ಪರವಾನಗಿ ಇಲ್ಲದೆ ನಡೆಯುತ್ತಿರುವ ತೀರ್ಥಹಳ್ಳಿಯ ಪ್ರತಿಷ್ಠಿತ ಕ್ಲಬ್-Prestigious club in Thirthahalli

 SUDDILIVE || SHIVAMOGGA

ಪರವಾನಗಿ ಇಲ್ಲದೆ ನಡೆಯುತ್ತಿರುವ ತೀರ್ಥಹಳ್ಳಿಯ ಪ್ರತಿಷ್ಠಿತ ಕ್ಲಬ್-Prestigious club in Thirthahalli operating without a license

Club, thirthahalli


ಪ್ರತಿಷ್ಠಿತ ತೀರ್ಥಹಳ್ಳಿಯ ಕ್ಲಬ್ ವೊಂದು ಪರವಾನಗಿ ಇಲ್ಲದೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಪರವಾನಗಿ ಇಲ್ಲದೆ ನಡೆಸಲಾಗುತ್ತಿರುವ ಆರೋಪವೂ ಕೇಳಿ ಬಂದಿದೆ. 

ತಾ.ಪಂ ಮ್ಯಾನೇಜರ್ ಆಗಿರುವ ರಾಘವೇಂದ್ರ ಮಲ್ನಾಡ್ ಕ್ಲಬ್ ಗೆ ಸೆಕ್ರೇಟರಿ ಆಗಿದ್ದಾರೆ. ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡು ಇಂತಹ ಕ್ಲಬ್ ಗಳಿಗೆ ಉನ್ನತ ಹುದ್ದೆಯನ್ನೂ ಪಡೆಯಬಹುದಾ ಎಂಬ ಅನುಮಾನವೂ ಸಹ ಸಾರ್ವಜನಿಜರ ವಲಯದಲ್ಲಿ ಕೇಳಿ ಬರುತ್ತಿದೆ.  

ರಿನಿವಲ್ ಗೆ ಪಟ್ಟಣ ಪಂಚಾಯತಿಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಈ ಕ್ಲಬ್ ಕಳೆದ ಮೂರು ನಾಲ್ಕು ವರ್ಷ ಕಳೆದರೂ ಪರವಾನಗಿ ಇಲ್ಲದೆ ನಡೆಸಲು ತಾಲೂಕು ಆಡಳಿತ ಬಿಟ್ಟಿದ್ದೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ರಿಯಲ್ ಎಸ್ಟೇಟ್ ನಡೆಸುವ ದಂಧೆಕೋರರ ಹಾವಳಿಯೇ ಹೆಚ್ಚಾಗಿರುವ ಈ ಕ್ಲಬ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದೆ.

ಆದರೆ ಇಲ್ಲಿ ಅಬಕಾರಿ ಇನ್ ಸ್ಪೆಕ್ಟರ್ ಗಳಿಗೆ ವಿಚಾರಿಸಿದರೆ ಇಲ್ಲ ಅಬಕಾರಿ ಲೈಸೆನ್ಸ್ ಲ್ಯಾಪ್ಸ್ ಆಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇವರಿಗೆ ಕಳೆದ ಮೂರು ನಾಲ್ಕು ವರ್ಷಗಳಿಂದಲೇ ಪಟ್ಟಣ ಪಂಚಾಯತ್ ಪರವಾನಗಿ ಪಡೆಯದಿದ್ದರೆ ಅಬಕಾರಿ ಲೈಸೆನ್ಸ್ ಮುಂದುವರೆದಿದ್ದು ಹೇಗೆ ಎಂಬ ಕುತೂಹಲವನ್ನ ಆ ಇನ್ ಸ್ಪೆಕ್ಟರ್ ಮಾತು ಉಳಿಸುತ್ತದೆ. 

ಕಮಿಟಿನಲ್ಲಿ ಪರಸ್ಪರ ಹೊಂದಾಣಿಕವಿಲ್ಲ ಎಂಬ ಆರೋಪವಿದೆ. ಕಡಿದಾಳ್ ಪ್ರಕಾಶ ಅಧ್ಯಕ್ಷತೆ ಇದ್ದಾಗ ರಿನಿವಲ್ ಆಗಿದೆ. ಪ್ರತಿಷ್ಠಿತ ಮಲ್ನಾಡ್ ಕ್ಲಬ್ ನ ಸದಸ್ಯತ್ವ ಪಡೆಯಲು ಸಾವಿರ ದಶಸಾವಿರ ರೂ.ಗಳಲ್ಲಿ ಮುಗಿಯಲಿದೆ ಎಂದುಕೊಳ್ಳಬೇಡಿ, ಸದಸ್ಯತ್ವಕ್ಕೆ ಮುರು ಲಕ್ಷ ರೂ. ಶುಲ್ಕವಿದೆ. ಬಹುತೇಕ ಅಡಿಕೆ ಬೆಳೆಗಾರರೆಲ್ಲ ಸದಸ್ಯರಾಗಿದ್ದಾರೆ.  ಅಡಿಕೆ ಬೆಳೆಗಾರರಿಗೆ ಪ್ರತಿಷ್ಠಗೆ ಸದಸ್ಯರಾಗಿದ್ದಾರೆ. ಅವರ ಪ್ರತಿಷ್ಠಗೆ ಧಕ್ಕೆಯಾಗದಂತೆ ಪರವಾನಗಿ ಮುಂದುವರೆಯಲಿ ಎಂಬುದೇ ನಮ್ಮ ಕಾಳಜಿ.

Prestigious club in Thirthahalli

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close