SUDDILIVE || SHIVAMOGGA
ಅಧಿಕಾರಿಗಳ ತೆರವು ಕಾರ್ಯಾಚರಣೆ ಖಂಡಿಸಿ ದೇವಾಲಯದ ಪುನರ್ ಪ್ರತಿಷ್ಠಾಪನೆ, ಶಾಸಕರಿಬ್ಬರೂ ಭಾಗಿ-Both MLAs participate in reinstallation of Devi temple to condemn eviction of officials
ಶಿವಮೊಗ್ಗದ ಅನುಪಿನ ಕಟ್ಟೆಯಲ್ಲಿ ಇಂದು ಬೆಳಿಗ್ಗೆ ನೀರಾವರಿ ನಿಗಮದ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆಯ ಹೆಸರಿನಲ್ಲಿ ಐತಿಹಾಸಿಕ ದೇವಸ್ಥಾನವನ್ನ ಕೆಡವಿದ್ದು ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದ ಪೂರ್ಯನಾಯ್ಕ ಮತ್ತು ಶಾಸಕ ಚೆನ್ನಬಸಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಇಬ್ಬರೂ ಶಾಸಕರು ದಾರಿ ಚೌಡೇಶ್ವರಿ ದೇವಸ್ಥಾನವನ್ನು ನಿರ್ಮಾಣ ಮಾಡಿ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ದಾರೆ. ಏಕಾಏಕಿ ನಿನ್ನೆ ರಾತ್ರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅವರು ದೇವಸ್ಥಾನವನ್ನು ಕೆಡವಿದ್ದು , ಗ್ರಾಮಸ್ಥರ ಪರವಾಗಿ ನಿಂತು ಅಧಿಕಾರಿಗಳ ಕ್ರಮವನ್ನು ಖಂಡಿಸಿ ದೇವಸ್ಥಾನವನ್ನು ಪುನರ್ನಿರ್ಮಿಸುವಂತೆ ಆಗ್ರಹಿಸಿದ್ದಾರೆ.
ಇಷ್ಟಕ್ಕೆ ಬಿಡದ ಇಬ್ಬರೂ ಶಾಸಕರು ಶಿವಮೊಗ್ಗದ ಜಿಲ್ಲಾಧಿಕಾರಿಗಳನ್ನ ಭೇಟಿಯಾಗಿ ದೇವಸ್ಥಾನ ತೆರವು ಕಾರ್ಯಾಚರಣೆಯನ್ನ ಖಂಡಿಸಿ ಇತರೆ ಒತ್ತುವರಿಗಳನ್ನ ತೆರವು ಮಾಡುವುದನ್ನ ಬಿಟ್ಟು ಯಾಕೆ ದಾರಿ ಚೌಡೇಶ್ವರಿ ದೇವಾಲಯವನ್ನ ತೆರವುಗೊಳಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ನಿನ್ನೆನೇ ಗ್ರಾಮಸ್ಥರಿಗೆ ದೇವಸ್ಥಾನದ ತೆರವುಗೊಳಿಸುವ ಬಗ್ಗೆ ಸುಳಿವು ಸಿಕ್ಕಿತ್ತು. ಈ ಕುರಿತು ಅಧಿಕಾರಿಗಳನ್ನ ವಿಚಾರಿಸಿದ್ದಕ್ಕೆ ನಾಳೆ ಕಚೇರಿಗೆ ಬನ್ನಿ ಮಾತನಾಡೋಣ ಎಂದು ಕರೆದು ಬೆಳಗ್ಗಿನ ಜಾವ ಕಾರ್ಯಾಚರಣೆ ನಡೆದಿದ್ದಾರೆ. ಸುಳಿವು ನೀಡದೆ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳ ಬಗ್ಗೆ ಡಿಸಿ ಮುಂದೆ ಪ್ರಸ್ತಾಪಿಸಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Reinstallation of Devi temple