ಮೈನ್ ಮಿಡ್ಲಿ ಶಾಲೆಯಲ್ಲಿ ಚಿಣ್ಣರ ಕಲವ-School begins from today

 SUDDILIVE || SHIVAMOGGA

ಮೈನ್ ಮಿಡ್ಲಿ ಶಾಲೆಯಲ್ಲಿ ಚಿಣ್ಣರ ಕಲವ-School begins from today

School, begins


ಎರಡು ತಿಂಗಳ ಬೇಸಿಗೆ ರಜೆ ಕಳೆದು ಇಂದಿನಿಂದ ಶಾಲೆ ಆರಂಭವಾಗಿದೆ. ಶಿವಮೊಗ್ಗದ ಬಿಹೆಚ್ ರಸ್ತೆಯಲ್ಲಿರುವ ಮೈನ್ ಮಿಡ್ಲಿ ಸ್ಕೂಲ್ ನಲ್ಲಿ ಇಂದು ಮಕ್ಕಳನ್ನ ಶಾಲೆಗೆ ಬರಮಾಡಿಕೊಳ್ಳುವ ಮೂಲಕ ಶಾಲೆ ಆರಂಭೋತ್ಸವ ನಡೆದಿದೆ. 

ಇದರ ಜೊತೆಗೆ ವಿಶೇಷ ದಾಖಲಾತಿ ಆಂದೋಲನ ನಡೆಸಲಾಗಿದೆ. ಆರಂಭದ ದಿನೋತ್ಸವದಂದು ಶಾಲೆಗೆ ಹೊಸ ನೋಂದಣೆಯನ್ನ ಈ ಆಂದೋಲನದ ಅಡಿ ನಡೆಸಲಾಗಿದೆ. ಈ ವೇಳೆ ಶಾಲೆಗೆ ತಳೀರು ತೋರಣ ಕಟ್ಟಿ ಮಕ್ಕಳಿಗೆ ಹೂವು ನೀಡುವ ಮೂಲಕ  ಬರಮಾಡಿಕೊಳ್ಳಲಾಗಿದೆ. 

ಈ ವೇಳೆ ಪ್ರಭಾರಿ ಮುಖ್ಯಶಿಕ್ಷಕಿ ಕವಿತಾ ಅವರು ಮಕ್ಕಳಿಗೆ ಉಚಿತ ನೋಟ್ ಬುಕ್, ಪೆನ್ , ಪೆನ್ಸಿಲ್ ಮತ್ತು ಕ್ರಯಾನ್ಸ್ (ಬಣ್ಣದ ಡಬ್ಬಿ)  ನೀಡಿದರು. ನಂತರ ಮಾತನಾಡಿದ ಅವರು,  ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ದೃಷ್ಠಿಯಲ್ಲಿ ಕೆಲಸ ಮಾಡುವಂತೆ ಶಿಕ್ಷಕರಿಗೆ ಕರೆ ನೀಡಿದರು. 

School begins from today

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close