ಸೊರಬದಲ್ಲಿ ಮಳೆ ನಿಂತು ಸಾರ್ವಜನಿಕರಿಗೆ ತೊಂದರೆ-ಪ್ರಭು ಮೇಸ್ತ್ರಿ ಪರಿಶೀಲನೆ-Prabhu Maestri inspects

Suddilive || Soraba

ಸೊರಬದಲ್ಲಿ ಮಳೆ ನಿಂತು ಸಾರ್ವಜನಿಕರಿಗೆ ತೊಂದರೆ-ಪ್ರಭು ಮೇಸ್ತ್ರಿ ಪರಿಶೀಲನೆ-Rain causing inconvenience to the public - Prabhu Maestri inspects

Prabhu Mistri, inspects

ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಎಡಬಿಡದೇ ಸುರಿದ ಮಳಿಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಪ್ರದೇಶಗಳಿಗೆ ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದ ಮುಂಭಾಗ, ಸಾಗರ ರಸ್ತೆಯ ಲಯನ್ಸ್ ಕ್ಲಬ್ ಹಾಗೂ ಹಳೇ ಬಿಇಓ ಕಚೇರಿ ಮುಂಭಾಗದ ಚರಂಡಿಯಲ್ಲಿ ಹೂಳು ತುಂಬಿದೆ. ಇದರಿಂದ ಮಳೆ ಬಂದ ತಕ್ಷಣ ನೀರು ರಸ್ತೆ ಸೇರುತ್ತದೆ ಕೂಡಲೇ ಅಧಿಕಾರಿಗಳು ಹೂಳು ತಗೆಸಬೇಕು ಎಂದು ಸೂಚನೆ ನೀಡಿದರು.

ಮುಖ್ಯರಸ್ತೆಯ ನಿಸಾರ್ ಪಾನ್ ಶಾಪ್ ಎದುರು ಹಾಗೂ ಪಂಚಾನನ ಸ್ಟೋರ್, ಸಂತೋಷ್ ಡಿಪಾರ್ಟ್ಮೆಂಟ್ ಸ್ಟೋರ್ ಮುಂಭಾಗ ರಸ್ತೆಯಲ್ಲಿ ಮಳೆ ಬಂದರೆ ನೀರು ಸಮರ್ಪಕವಾಗಿ ಚರಂಡಿ ಸೇರುತ್ತಿಲ್ಲ ಎಂದು ಸಾರ್ವಜನಿಕ ದೂರಿದರು.  ಈ ವೇಳೆ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷರು, ಬಾಕ್ಸ್ ಚರಂಡಿಗೆ ನೀರು ಸೇರುವಂತೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜೊತೆಗೆ ಪಟ್ಟಣದ ಸ್ವಚ್ಛತೆ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು. ಮಳೆಗಾಲ ಸಮೀಪಿಸುತ್ತಿದೆ. ಈ ನಿಟ್ಟಿನಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.  

ಈ ಸಂದರ್ಭದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಎಸ್. ರಣಜಿತ್ ಕುಮಾರ್, ಆರೋಗ್ಯ ನಿರೀಕ್ಷಕ ಎ.ಎನ್. ರವಿಕುಮಾರ್, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ ಸೊರಬ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.

Prabhu Maestri inspects

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close