SUDDILIVE || SHIVAMOGGA
ಜಾತಿ ಮತ್ತು ಜನಗಣತಿಗೆ ಪ್ರತ್ಯೇಕ ಸಚಿವಾಲಯ ಆರಂಭಿಸಿ - ಹೆಚ್ ಎಂ ಸಿ-Start a separate ministry for caste and census - HMC
ಜನಗಣತಿ ಮತ್ತು ಜಾತಿಗಣತಿ ಕೇಂದ್ರ ಸರ್ಕಾರದ ಕೆಲಸವಾಗಿದ್ದು, ರಾಜ್ಯದ ಕೆಲಸವಲ್ಲ. ಹಾಗಾಗಿ ಇದಕ್ಕೆ ಪ್ರತ್ಯೇಕ ಸಚಿವಾಲಯ ತೆರೆಯಬೇಕೆಂದು ಮಾಜಿ ಶಾಸಕ ಹೆಚ್ ಎಂ ಚಂದ್ರಶೇಖರಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರತಿ 10 ವರ್ಷ ಕ್ಕೊಮ್ಮೆ ಜನಗಣತಿ ನಡೆಯಬೇಕು. ರಾಷ್ಟ್ರಪತಿಗಳ ಮುದ್ರೆ ಬೀಳಬೇಕು. ನಿಜಲಿಂಗಪ್ಪನವರು ರಾಜಕೀಯ ಪ್ರಜ್ಞೆ ಬೇಕಿದೆ ಎಂದು ಅಂದೇ ಹೇಳಿದ್ದರು. ಇಂದು ರಾಜಕೀಯ ಇಚ್ಛಾಶಕ್ತಿ ಹೆಚ್ಚಾಗಿದೆ. ಭಾರತ ಮತ್ತು ಪಾಕ್ ನಡುವೆ ರಾಜಕೀಯ ಪ್ರೇರಣೆಯಿಂದ ನಡೆದಿದೆ.
ಜನಗಣತಿ ನಡೆದಿಲ್ಲ. ಜನಗಣತಿಯಲ್ಲೇ ದೊಡ್ಡಪಟ್ಟಿಯಿದೆ. ಅದರಲ್ಲಿ ಎಲ್ಲವೂ ಜಾತಿ ಗಣತಿ ಯಿದೆ. ಅಧಿಕಾರಿಗಳು ಸರಿಯಾದ ಗಣತಿ ಮಾಡಬೇಕು. ಡಿಸಿಗೆ ಜವಬ್ದಾರಿ ಇದೆ. ಮಠಾಧೀಶರಲ್ಲಿ ಕೆಲ ಸ್ವಾಮಿಗಳು ಮಾತ್ರ ಸ್ಟೇಟ್ ಮೆಂಟ್ ಕೊಟ್ಟರು ಬೇರೆಯಾರು ಹೇಳಿಕೆ ನೀಡಿಲ್ಲ.
ಸಮುದಾಯ ಜಾಗೃತಿಯಿಂದ ಜಾತಿ ಗಣತಿ ನಮೂದಿಸಬೇಕು. ಕೇಂದ್ರ ಕಳಪೆ ಮಾಡಲ್ಲ. ಜಾತಿ ಮತ್ತು ಜನಗಣತಿ ಎರಡನ್ನೂ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಕೇವಲ ನಮ್ಮ ಜಾತಿ ಕೋಟಿಗಟ್ಟಲೆ ಇದೆ ಎಂದರೆ ಗಣತಿಯಲ್ಲಿ ದಾಖಲಾಗಬೇಕು ಎಂದರು.
ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಗಣತಿ ಆಗಬೇಕಿದೆ. ಮೌಲ್ವಿಗಳು, ಮಠಾಧೀಶರು ಜಾಗೃತಿಯಿಂದ ಗಣತಿಯಲ್ಲಿ ತೊಡಗಿಕೊಳ್ಳಿ. ಮುಂದಿನ ದಿನಗಳಲ್ಲಿ ಅವಘಡ ಬೇಡಿಕೊಳ್ಳಬೇಡಿ. ಲಿಂಗಾಯತರು ವೀರಶೈವ ಅಥವಾ ಲಿಂಗಾಯಿತ ಎಂದು ದಾಖಲಿಸಿ. ಅವೈಜ್ಞಾನಿಕವಾಗಿ ಗಣತಿ ಆಗೋದು ಬೇಡ. ವೈಜ್ಞಾನಿಕವಾಗಿ ದಾಖಲಿಸಿ ಎಂದು ಮನವಿ ಮಾಡಿದರು.
ಈ ಕುರಿತು ಪ್ರಧಾನಿ ಮೋದಿ, ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದ ಅವರು ವೈಜ್ಞಾನಿಕವಾಗಿ ಜಾತಿಗಣತಿ ನಡೆಸಿ. ಈಗಾಗಲೇ ಕೆಲವರು ಜಾಗೃತಿ ಆರಂಭಿಸಿದ್ದಾರೆ. ಹಾಗೆ ಎಲ್ಲರೂ ತಮ್ಮ ತಮ್ಮ ಸಮುದಾಯವನ್ನ ಜಾಗೃತಿಗೊಳಿಸಿ ಎಂದು ಆಗ್ರಹಿಸಿದರು.
Start a separate ministry for caste and census