ತಮನ್ನಾ ರಾಯಭಾರಿಯಾದರೆ ಸರಿಯಿಲ್ಲ ಎಂಬುವರು ಬೇರೆ ಭಾಷೆಯ ಸಿನಿಮಾ ನೋಡಬೇಡಿ-ಮಧು ಬಂಗಾರಪ್ಪ-if Tamannaah becomes an ambassador should not watch movies

 SUDDILIVE || SHIVAMOGGA

ತಮನ್ನಾ ರಾಯಭಾರಿಯಾದರೆ ಸರಿಯಿಲ್ಲ ಎಂಬುವರು ಬೇರೆ ಭಾಷೆಯ ಸಿನಿಮಾ ನೋಡಬೇಡಿ-ಮಧು ಬಂಗಾರಪ್ಪ-Those who say it's not okay if Tamannaah becomes an ambassador should not watch movies in other languages ​​- Madhu Bangarappa

Ambassador, Thamannah


ಬಹುಭಾಷ ಚಲನಚಿತ್ರ ನಟಿ ತಮನ್ನಾರನ್ನ ಮೈಸೂರ್ ಸ್ಯಾಂಡಲ್ ಗೆ ಬಳಸಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಮರ್ಥಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ತಮ್ಮನ್ನರನ್ನ ರಾಯಭಾರಿಯಾಗಿ ನೇಮಿಸಿದ್ದಾರೆ ಎಂದರೆ ಏನೋ ವಿಷಯವಿದೆ ಎಂದು ಅರ್ಥವಿದೆ ಎಂದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು ರಾಯಬಾರಿಗೆ ನಟಿ ತಮನ್ನಾರ  ಬಗ್ಗೆ ಬಿಜೆಪಿಗೆ ಮಾಡಲು ಬೇರೆ ಕೆಲಸ ಇಲ್ಲ. ಇದಕ್ಕೆಲ್ಲ ತಲೆಕೆಡೆಸಿಕೊಳ್ಳಲಾಗಲ್ಲ. ಹಾಗಾದರೆ ಬೇರೆ ಭಾಷೆಯ  ಸಿನಿಮಾವನ್ನೇ ನೋಡಬೇಡಿ ಹಾಗಾದರದ ಎಂದು ತಿರುಗೇಟು ನೀಡಿದ್ದಾರೆ.‌ 

ತಮನ್ನಾ ಬಹುಭಾಷ ನಟಿ. ಶಿವಣ್ಣ ತಮಿಳು ಸಿನಿಮಾ ಜೈಲರ್ ನಲ್ಲಿ ನಟಿಸಿದರು. ಹಾಗಂತ ನಾವು ಯಾರು ಆ ಸಿನಿಮಾ ನೋಡಲಿಲ್ಲವಾ? ಇವೆಲ್ಲಾ ಸುಮ್ಮನೆ ಕೆಲಸಕ್ಕೆ ಬಾರದ ವಿಷಯವೆಂದು ಆರೋಪಿಸಿದರು. 

ಪೆಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ನರಮೇದದ ಪ್ರತಿಕಾರದವಾಗಿ ನಡೆದ ಯುದ್ಧವನ್ನ ನಿಲ್ಸೋರು ಟ್ರಂಫ್ ಯಾರು? ಇಂಡಿಯಾ ಮತ್ತು ಪಾಕ್ ಕಾಮನ್ ಸೆನ್ಸ್ ಇದೆ ನಿಲ್ಸಿದಾರೆ ಎನ್ನಲು ಇವರು ಯಾರು? ಯುದ್ಧ ಮಾಡಲು ಕಾಂಗ್ರೆಸ್ ಹೇಳಿತ್ತು. ಸರ್ಕಾರಕ್ಕೆ ಬೆಂಬಲವಾಗಿ ನಿಂತಿತ್ತು. ಸರ್ಕಾರ ಟ್ರಂಪ್ ಹೇಳಿಕೆಯಿಂದ ಕದನ ವಿರಾಮ ಘೋಷಿಸಿದ್ದು ಯಾಕೆ?

ಹೆಣ್ಣು ಮಕ್ಕಳ ಸಿಂದೂರ ಹೆಸರಿಟ್ಟು ಯುದ್ಧ ಆರಂಭಿಸಿ ಭಾವನಾತ್ಮಕವಾಗಿ ನಡೆಸಿದ ಯುದ್ಧಕ್ಕೆ ಮೂರನೇಯವರ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಿಸಿದ್ದು ಸರಿಯಲ್ಲ ಎಂದು ತಿಳಿಸಿದರು. 

if Tamannaah becomes an ambassador should not watch movies

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close