದೆ ಎಂದು ದೂರಿದರು. ಆಯುಕ್ತರೂ ಸಹ ಮನೆಗಳ ಪರಿಹಾರಕ್ಕೆ ಪುಟ್ ಅಪ್ ಮಾಡದೆ ಇರುವುದು ಎಷ್ಟು ದಿನಬೇಕು? ಬೇಗಮುಗಿಸಿ ಎಂದು ಸೂಚಿಸಿದರು.
ಸಣ್ಣ ನೀರಾವರಿ ಅಧಿಕಾರಿಗಳು ಸಭೆಗೆ ಕರೆಸಲು ಸೂಚಿಸಲಾಯಿತು. ಎಫೆಕ್ಟ್ ಏರಿಯಾಗೆ ಐದು ತಂಡ ರಚಿಸಲಾಗಿದೆ. 24 ಗಂಟೆಯಲ್ಲಿ ಸ್ಥಳಕ್ಕೆ ಧಾವಿಸಲು ರಚಿಸಲಾಗಿದೆ ಕಂದಾಯ, ವಿದ್ಯುತ್, ಕಾಮಗಾರಿ ಸೇರಿದಂತೆ 5 ಜನರ 10 ತಂಡವನ್ನ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶವನ್ನ ಹೊರತು ಪಡಿಸಿ ರಚಿಸಲಾಗಿದೆ.
ಆಡಳಿತ ವಿಭಾಗದ ಅಧಿಕಾರಿ ತುಷಾರ್ ಮಾತನಾಡಿ, ಮಳೆ ಅನಾಹುತಗಳಿಗೆ ಸಹಾಯವಾಣಿ ತೆರಯಲಾಗುತ್ತಿದೆ, ಜೆಸಿಬಿ ಟ್ರ್ಯಾಕ್ಟರ್ ಗಾಗಿ ವಿಶೇಷ ಅಧಿಕಾರಿಯನ್ನ ರಚಿಸಲಾಗಿದೆ. ನಾಲ್ಕು ಜನ ಎಇಇ ಇದ್ದಾರೆ. 11 ಜನ ಇಂಜಿನಿಯರ್ ಇದ್ದಾರೆ. ನೆರೆ ಸಂತ್ರಸ್ತರಿಗೆ ನೆರವಾಗಲು ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದರು.
ಕುಂತಲ್ಲೇ ಅಧಿಕಾರಿ ಅಸ್ವಸ್ಥ
ಪಾಲಿಕೆಯ ಅಧಿಕಾರಿಗಳ ಜೊತೆ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯ ಬಗ್ಗೆ ಸಭೆ ನಡೆಯುತ್ತಿದ್ದ ವೇಳೆಯಲ್ಲೇ ಅಧಿಕಾರಿಯೊಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಂದಾಯ ವಿಭಾಗದ ಎಆರ್ ಒ ಯಶವಂತ್ ಸಭೆ ನಡೆಯುತ್ತಿದ್ದ ವೇಳೆ ಕಿಟಾರ್ ಎಂದು ಕಿರುಚಿ ಅಸ್ವಸ್ಥಗೊಂಡಿದ್ದಾರೆ. ಎಸಿ ಅವರಿಗೆ ಆಗದ ಕಾರಣ ಈ ಅಸ್ವಸ್ಥತೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
MLAs instructed to clear the drains