ದುರ್ಗಿಗುಡಿ ಶಾಲೆಯಲ್ಲಿ ಅವಾಂತರ-ಶಿಕ್ಷಣ ಸಚಿವರು ಗಮನ ಹರಿಸುವಂತೆ ಸಂಘಟನೆ ಮನವಿ-Organization appeals to Education Minister

SUDDILIVE ||SHIVAMOGGA

ದುರ್ಗಿಗುಡಿ ಶಾಲೆಯಲ್ಲಿ ಅವಾಂತರ-ಶಿಕ್ಷಣ ಸಚಿವರು ಗಮನ ಹರಿಸುವಂತೆ ಸಂಘಟನೆ ಮನವಿ-Organization appeals to Education Minister to pay attention to unrest at Durgigudi school

Education, Minister

ಶಿವಮೊಗ್ಗ ನಗರ ದುರ್ಗಿಗುಡಿಯಲ್ಲಿರುವ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೌಚಾಲಯ ಮತ್ತು ಕುಡಿಯುವ ನೀರು,  ಆಟದ ಮೈದಾನ ಕ್ಕೆ ಸಂಬಂಧಪಟ್ಟಂತೆ ಭಾರಿ ದೊಡ್ಡ ಮಟ್ಟದಲ್ಲಿ ಅವ್ಯವಸ್ಥೆಯಿದ್ದು, ಸಹ ಹಲವು ಬಾರಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಮನವಿ ಮಾಡಿದರೂ ಅವ್ಯವಸ್ಥೆ ಸರಿಪಡಿಸದ ಹಿನ್ನೆಲೆಯಲ್ಲಿ ಸಂಘಟನೆ ಶಾಲೆ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ. 

ಶಾಲೆಯಲ್ಲಿ 4 ಶೌಚಾಲಯಗಳ ಯೂನಿಟ್ ಗಳನ್ನು ಮಾಡಿಕೊಡುವಂತೆ ಡಿಸಿ ಮತ್ತು ಡಿಡಿಪಿಐಗೆ ಪ್ರಸ್ತಾಪಿಸಲಾಗಿತ್ತು.  ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಕೂಗಳತೆಯಲ್ಲಿ ಇರುವ ಸರ್ಕಾರಿ ಶಾಲೆಯ ಇಂತಹ ದೊಡ್ಡ ಅವ್ಯವಸ್ಥೆಯನ್ನು ಸಾರ್ವಜನಿಕ ವಲಯದಲ್ಲಿ ಟೀಕಿಸುವುದಷ್ಟೇ ಅಲ್ಲದೆ ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಯಿಂದ ಹಲವು ಬಾರಿ ಮೌಕಿಕವಾಗಿ ಹೇಳಲಾಗಿತ್ತು.  

ಜಿಲ್ಲಾ ಸಚಿವರು ಈ ಶಾಲೆಗೆ ಭೇಟಿ ನೀಡುವುದರ ಮೂಲಕ ಇಲ್ಲಿನ ಅವ್ಯ ವಸ್ಥೆಗೆ ಅಂತ್ಯವನ್ನು ಹಾಡುವುದರ ಜೊತೆಗೆ ಶಾಲೆಯ ಹೆಚ್ಚಿನ ಏಳಿಗೆಗೆ ಶ್ರಮಿಸಬೇಕು. ಶಾಲೆಯಲ್ಲಿ ಊಟದ ವ್ಯವಸ್ಥೆ ಇಲ್ಲದೆ ಓಡಾಡುವ ಜಾಗದಲ್ಲಿ ಮಕ್ಕಳು ಕೂತು ಊಟವನ್ನು ಮಾಡುತ್ತಿದ್ದಾರೆ.  ಅದನ್ನು ಸಹ ಸಚಿವರು ಬಂದು ಶಾಲೆ ನಡೆಯುವ ಸಂದರ್ಭದಲ್ಲಿ ಪರಿಶೀಲಿಸಿದರೆ ಅಲ್ಲಿನ ವಾಸ್ತವ ಅರಿವಾಗಲಿದೆ.   ರಾಜ್ಯದಲ್ಲಿ 4 ಆಂಗ್ಲ ಮಾಧ್ಯಮ ಸರ್ಕಾರದಿಂದ ನಡೆಸುವ ಶಾಲೆಗಳಲ್ಲಿ ಮೂರು ಶಾಲೆಗಳು ಮುಚ್ಚಲ್ಪಟ್ಟಿದ್ದು  ಶಿವಮೊಗ್ಗದ ದುರ್ಗಿಗುಡಿ ಶಾಲೆ ಒಂದೆ ಉಳಿದಿರುತ್ತದೆ ಖಾಸಗಿ ಶಾಲೆಯವರ ಭರಾಟೆಯಲ್ಲಿ800 ಬಡ ಮಕ್ಕಳಿಗೆ ಆಂಗ್ಲ ಭಾಷೆಯ ಸೊಗಡನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವ ದುರ್ಗಿಗುಡಿ ಶಾಲೆಗೆ ಹೆಚ್ಚಿನ ಅನುದಾನ ಮತ್ತು ಸಹಾಯ ಹತ್ತವನ್ನು ಸರ್ಕಾರದ ವತಿಯಿಂದ ಸಚಿವರು ತಂದು ಮಾಡಿಕೊಡಬೇಕು ಎಂದು ಸಂಘಟನೆ ಆಗ್ರಹಿಸಿದೆ 

ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಮತ್ತು ಕ್ಲರ್ಕ್ ಮತ್ತು ಡಿ ದರ್ಜೆ ನೌಕರರು ಹಾಗೂ ಪಿಟಿ ಟೀಚರ್ ಇನ್ನು ನೇಮಕಾತಿ ಮಾಡಿರುವುದಿಲ್ಲ ಇಷ್ಟು ಹೆಸರಾಂತ ಶಾಲೆಗೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಮತ್ತು ಸರ್ಕಾರದ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪನವರು ಹೆಚ್ಚಿನ ಒತ್ತನ್ನು ಕೊಡುವಂತೆ ಕೊರಿದೆ. 

Organization appeals to Education Minister

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close