SUDDILIVE || SHIVAMOGGA
ಮೆಕ್ಕೆ ಜೋಳ ಕಳವು-ಆರೋಪಿಗಳ ಬಂಧನ-Maize theft - accused arrested
ಕ್ವಿಂಟಾಲ್ ಗಟ್ಟಲೆ ಮೆಕ್ಕೆ ಜೋಳವನ್ನ ಕಳುವು ಮಾಡಿದ ಆರೋಪಿಗಳನ್ನ ಶಿರಾಳಕೊಪ್ಪದ ಪಿಎಸ್ಐ ಪ್ರಶಾಂತ್ ನೇತೃತ್ವದ ತನಿಖಾ ತಂಡ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ.25 ರಂದು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಣಸೋಗಿ ಗ್ರಾಮದ ಗೋಪಾಲಪ್ಪ, ಕೊಳಗಿ ಗ್ರಾಮದ ಸಂದೀಪ ಮತ್ತು ಕೊಳಗಿ ತಾಂಡ ಗ್ರಾಮದ ಶಿವಕುಮಾರ ರವರು ಒಣಗಿಸಲು ಹಾಕಿದ್ದ ಸುಮಾರು 25 ಕ್ವಿಂಟಾಲ್ ತೂಕದ ಹಸಿ ಮೆಕ್ಕೆ ಜೋಳವನ್ನು ಕಳವು ಮಾಡಿರುವ ಘಟನೆ ಶಿರಾಳಕೊಪ್ಪ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಎ. ಜಿ. ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಕೇಶವ ಕೆ.ಇ ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ಸಂತೋಷ್ ಪಾಟೀಲ್ ಸಿಪಿಐ ಶಿಕಾರಿಪುರ ಟೌನ್ ವೃತ್ತ ರವರ ನೇತೃತ್ವದಲ್ಲಿ ಪ್ರಶಾಂತ್ ಕುಮಾರ ಟಿ ಬಿ, ಪಿ.ಎಸ್.ಐ ಶಿರಾಳಕೊಪ್ಪ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಸಿಬ್ಬಂಧಿಗಳಾದ ಸಿ.ಹೆಚ್.ಸಿ- ಸಂತೋಷಕುಮಾರ ಆರ್, ಸಿ.ಪಿ.ಸಿ- ರಾಕೇಶ್ ಜಿ ಮತ್ತು ಸಲ್ಮಾನ್ ಖಾನ್ ಹಾಜಿ ರವರುಗಳನ್ನೊ ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ತನಿಖಾ ತಂಡವು ಪ್ರಕರಣದ ಆರೋಪಿತರಾದ 1) ನವೀನ, 21 ವರ್ಷ, ಸೀತೆಕೊಂಡ ಗ್ರಾಮ, ಹಿರೇಕೆರೂರು ತಾ||, ಹಾವೇರಿ ಜಿಲ್ಲೆ ಮತ್ತು 2) ರಾಜೇಂದ್ರ, 20 ವರ್ಷ, ಆಪಿನಕೊಪ್ಪ, ಹಿರೇಕೆರೂರು ತಾ||, ಹಾವೇರಿ ಜಿ|| ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಅಂದಾಜು ಮೌಲ್ಯ 55,000/- ರೂಗಳ 25 ಕ್ವಿಂಟಾಲ್ ಹಸಿ ಜೋಳ ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 9,00,000/- ರೂಗಳ ಅಶೋಕ ಲೈ ಲ್ಯಾಂಡ್ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
Maize theft - accused arrested