ಬಸ್ ನಿಲ್ದಾಣದಲ್ಲಿ 50 ಸಾವಿರ ರೂ. ಹಣ ಕಳೆದುಕೊಂಡ ಪ್ರಯಾಣಿಕ-Passenger loses

 Suddilive || Shivamogga 

 ಬಸ್ ನಿಲ್ದಾಣದಲ್ಲಿ 50 ಸಾವಿರ ರೂ. ಹಣ ಕಳೆದುಕೊಂಡ ಪ್ರಯಾಣಿಕ-Passenger loses Rs. 50,000 at bus stand

Passanger, losses


ಹೊನ್ನಾಳಿಯಲ್ಲಿದ್ದ ಸ್ನೇಹಿತನಿಗೆ ಕೃಷಿ ಪಂಪ್ ಸೆಟ್ ಖರೀದಿಸಲು ಅನುಕೂಲ ಮಾಡಿಕೊಡಲು ಮುಂದಾಗಿದ್ದ ಶಿವಮೊಗ್ಗ ನಿವಾಸಿಗೆ ಶಾಕ್ ಆಗಿದೆ.  ಕೆಎಸ್ ಆರ್ ಟಿ ಸಿ ಬಸ್ ನಲ್ಲಿ  50 ಸಾವಿರ ರೂ. ಹಣ ಕಳೆದುಕೊಂಡ ಘಟನೆ ನಡೆದಿದೆ. 

ಕೆಹೆಚ್ ಬಿ ಕಾಲೋನಿ ನಿವಾಸಿ ಪರಮೇಶ್ವರಪ್ಪ ಎಂಬುವರು ಹೊನ್ನಾಳಿಯಲ್ಲಿರುವ ಸಂಬಂಧಿಕ ಕೃಷಿ ಪಂಪ್ ಸೆಟ್ ಖರೀದಿಸಲು ಹಣಬೇಕೆಂದು ಹೇಳಿದ್ದರಿಂದ ಬ್ಯಾಂಕ್ ನಲಿ.. 50,000/-ರೂ ಹಣವನ್ನು ಡ್ರಾ ಮಾಡಿಕೊಂಡು ಬಂದಿದ್ದರು. 

ಹೊನಾಳಿಗೆ ಹೋಗಲು ಶಿವಮೊಗ್ಗ, ಕೆ.ಎಸ್.ಆರ್.ಟಿ.ಸಿ. ಬಸ್ ಸ್ಯಾಂಡ್ ಗೆ ಬಂದು ದಾವಣಗೆರೆ ಪಾಟ್ ಫಾರಂ ನಲಿ ಬಸ್ ಗಾಗಿ ಕಾಯುತ್ತಿದಾಗ ಶಿವಮೊಗ್ಗ ರಾಣೆಬೆನ್ನೂರು ಬಸ್ ಬಂದಿದಡ, ಜನ ಜಾಸ್ತಿ ಇದ್ದ ಕಾರಣ, ರಶ್ ಆಗಿದ್ದರಿಂದ  ಬೇಗ ಬಸ್ ಹತ್ತಿ ಶೀಟ್ ಹಿಡಿದುಕೊಂಡು ಕುಳಿತುಕೊಂಡಿದ್ದರು. 

 ಬಸ್ ಬಸ್ ಸ್ಟ್ಯಾಂಡ್ ನಿಂದ ಹೊರಟು ಅಮೀರ್ ಅಹಮದ್ ಸರ್ಕಲ್ ಹತ್ತಿರ ಹೋಗುತ್ತಿದಾಗ ಸಮಯ  ಟಿಕೇಟ್ ಮಾಡಿಸಲು ತನ್ನ ಪ್ಯಾಂಟ್ ಜೇಬಿನಲಿ..ದ್ದ ಹಣವನ್ನು ತೆಗೆಯಲು ಹೋದಾಗ ಪ್ಯಾಂಟ್ ಎಡಜೇಬಿನಲಿಟ್ಟಿದ್ದ 50 ಸಾವಿರ ಹಣ ಇರಲಿಲ್ಲ. 

ತಕ್ಷಣ ಗಾಭರಿಯಾಗಿ ಅಮೀರ್ ಅಹಮದ್ ಸರ್ಕಲ್ ಹತ್ತಿರ ಬಸ್ ಇಳಿದುಕೊಂಡು ವಾಪಾಸ್ ಬಸ್ ಸ್ಟ್ಯಾಂಡ್ ಗೆ ಬಂದು ಎಲ್ಲಾ ಕಡೆ ಹುಡುಕಿದರೂ ಹಣ ಪತ್ತೆಯಾಗಿಲ್ಲ. ಬಸ್ ಹತ್ತುವ ಸಮಯದಲಿ ಜನ ಜಾಸ್ತಿ ಇದ್ದು, ರಶ್ ಇದ್ದ ಸಮಯದಲಿ. ತನ್ನ ಪ್ಯಾಂಟ್ ಜೇಬಿನಲಿ..ದ 50,000/-ರೂ ನಗದುಹಣ ಕಳುವಾಗಿದೆ ಎಂದು ಪರಮೇಶ್ವರಪ್ಪ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರು ದಾಖಲಿಸಿದ್ದಾರೆ.  

Passenger loses

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close