SUDDILIVE || SHIVAMOGGA
ಈಶ್ವರಪ್ಪನವರ ಹುಟ್ಟುಹಬ್ಬ, MMF ಸದಸ್ಯರಿಗೆ ಆಟೋಟ-Eshwarappa's birthday is a game for MMF members
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನದ ಅಂಗವಾಗಿ ಶ್ರೀ ಮಾರಿಕಾಂಬ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮತ್ತು ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್‌ನಿಂದ ಜೂನ್ 1ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಸಂಘದ ಸದಸ್ಯರಿಗೆ ವಿವಿಧ ಆಟೋಟ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪ್ರಮುಖರಾದ ಸುವರ್ಣ ಶಂಕರ್ ಹೇಳಿದರು.
ಜೂ.10ರಂದು ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನಾಚರಣೆ ಇದ್ದು, ಅದರ ಪ್ರಯುಕ್ತ ಸಂಘದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಾವಿರಕ್ಕೂ ಅಧಿಕ ಮಹಿಳೆಯರು ಭಾಗಿಯಾಗಲಿದ್ದಾರೆ. ಸ್ಪರ್ಧೆಗಳನ್ನು ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಉದ್ಘಾಟಿಸುವರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ಮೇಘನಾ ಮತ್ತು ಉದ್ದ ಜಿಗಿತ ಸ್ಪರ್ಧಿ ಗೌತಮಿ ಗೌಡ ಮುಖ್ಯ ಅತಿಥಿಯಾಗಿರುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಶ್ವರಪ್ಪ ಅವರ ದೂರದೃಷ್ಟಿ, ಸಾಮಾಜಿಕ ಕಳಕಳಿ, ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಶ್ರೀ ಮಾರಿಕಾಂಬ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅನ್ನು 2013ರಲ್ಲಿ ಸ್ಥಾಪನೆ ಮಾಡಿದ್ದರು. ಆರಂಭದಲ್ಲಿ ನಾಲ್ಕು ಕೋಟಿ ರೂ. ಸಾಲ ನೀಡುವುದರ ಮೂಲಕ ಟ್ರಸ್ಟ್ ತನ್ನ ಕಾರ್ಯ ಆರಂಭಿಸಿತ್ತು. ಇದುವರೆಗೆ 1,200ಕ್ಕೂ ಹೆಚ್ಚು ಮಹಿಳಾ ಸದಸ್ಯರಿರುವ 1000 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ 86 ಕೋಟಿ ರೂ. ಕಿರು ಸಾಲವನ್ನು ವಿತರಿಸುವ ಮೂಲಕ ಸಮಾಜದಲ್ಲಿ ಸ್ತ್ರೀ ಶಕ್ತಿಕರಣಕ್ಕೆ ತನ್ನದೇಯಾದ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.
Eshwarappa's birthday