ಮೀಯಾಝಾಕೀ ಮಾವಿನ ಹಣ್ಣಿಗೆ ಸಕ್ಕತ್ ಡಿಮ್ಯಾಂಡ್- Miyazaki mangoes

SUDDILIVE || SHIVAMOGGA

ಮೀಯಾಝಾಕೀ ಮಾವಿನ ಹಣ್ಣಿಗೆ ಸಕ್ಕತ್ ಡಿಮ್ಯಾಂಡ್- Miyazaki mangoes are in high demand

Miyazaki, Mangoes

ಶಿವಮೊಗ್ಗದ ವಿನೋಬನಗರದಲ್ಲಿರುವ ಎಪಿಎಂಸಿ ಯಾರ್ಡ್ ಪಕ್ಕದಲ್ಲಿರುವ ಹಾಪ್ ಕಾಮ್ಸ್ ಜಾಗದಲ್ಲಿ ಮಾವು ಹಾಗೂ ಹಲಸು ಹಣ್ಣುಗಳ ಮೇಳ ಇಂದಿನಿಂದ ಆರಂಭಗೊಂಡಿದೆ. 

ಮಾವು ಮತ್ತು ಹಲಸು ಮೇಳವನ್ನು  ಉಸ್ತುವಾರಿ ಸಚಿವ ಮಧುಬಂಗಾರಪ್ಪ ಉದ್ಘಾಟಿಸಿದ್ದಾರೆ. ಮಧುಬಂಗಾರಪ್ಪಗೆ  ಪರಿಷತ್ ಸದಸ್ಯರುಗಳಾದ ಡಾ. ಧನಂಜಯಸರ್ಜಿ ಹಾಗೂ ಬಲ್ಕಿಸ್ ಭಾನು, ಹಾಫ್ ಕಾಮ್ಸ್ ಅಧ್ಯಕ್ಷ ಜಿ ವಿಜಯಕುಮಾರ್ ಸಾಥ್ ನೀಡಿದ್ದಾರೆ. 

ಇಙದಿನಿಂದ ಮೂರು ದಿನಗಳ ವರೆಗೆ ಹಾಫ್ ಕಾಮ್ಸ್ ವತಿಯಿಂದ ನಡೆಯುತ್ತಿರುವ ಮೇಳದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ತಂದು ಹಣ್ಣುಗಳ ಮಾರಟ ಹಾಗು ಪ್ರದರ್ಶನಕ್ಕಿಡಲಾಗಿದೆ. ಎಲ್ಲರ ಗಮನವನ್ನ ಈ   ಮೀಯಾಝಕೀ ಮಾವಿನ ಹಣ್ಣು ಸೆಳೆಯುತ್ತಿದೆ.  ಎರಡು ವರೆ ಸಾವಿರ ಬೆಲೆ ಮೀಯಾಝಾಕೀ ಮಾವಿನ ಹಣ್ಣಿಗೆ ಮೇಳದಲ್ಲಿ ಸಕ್ಕತ್ ಡಿಮ್ಯಾಂಡ್ ಉಂಟಾಗಿದೆ. 

ವಿದೇಶಗಳಲ್ಲಿ ಭಾರೀ ಬೇಡಿಕೆ ಇರುವ ಮೀಯಾಝಾಕಿ ಮಾವಿನ ಹಣ್ಣು ಶಿವಮೊಗ್ಗದ ಹಣ್ಣುಗಳ ಮೇಳದಲ್ಲಿ ಲಭ್ಯವಿದೆ. 

Miyazaki mangoes  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close