SUDDILIVE || BHADRAVATHI
ಮಗು ಸಾವಿಗೂ ತಡವಾಗಿ ಬರೋದೆ ಎಂದು ಪ್ರಶ್ನಿಸಿದ್ದಕ್ಕೆ ರಾದ್ದಾಂತ-Rampage after questioned why the child father not to come earlier after hearing the child death news.
ಸಹೋದರಿಯ ಪತಿಗೆ ತನ್ನ ಮಗು ಸಾವನ್ನಪ್ಪಿದ ವಿಷಯ ತಿಳಿದರೂ ತಡವಾಗಿ ಬಂದ್ರಲ್ಲಾ ಎಂದಿದ್ದಕ್ಕೆ ಪತ್ನಿಯ ಸಹೋದರಿಯ ಬಟ್ಟೆಯನ್ನ ಹರಿದು ಜೀವ ಬೆದರಿಕೆ ಹಾಕಿರುವ ಘಟನೆ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚೈತ್ರ ಎಂಬುವರ ಸಹೋದರಿ ರಕ್ಷಿತಾರವರ ನಾಲ್ಕು ವರ್ಷದ ಮಗು ಸಾವನ್ನಪ್ಪಿದ್ದು, ಈ ವಿಷಯವನ್ನ ರಕ್ಷತಾರ ಪತಿ ಕಿರಣ್ ಅವರಿಗೆ ವಿಷಯ ಮುಟ್ಟಿಸಿದರೂ ಆತ ಮರುದಿನ ಬೆಳಿಗ್ಗೆ ಬಂದಿದ್ದಕ್ಕೆ ಸಹೋದರಿ ಚೈತ್ರಾ ಪ್ರಶ್ನಿಸಿದ್ದಕ್ಕೆ ಅವಾಙತರವನ್ನೇ ಕಿರಣ್ ನಿರ್ಮಿಸಿ ರಾದ್ದಾಂತ ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆ ಭದ್ರಾವತಿಯ ಬಸವನಗುಡಿ ಗ್ರಾಮದಲ್ಲಿ ಸಂಭವಿಸಿದೆ.
Rampage after questioned