SUDDILIVE || SHIVAMOGGA
ಜಮ್ಮು ಮತ್ತು ಕಾಶ್ಮೀರ... ಭಾರತ ಮಾತೆಯ ಸಿಂಧೂರ ಎಂಬ ಘೋಷಣೆಯೊಂದಿಗೆ ಹೊರಟ ಜಾಥ!Jammu and Kashmir... A procession marched with the slogan "Sindoor of Mother India"!
ಅತ್ತ ಗಡಿ ಭಾಗದಲ್ಲಿ ಭಾರತೀಯ ಸೇನೆ ಪೆಹಲ್ಗಾಮ್ ನಲ್ಲಿ ಪ್ರವಾಸಿ ಹಿಂದೂಗಳ ಮೇಲೆ ದಾಳಿ ನಡೆಸಿದ ಉಗ್ರರ ದಾಳಿಗೆ ಪ್ರತಿ ದಾಳಿಯಾಗಿ ಇಂದು ಬೆಳಗ್ಗಿನ ಜಾವ ಆಪರೇಷನ್ ಸಿಂಧೂರ ನಡೆಸುತ್ತಿದ್ದಂತೆ ಶಿವಮೊಗ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಜಾಥ ನಡೆಸಿದೆ.
ಸಂಭ್ರಮದ ಸಂಕೇತವಾಗಿ ಸಂಘಟನೆ ಉಷ ನರ್ಸಿಂಗ್ ಹೋಮ್ ನಿಂದ ಶಿವಮೊರ್ತಿ ವೃತ್ತದ ವರೆಗೆ ಜಾಥಾ ನಡೆದಿದೆ. ಜೈ ಜೈ ಜೈ ಭಾರತ ಮಾತಾ, ಭಾರತ್ ಮಾತಾಕಿ ಜೈ, ಜಮ್ಮು ಮತ್ತು ಕಾಶ್ಮೀರ... ಭಾರತದ ಸಿಂಧೂರ... ಎಂಬ ಮೊದಲಾದ ಘೋಷಣೆಯೊಂದಿಗೆ ಹೊರಟಿದೆ.
ಭಾಗವಧ್ವಜ, ರಾಷ್ಟ್ರ ಧ್ವಜದೊಂದಿಗೆ ಜಾಥ ನಡೆದಿದ್ದು ಹಾದಿ ಉದ್ದಕ್ಕೂ ಭಾರತ ಮಾತೆಯ ಕುರಿತು ಘೋಷಣೆ ಕೂಗಲಾಯಿತು. ವಿಹೆಚ್ ಪಿ ಬಜರಂಗ ದಳದ ಅಧ್ಯಕ್ಷ ವಾಸುದೇವ, ಮಾಜಿ ಅಧ್ಯಕ್ಷ ರಮೇಶ್ ಬಾಬು, ಸುರೇಶ್ ಬಾಬು, ಅಂಕುಶ್ ಮೊದಲಾದವರು ಭಾಗಿಯಾಗಿದ್ದರು.
Sindoor of Mother India