Suddilive// Shivamogga
ಕಸಾಪದ ಬೈಲಾ ತಿದ್ದುಪಡಿ ಮೂಲಕ ಸರ್ವಾಧಿಕಾರ ಪಡೆಯುವುದಕ್ಕೆ ಬ್ರೇಕ್ ಹಾಕಿ-ಹೊನ್ನಾಳಿ ಚಂದ್ರು-Put a brake on gaining dictatorship through Baila amendment- Honnali Chandru
ಕನ್ಬಡ ಸಾಹಿತ್ಯ ಕೇಂದ್ರ ಪರಿಷತ್ ಕಸಾಪದ ತಿದ್ದಿಪಡಿ ಮಾಡಲುದ್ದೇಶಿಸಿದ್ದು, ತಿದ್ದುಪಡಿಯ ಮೂಲಕ ರಾಜ್ಯಾಧ್ಯಕ್ಷರು ಸರ್ವಾಧಿಕಾರಿಯ ಅಧಿಕಾರ ಪಡೆಯುತ್ತಿರುವುದಾಗಿ ಪರಿಷತ್ ನ ಅಜೀವ ಸದಸ್ಯತ್ವ ಪಡೆದ ಹೊನ್ಬಾಳಿ ಚಂದ್ರು ಆಕ್ಷೇಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು ಬೈಲಾ ತಿದ್ದುಪಡಿಗೆ ನಮ್ಮಆಕ್ಷೇಪವಿಲ್ಲ. ಆದರೆ ಸರ್ವಾಧಿಕಾರಿ ಅಧಿಕಾರ ಪಡೆಯುವ ಹುನ್ನಾರ ಇದೆ. ಏನೇ ಅಧಿಕಾರವನ್ನ ಕಾರ್ಯಕಾರಿ ಸಮಿತಿ ನಿರ್ಧರಿಸಬೇಕು. ಜೊತೆಗೆ ಕೇಂದ್ರ ಪರಿಷತ್ ನಲ್ಲಿ ನಡೆದ ಆರ್ಥಿಕ ವ್ಯವಹಾರ ತನಿಖೆ, ಆಡಳಿತಾಧಿಕಾರಿ ನೇಮಕ ಆಗಬೇಕೆಂದು ಆಗ್ರಹಿಸಿದರು.
ಎಲ್ಲಾ ವಿಷಯವನ್ನ ಕಾರ್ಯಕಾರಿ ಸಮುತಿ ಮಾಡಬೇಕು. ತಾಲೂಕು, ಜಿಲ್ಲಾ, ಗಡಿನಾಡು ಘಟಕ, ಗಡಿನಾಡು ಘಟಕ 250 ಕ್ಕೂ ಹೆಚ್ಚು ಘಟಕಗಳಿವೆ. ಇವುಗಳಿಗೆ ಸೋತ ಅಭ್ಯರ್ಥಿಯನ್ನ ತಂದು ನೇಮಿಸುವ ಅಪಾಯವಿದೆ. ಹಾಗಾಗಿ ಕೇಂದ್ರ ಪರಿಷತ್ ನ ರಾಜ್ಯಾಧ್ಯಕ್ಷರಿಗೆ ಅಧಿಕಾರ ನೀಡುವ ಬದಲು ಕಾರ್ಯಕಾರಿ ಸಮಿತಿಗೆ ಅಧಿಕಾರವಿರಬೇಕು ಎಂದು ಆಗ್ರಹಿಸಿದರು.
ರಾಷ್ಟ್ರಪತಿ ರಾಜ್ಯ ಪಾಲರಿಗೆ ಸರ್ವಾಧಿಕಾರದ ಅಧಿಕಾರವಿದೆ. ಅದು ಬಿಟ್ಟರೆ ಎಲ್ಲವೂ ವಿಕೇಂದ್ರಿಕರಣವಿದೆ. ಆದರೆ ಕಸಾಪದಲ್ಲಿ ಕೇಂದ್ರ ಪರಿಷತ್ ನ ರಾಜ್ಯಾದ್ಯಕ್ಷರಿಗೆ ಸಮಿತಿ ನೇಮಕ, ಸಮಿತಿ ಅಧ್ಯಕ್ಷರ ನೇನಕದ ಅಧಿಕಾರ ನೀಡುವುದು ಸರಿಯಲ್ಲ. ಎಲ್ಲಾ ಸದಸ್ಯರ ಗಮನಕ್ಕೆ ತಂದು ತಿದ್ದುಪಡಿ ಮಾಡಬೇಕು ಎಂದರು.
ಜಿಲ್ಲಾ ಘಟಕ ಕ್ಷೇತ್ರ ಘಟಕ ಹೋಬಳಿ ಸೇರಿದಂತೆ ಎಲ್ಲಾ ಘಟಕದಲ್ಲಿ ರಾಜ್ಯಧ್ಯಕ್ಷರಿಗೆ ಅಧಿಕಾರವೆಂದು ಬದಲಾಯಿಸಲಾಗಿದೆ. ನಾಮ ನಿರ್ದೇಶನ ಕಾರ್ಯ ನಿರ್ದೇಶದ ತೀರ್ಮಾನವಾಗಬೇಕು. ಕೇಂದ್ರ ಘಟಕ ವಿವಿಧ ಘಟಕಗಳು ಕಳುಹಿಸುವ ಅನುಬಂಧ ಕ್ಕೆ ಅನುಮೋದಿಸಬೇಕು.ವಿಲ್ಲವಾದಲ್ಲಿ ವಿವರಣೆ ಕೇಳಬೇಕು. ನಂತರ ಅದನ್ನ ಒಪ್ಪಬೇಕು. ಇದು ವಿಕೇಂದ್ರೀಕರಣದ ನಿಯಮ ಹೀಗೆ ನಡೆಯಬೇಕು. ಆದರೆ ಇಲ್ಲಿ ರಾಜ್ಯಾಧ್ಯಕ್ಷರಿಗೆ ಅಧಿಕಾರ ನೀಡುವುದು ಅಪಾಯವೆಂದರು.
ಸಭೆಗೆ ಗೈರು ಆದರೆ ಕೈಬಿಡುವ ಅಪಾಯವಿದೆ. ಒಂದು ವರ್ಷ ಕಸಾಪದ ಕೇಂದ್ರ ಪತಿಷತ್ ಸದಸ್ಯರು ಗೈರಾಗಬಹುದಾಗಿದೆ. ಆದರೆ ಇತರೆ ಘಟಕದ ಸದಸ್ಯರು ಮೂರು ಸಭೆಗೆ ಗೈರಾದರೆ ಅವರ ಸದಸ್ಯತ್ವ ರದ್ದಾಗಲಿದೆ ಇದು ಸರಿಯಲ್ಲ ಎಂದ ಅವರು ನಾಡೋಜಾ ಎಂದು ರಾಜ್ಯಾಧ್ಯಕ್ಷರು ಎಲ್ಲೂ ಹೇಳಿಕೊಳ್ಳುವಂತಿಲ್ಲ. ಸರ್ಕಾರ ಒಂದು ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಲ್ಲಿ ಡಾಕ್ಟರೇಟ್, ಸಚಿವ ಸ್ಥಾನವನ್ನ ಬಹಿರಂಗ ಪಡಿಸಬಾರದು ಎಂದು ಇದೆ.
ಆದರೆ ನಾಡೋಜ ಎಂದು ರಾಜ್ಯಾಧ್ಯಕ್ಷರು ಲೆಟರೆಡ್ ಮತ್ತು ವಿಸಿಟಿಂಗ್ ಕಾರ್ಡ್ ನಲ್ಲಿ ನಮೂದಿಸಿದ್ದಾರೆ. ಗೌರವ ಪೂರಕ ಹುದ್ದೆ ಇದಾಗಿದೆ. ರಾಜ್ಯ ಸಭೆ ಸ್ಥಾನಮಾನವನ್ನ ಬಳಸಬಾರದು. ರಾಜ್ಯಾಧ್ಯಕ್ಷರು ಪೆಟ್ರೋಲ್ ಬಳಕೆಗೆ ದಿನಕ್ಕೆ 5 ಸಾವಿರ ರೂ. ಪಡೆಯಬಹುದು ಎಂದು ಕಾರ್ಯಕಾರಿ ಸಮಿತಿ ಒಪ್ಪಿದೆ ಎಂದು ಹೇಳಿಕೊಂಡಿದ್ದಾರೆ.
ಇದರ ಬಗ್ಗೆ ರಾಜ್ಯಾಧ್ಯಕ್ಷರು ಕಾರ್ಯಕಾರಿ ಸಮಿತಿಯ ಒಪ್ಪಿಗೆ ಪಡೆದು ಪೆಟ್ರೋಲ್ ಕರ್ಚು ಮಾಡಬೇಕು. ಅವರ ಮಗಳು ರಂಗ ಪ್ರವೇಶದ ಹಣವನ್ನ ಸಾಹಿತ್ಯ ಪರಿಷತ್ ಖರ್ಚಿನಲ್ಲಿ ನಡೆದಿರುವ ಆರೋಪವಿದೆ. ಇದರ ಬಗ್ಗೆ ಅಧ್ಯಕ್ಷರು ಸ್ಪಷ್ಟೀಕರಣ ನೀಡಬೇಕು. ಸಾಹಿತ್ಯ ಪರಿಷತ್ ನಿಂದ ಕಾರ್ಯಕ್ರಮ ನಡೆದಿದ್ದರೆ ಅದರ ಹಣವನ್ನ ರಾಜ್ಯಾಧ್ಯಕ್ಷರು ಭರಿಸಬೇಕು ಎಂದು ಆಗ್ರಹಿಸಿದರು.
ಸಾಹಿತ್ಯ ಪರಿಷತ್ ನ ನೇಮಕಾತಿ, ಮುದ್ರಣ ಸಿಸಿ ಟಿವಿ ಅಳವಡಿಕೆಯ ಟೆಂಡರ್ ಮತ್ತು, ವಿದೇಶ ಪ್ರಯಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು. ಕೇಂದ್ರ ಪರಿಷತ್ ನ ಬಗ್ಗೆ ಉನ್ನತ ತನಿಖೆ ನಡೆಸಬೇಕು. ರಾಜ್ಯಾಧ್ಯಕ್ಷರನ್ನ ಬದಲಾಯಿಸಿ ಆಡಳಿತ ಅಧಿಕಾರಿಯನ್ನ ನೇಮಿಸುವಂತೆ ಚಂದ್ರಶೇಖರ್ ಆಗ್ರಹಿಸಿದರು.
Put a brake on gaining dictatorship