SUDDILIVE || SHIVAMOGGA
ಮಹಿಳಾ ಪೊಲೀಸರಿಂದ ದಬ್ಬಾಳಿಕೆ? ಸಂಘಟನೆ ರಾಜ್ಯಾಧ್ಯಕ್ಷರಿಂದ ಎಸ್ಪಿಗೆ ದೂರು-Oppression by women police? Organization's state president files complaint with SP
ಶಿವಮೊಗ್ಗದ ಬೆಕ್ಕಿನಕಲ್ಮಠದ ಎದುರಿಗೆ ಕೂಲಿ ಕಾರ್ಮಿಕನ ವಾಹನವನ್ನ ಪೊಲೀಸರು ವಶಕ್ಕೆ ಪಡೆದಿದ್ದು ಇದರ ವಿರುದ್ಧ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತಕಾರ್ಮಿಕರ ಸಂಘ ಪೊಲೀಸ್ ನವರು ದುರುದ್ದೇಶ ಪೂರಕವಾಗಿ ವಾಹನವನ್ನ ಪಡೆದಿರುವುದಾಗಿ ಎಸ್ಪಿಗೆ ದೂರು ನೀಡಿದ್ದಾರೆ.
ಬೆಕ್ಕಿನ ಕಲ್ಮಠದ ಎದುರು ಕೂಲಿ ಕಾರ್ಮಿಕರನ್ನ ಕರೆದುಕೊಂಡು ಹೋಗಲು ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬೈಕ್ ನ್ನ ಬಿಟ್ಟಿದ್ದು, ಅಲ್ಲಿಗೆ ಬಂದ ಕೋಟೆ ಪೊಲೀಸ್ ಠಾಣೆಯ ಮಹಿಳಾ ಅಧಿಕಾರಿಯೊಬ್ಬರು ದೌರ್ಜನ್ಯದಿಂದ ಬೈಕ್ ಮಾಲೀಕನ ಕೀ ಪಡೆದು ಹೋಮ್ ಗಾರ್ಡ್ ಮೂಲಕ ಬೈಕ್ ನ್ನ ವಶಕ್ಕೆ ಪಡೆದು ಠಾಣೆಗೆ ತೆಗೆದುಕೊಂಡು ಹೋಗಿರುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷ ದೇವು ಎಸ್ಪಿಗೆ ಮನವಿ ಮಾಡಿದ್ದಾರೆ.
ಈ ಹಿಂದೆ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಅವರು ಖಾಸಗಿ ಸಿಟಿ ಬಸ್ ಗಳ ಹಾರನ್ ವಿಚಾರದಲ್ಲಿ ನಡೆದುಕೊಂಡ ರೀತಿಯನ್ನ ಇದೇ ಸಂಘಟನೆ ಬಲವಾಗಿ ಖಂಡಿಸಿತ್ತು. ಈ ವಿಚಾರವನ್ನೇ ತಲೆಯಲ್ಲಿ ಇಟ್ಟುಕೊಂಡು ಸುಖಾಸುಮ್ಮನೆ ತೊಂದರೆ ಕೊಡುತ್ತಿರುವುದಾಗಿ ಸಂಘಟಬೆಯ ರಾಜ್ಯಾಧ್ಯಕ್ಷ ಎಸ್ಪಿಗೆ ಮನವಿ ನೀಡಿದ್ದಾರೆ.