ಅಂಬಲಿ ಉಯ್ಯುವ ಜಾತ್ರೆಯಲ್ಲಿ ಗಲಾಟೆ-Ambali Uyyuva Jathre

 SUDDILIVE || BHADRAVATHI

ಅಂಬಲಿ ಉಯ್ಯುವ ಜಾತ್ರೆಯಲ್ಲಿ ಗಲಾಟೆ-Riot at the Ambali Uyyuva Jathre

Ambli, jathre

ಭದ್ರಾವತಿಯ ದೇವಸ್ಥಾನದ ಉತ್ಸವದಲ್ಲಿ ಗಲಾಟೆ ನಡೆದಿದೆ. ದಾರಿ ಬಿಟ್ಟು ಡ್ಯಾನ್ಸ್ ಮಾಡಿ ಎಂದು ಹೇಳಿದ್ದಕ್ಕೆ ಬಡಿದಾಡಿಕೊಂಡಿದ್ದು ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಭದ್ರಾವತಿಯ ನೆಹರೂ ನಗರದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅಂಬಲಿ ಉಯ್ಯುವ ಜಾತ್ರೆ ನಡೆದಿದೆ. ಜಾತ್ರೆಗೆ ಕಾರ್ತಿಕ್, ಜೋಸೆಫ್, ಅಜೇಯ್, ಮಣಿಕಂಠ, ದೇವಸ್ಥಾನದ ಬಳಿ ಬರುವಾಗ ದೇವಸ್ಥಾನದ ಮುಂಭಾಗ ಲೋಕೇಶ್, ಪ್ರಶಾಂತ್, ಶಿವು, ಕಿರಣ, ರಘು, ಚಿನ್ನು ಎಂಬುವರು ಡ್ಯಾನ್ಸ್ ಮಾಡುತ್ತಿದ್ದರು. 

ಆಗ ಕಾರ್ತಿಕ್, ಜೋಸೆಫ್ ಮೊದಲಾದವರು ಇಲ್ಲಿ ಡ್ಯಾನ್ಸ್ ಮಾಡಬೇಡಿ ಹೆಣ್ಣುಮಕ್ಕಳು ಓಡಾಡುವ ಜಾಗ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿ ಉತ್ತರವಾಗಿ ನಾವು ಹೋಗಲ್ಲ ಇಲ್ಲೇ ಡ್ಯಾನ್ಸ್ ಮಾಡೋದು ನಿನಗೆ ಏನು ತೊಂದರೆ ಎಂದಿದ್ದಾರೆ. ನನಗೆ ತೊಂದರೆ ಇಲ್ಲ ಸಾರ್ವಜನಿಕರಿಗೆ ತೊಂದರೆ ಎಂದ ಕಾರ್ತಿಕ್ ಗೆ ಬೈದು ತಳ್ಳಾಡಿದ್ದಾರೆ.

ಈ ವೇಳೆ ಕೆಳಗೆ ಬಿದ್ದ ಕಾರ್ತಿಕ್ ಗೆ ಲೋಕೇಶ್ ಜೇಬಿನಲ್ಲಿದ್ದ‌ಕಬ್ಬಿಣದ ವಸ್ತು ತೆಗೆದು ಒಡೆದಿದ್ದಾನೆ. ಆಗ ಬಿಡಿಸಲು ಬಂದ ಲೋಕೇಶ್ ಗೂ ಆತನ ಪರವಾಗಿ ಬಂದಿದ್ದೀಯ ಎಂದ ಹೇಳಿ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದವರನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ದೂರು ದಾಖಲಿಸಲಾಗಿದೆ. 

ಈ ಪ್ರಕರಣದಲ್ಲಿ ದೂರಿಗೆ ಪ್ರತಿ ದೂರು ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪ್ರತಿದೂರು ಕೈಗೆ ಸಿಕ್ಕಿಲ್ಲ.

Ambali Uyyuva Jathre


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close