SUDDILIVE || KUMSI
ಕೋಣೆಹೊಸೂರು-ತುಪ್ಪೂರು ಬಳಿ ರಸ್ತೆ ಅಪಘಾತ-ತಾಯಿ ಮಗು ಸಾವು- Mother and child died in road accident near Konehosur-Thuppur
ಶಿವಮೊಗ್ಗ ಸಮೀಪದ ಕೋಣೆ ಹೊಸೂರು-ತುಪ್ಪೂರು ಬಳಿ ರಸ್ತೆ ಅಪಘಾತ ಸಂಭವಿಸಿದ್ದು ತಾಯಿ ಮತ್ತು ಮೂರು ವರ್ಷದ ಮಗು ಸಾವನ್ನಪ್ಪಿದರೆ, ಪತಿ ಮತ್ತೋರ್ವ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತರೀಕೆರೆಯ ಬುಕ್ಕಂಬೂದಿಯಿಂದ ಸಾಗರಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಲ್ಲಿ ಅಸ್ಮಾಭಾನು (30) ಮತ್ತು ಮೂರು ವರ್ಷದ ಮಗು ಮೊಹ್ಮದ್ ಖಬೀರ್ ಸಾವುಕಂಡಿದ್ದಾರೆ.
ದ್ವಿಚಕ್ರವಾಹನವನ್ನ ಓಡಿಸುತ್ತಿದ್ದ ಖಲಂದರ್ ಪಾಶ ಅವರಿಗೆ ಏಕಾಏಕಿ ಹಿಂಬದಿಯಲ್ಲಿದ್ದ ಬಸ್ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ಮೂರು ವರ್ಷದ ಮಗು ಮೊಹ್ಮದ್ ಖಬೀರ್ ಸಾವನ್ನಪ್ಪಿದರೆ. ಸಾಗರದಲ್ಲಿ ಪ್ರಾರ್ಥನಾ ಮಂದಿರಕ್ಕೆ ನಾಲ್ವರು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು.
ತಾಯಿ ಅಸ್ಮಾ ಭಾನು, ತಂದೆ ಖಲಂದರ್ ಮತ್ತೋರ್ವ 6 ವರ್ಷದ ಸಹೋದರ ಗಂಬೀರ ಗಾಯವಾಗಿದ್ದು ತಕ್ಷಣ ಆನಂದಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಅಸ್ಮಭಾನು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ.
6 ವರ್ಷದ ಗಂಡು ಮಗು ಮತ್ತು ಖಲಂದರ್ ಅವರನ್ನ ಮೆಗ್ಗಾನ್ ಗೆ ಕರೆತರಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಖಲಂದರ್ ಗೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕುಂಸಿ ಠಾಣ ವ್ಯಾಪ್ತಿಯಲ್ಲಿ ದಾಖಲಾಗಿದೆ.
Mother and child died in road accident