ಡೀಸೇಲ್ ಕಳ್ಳರ ಬಂಧನ-Diesel thieves arrested

SUDDILIVE || SHIVAMOGGA

ಡೀಸೇಲ್ ಕಳ್ಳರ ಬಂಧನ-Diesel thieves arrested

Diesel, thieves

ಡಿಸೇಲ್ ಕಳ್ಳರ ಬಂಧನವಾಗಿದೆ. ಮೂರು ಲಾರಿಯಿಂದ 450ಲೀಟರ್ ಡಿಸೇಲ್ ಇಳಿಸಿದ್ದ ಮೂವರ ಕಳ್ಳರ ಬಂಧನವಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಪ್ರಶಾಂತ್ ಅವರ ಖಡಕ್ ಕಾರ್ಯಾಚರಣೆಯಲ್ಲಿ  ಶಿವಮೊಗ್ಗದ  ಸೋನು ಮತ್ತು ಸೈಯ್ಯದ್ ಹುಸೇನ್ ಯಾನೆ ಗಫಾರ್ ರನ್ನ ಬಂಧಿಸಲಾಗಿದೆ. 

 ಮೇ.20 ರಂದು ರಾತ್ರಿ ಶಿರಾಳಕೊಪ್ಪದ ವಿಜಯಲಕ್ಷ್ಮಿ ರೈಸ್ ಮಿಲ್ ನ ಆವರಣದಲ್ಲಿ ನಿಲ್ಲಿಸಿದ್ದ 03 ಲಾರಿಗಳ ಡಿಸೆಲ್ ಟ್ಯಾಂಕ್ ನಲ್ಲಿದ್ದ ಅಂದಾಜು 45,000/- ರೂ ಮೌಲ್ಯದ ಸುಮಾರು 450 ಲೀಟರ್ ಡಿಸೇಲ್ ನ್ನು ಕಳ್ಳತನ ಮಾಡಲಾಗಿದೆ ಎಂದು ಸೊರಬ ತಾಲ್ಲೂಕು ಕೋಲಗುಣಸಿ ವಾಸಿ ಹಾಗೂ ಲಾರಿ ಮಾಲೀಕ ಶ್ರೀ ವಿಕ್ರಂ ಭಟ್ ದೂರು ಸಲ್ಲಿಸಿದ್ದರು. 

 ಪ್ರಕರಣದಲ್ಲಿ ಕಳುವಾದ ಡೀಸೆಲ್ ಹಾಗೂ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್,  ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಅನಿಲ್ ಕುಮಾರ್ ಭೂಮರಡ್ಡಿ,  ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಎ. ಜಿ. ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಕೇಶವ ಕೆ.ಇ  ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ  ಸಂತೋಷ್ ಪಾಟೀಲ್ ಸಿಪಿಐ ಶಿಕಾರಿಪುರ ಟೌನ್ ವೃತ್ತ ರವರ ನೇತೃತ್ವದಲ್ಲಿ ಪ್ರಶಾಂತ್ ಕುಮಾರ ಟಿ ಬಿ, ಪಿ.ಎಸ್.ಐ ಶಿರಾಳಕೊಪ್ಪ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಸಿಬ್ಬಂಧಿಗಳಾದ ಸಿ.ಹೆಚ್.ಸಿ- ಸಂತೋಷಕುಮಾರ ಆರ್, ಸಿ.ಪಿ.ಸಿ- ರಾಕೇಶ್ ಜಿ ಮತ್ತು ಸಲ್ಮಾನ್ ಖಾನ್ ಹಾಜಿ ರವರುಗಳನ್ನೊ ಒಳಗೊಂಡ  ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 

ತನಿಖಾ ತಂಡವು ಪ್ರಕರಣದ ಆರೋಪಿತರಾದ 1) ಸೋನು, 26 ವರ್ಷ, ಟಿಪ್ಪು ನಗರ ಬಲಭಾಗ 05 ನೇ ಕ್ರಾಸ್, ಶಿವಮೊಗ್ಗ ಟೌನ್ ಮತ್ತು 2) ಸೈಯದ್ ಹುಸೇನ್ @ ಗಫಾರ್, 25 ವರ್ಷ,  ಬರ್ಮಪ್ಪ ನಗರ, ಶಿವಮೊಗ್ಗ ಟೌನ್ ಇವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 9,00,000/-  ರೂಗಳ ಟಾಟಾ ಇಂಟ್ರಾ ಗೂಡ್ಸ್ ವಾಹನ, ರೂ 15,000/-  ನಗದು ಮತ್ತು 30 ಲೀಟರ್ ಸಾಮರ್ಥ್ಯದ 05 ಖಾಲಿ ಕ್ಯಾನ್ ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Diesel thieves arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close