SUDDILIVE || SHIVAMOGGA
ಸರ್ವೆ ನಂಬರ್ 26 ರಲ್ಲಿ ಬಿತ್ತು ಪಾಲಿಕೆ ಬೋರ್ಡ್! Shivamogga Mahanagara Palike board that put up the nameplate at survey number 26!
ಶಿವಮೊಗ್ಗದಲ್ಲಿ ಖಾಸಗಿ ಬಸ್ ನಿಲ್ದಾಣದ ಎದುರು ಇರುವ ತುಂಗ ರೈಸ್ ಮಿಲ್ ಗೆ ಹೊಂದಿಕೊಂಡಿರುವ ಸರ್ವೆ ನಂಬರ್ 26 ರ ಎರಡು ಎಕರೆ 16 ಗುಂಟೆ ಜಾಗಕ್ಕೆ ಪಾಲಿಕೆಯ ಬೋರ್ಡ್ ಬಿದ್ದಿದೆ.
ಮಾಜಿ ಡಿಸಿಎಂ ಈಶ್ವರಪ್ಪ ಅವರು ಈ ಜಾಗದ ಕುರಿತು ಸೂಕ್ತ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಲಿಕೆಯು ಜಾಗದಲ್ಲಿ ನಾಮಫಲಕ ಹಾಕಿದೆ.
ಶಿವಮೊಗ್ಗ-ಭದ್ರಾವತಿ ಮಹಾನಗರ ಪಾಲಿಕೆ ಎಂದು ನೋಟಿಫಿಕೇಷನ್ ಆರಂಭಗೊಂಡಾಗಲೇ 24 ಜನರ ಹೆಸರಿಗೆ ಈ 2 ಎಕರೆ 16 ಗುಂಟೆ ಜಾಗ ಖಾತೆ ಏರಿತ್ತು. ಆಗಿನ ನಗರ ಸಭೆ ಆಯುಕ್ತರು, ಅಧ್ಯಕ್ಷರು ಈ ಜಾಗ ನಗರ ಸಭೆಗೆ ಸೇರಿದ್ದು ಎಂದು ನ್ಯಾಯಾಲಯದಲ್ಲಿ ಹೋರಾಡಿದ್ದರು. ಈಶ್ವರಪ್ಪನವರು ವಿಧಾನ ಸೌಧದಲ್ಲಿಯೇ ಈ ಬಗ್ಗೆ ಗುಡುಗಿದ್ದರು.
ಶಿವಮೊಗ್ಗದ ನಗರ ಸಭೆ ಹೆಸರಿಗೆ ಈ ಜಾಗ ಬಂದರೂ ರಾಜ್ಯ ಉಚ್ಛನ್ಯಾಯಾಲಯಕ್ಕೆ ಈ ಪ್ರಕರಣ ಹೋಗಿತ್ತು. ಮಾನ್ಯ ಉಚ್ಚನ್ಯಾಯಾಲಯ ಮತ್ತೆ ಶಿವಮೊಗ್ಗ ನ್ಯಾಯಾಲದ ಅಂಗಕ್ಕೆ ತೀರ್ಮಾನಕ್ಕೆ ಹಾಕಿತ್ತು. 6 ತಿಂಗಳ ಹಿಂದೆ ಈ ಜಾಗ ಪಾಲಿಕೆಗೆ ಸೇರಿದ್ದು ತುಂಗ ರೈಸ್ ಮಿಲ್ ಆಗಲಿ, ಖಾತೆ ಏರಿದ್ದ 16 ಜನರಿಗೂ ಅಲ್ಲ ಎಂದು ತೀರ್ಪು ಬಂದಿದೆ.
ಮೊನ್ನೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಡಿಸಿಎಂ ಈಶ್ವರಪ್ಪ ಪಾಲಿಕೆ ಈ ಜಾಗವನ್ನ ಭದ್ರಪಡಿಸಿಕೊಂಡು ನಗರ ಸಾರಿಗೆ ಬಸ್ ನಿಲ್ದಾಣ ಆರಂಭಿಸಲಿ ಎಂದು ಒತ್ತಾಯಿಸಿದ್ದರು. ಈಗ ಪಾಲಿಕೆ ತನ್ನ ಜಾಗವೆಂದು ನಾಮಫಲಕ ಹಾಕಿದೆ. ಈ ಜಾಗ ಭೂವಂಚಕರ ಕೈಗೆ ಸಿಗುವ ಬದಲು ಸಾರ್ವಜನಿಕರ ಉಪಯೋಗವಾಗಲಿ!
Shivamogga Mahanagara Palike board