ವಕ್ಫ ಕಾಯ್ದೆ ವಿರೋಧಿಸಿ ಪ್ರತಿಭಟಿಸಿದವರ ವಿರುದ್ಧ ಕ್ರಮ ಆಗಬೇಕು-ಆಪರೇಷನ್ ಸಿಂಧೂರ್ ಸಂತೋಷ ತಂದಿದೆ-ಈಶ್ವರಪ್ಪ-Operation Sindoor

SUDDILIVE ||SHIVAMOGGA

ವಕ್ಫ ಕಾಯ್ದೆ ವಿರೋಧಿಸಿ ಪ್ರತಿಭಟಿಸಿದವರ ವಿರುದ್ಧ ಕ್ರಮ ಆಗಬೇಕು-ಆಪರೇಷನ್ ಸಿಂಧೂರ್ ಸಂತೋಷ ತಂದಿದೆ-ಈಶ್ವರಪ್ಪ-Action should be taken against those who protested against the Waqf Act - Operation Sindoor has brought happiness - Eshwarappa

peration, Sindoor



ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತದ ದಾಳಿ ವಿಚಾರದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಏರ್ ಸ್ಟ್ರೈಕ್ ಖುಷಿ ನೀಡಿರುವುದಾಗಿ ಹೇಳಿದ್ದಾರೆ. 

ಲಷ್ಕರ್ -ಇ- ತೋಯ್ಬಾ ಹಾಗೂ ವಿವಿಧ ಉಗ್ರ ಸಂಘಟನೆಗಳ ಮೇಲೆ ದಾಳಿ ಮಾಡಲಾಗಿದೆ. ಆಪರೇಶನ್ ಸಿಂಧೂರ ಮೂಲಕ‌ ನಮ್ಮ ಸೈನಿಕರು ಧ್ವಂಸ ಮಾಡಿದ್ದಾರೆ. ಸೈನಿಕರ ದಾಳಿಯಿಂದ ಶಕ್ತಿಶಾಲಿ ಉಗ್ರರೆ ಸತ್ತಿರುವುದು ಸಂತೋಷವಾಗಿದೆ. ಹೆಣ್ಣು ಮಕ್ಕಳ ಸಿಂಧೂರ ಅಳಿಸುವ ಕೆಲಸ ಮಾಡಿದ್ದರು.ಅದಕ್ಕೆ ಪ್ರತಿಯಾಗಿ ಆಪರೇಶನ್ ಸಿಂಧೂರ ಎಂದು ಹೆಸರಿಟ್ಟಿರುವುದು ಸಂತೋಷ ಎಂದಿದ್ದಾರೆ. 

100 ಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಚೀನಾ ಒಂದು ಬಿಟ್ಟು ಇನ್ನೆಲ್ಲಾ ದೇಶಗಳು ಸಂತೋಷ ಪಟ್ಟಿವೆ. ಇಡೀ ವಿಶ್ವವೇ ಇಂದು ಭಾರತದ ಜೊತೆಗಿದೆ. ಮೋದಿ, ರಾಜನಾಥ್ ಸಿಂಗ್, ಅಮಿತ್ ಅವರಿಗೆ ಸೇನೆಗೆ ಬೆಂಬಲ‌ ನೀಡಿದ್ದಾರೆ‌.ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

ಸಿಎಂ ಸಿದ್ದರಾಮಯ್ಯ ಅವರೂ ಸೈನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಅಭಿನಂದಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಟ್ವಿಟರ್  ಮೂಲಕ ಶಾಂತಿ ಮಂತ್ರ ಜಪಿಸಿದ್ದಾರೆ. ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಅದನ್ನ ಡಿಲೀಟ್ ಮಾಡಿದ್ದಾರೆ. ಎಲ್ಲಿಯವರೆಗೆ ಶಾಂತಿ ಮಂತ್ರ ಪಠಿಸಲು ಸಾಧ್ಯ. ಇಂತಹ ಸಂದರ್ಭದಲ್ಲಿ ದೇಶದ ಜೊತೆ ನಿಲ್ಲೋ ಕೆಲಸ ಮಾಡಬೇಕು ಎಂದು ಬುದ್ದಿವಾದ ಹೇಳಿದ್ದಾರೆ‌.

ಹುಡುಕಿ, ಹುಡುಕಿ ಹೊಡೆಯೋ ಕೆಲಸವನ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಪಾಕಿಸ್ತಾನ ನಾಗರೀಕರ ಮೇಲೆ ದಾಳಿ ಮಾಡುತ್ತಿದೆ. ಅದರ ಪ್ರತಿಫಲವನ್ನ ಕೂಡ ಪಾಕಿಸ್ತಾನ ಅನುಭವಿಸಬೇಕಾಗುತ್ತೆ.ಭಾರತ ಉಗ್ರಗಾಮಿಗಳನ್ನು ಮಾತ್ರ ಹುಡುಕಿ ಕೊಲ್ಲುತ್ತಿದೆ. ನಾಗರೀಕರ ಮೇಲೆ ದಾಳಿ ಮಾಡಿಲ್ಲ.. ಇದು ಸಂತೋಷದ ವಿಚಾರ. ಸೈನಿಕರ ನೈತಿಕತೆಯನ್ನ ನಾನು ಮೆಚ್ಚುತ್ತೇನೆ ಎಂದರು. 

ಶಿವಮೊಗ್ಗದಲ್ಲಿ ವಕ್ಫ್ ಪ್ರತಿಭಟನೆ ವಿಚಾರ

ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಅವಕಾಶ ಕೇಳಿದ್ದರು. ಅದರಲ್ಲೂ ಡಿಸಿ ಕಚೇರಿ ಎದುರಿನ ವಿವಾದಿತ ಜಾಗದಲ್ಲೇ ಪ್ರತಿಭಟಿಸಲು ಅನುಮತಿ ಕೇಳಿದ್ದರು.ಅದರೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೆನೆ. ಅನುಮತಿ ಕೊಟ್ಟಿಲ್ಲ. ಆದರೂ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ.ಕೋರ್ಟ್ ಆದೇಶ ಉಲ್ಲಂಘಿಸಿ, ಮೆರವಣಿಗೆ- ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. 

ಮುಖ್ಯವಾಗಿ ಪ್ರತಿಭಟನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಈಗಾಗಲೇ ಮೈದಾನ ಜಾಗಕ್ಕೆ ಸಂಬಂಧಿಸಿದ ದಾಖಲೆ ಕೂಡ ನೀಡಿದ್ದೇವೆ. ತಕ್ಷಣವೇ ಆ ಜಾಗವನ್ನ ಪಾಲಿಕೆ ಸುಪರ್ದಿಗೆ ಪಡೆಯಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

Operation Sindoor

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close