ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ನೇತೃತ್ವದಲ್ಲಿ ನಡೆದ ತಿರಂಗಾ ಯಾತ್ರೆ- ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ನೇತೃತ್ವದಲ್ಲಿ ತಿರಂಗ ಯಾತ್ರೆ-Tiranga Yatra led by State President B.Y. Vijendra

 SUDDILIVE. || SHIKARIPURA

ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ನೇತೃತ್ವದಲ್ಲಿ ತಿರಂಗ ಯಾತ್ರೆ-Tiranga Yatra led by State President B.Y. Vijendra

Tiranga, yathre


ಪಹಲ್ಗಾಮ್ ನಲ್ಲಿ ನಡೆದ ನರಮೇದದ ವಿರುದ್ಧ ಪಾಕ್ ನ ಮೇಲೆ ಆರಂಭಿಸಿದ್ದ ಭಾರತದ ಆಪರೇಷನ್ ಸಿಂದೂರ ಯಶಸ್ವಿ ಕಂಡ ಹಿನ್ನಲೆಯಲ್ಲಿ ಬಿಜೆಪಿ ಕರೆ ನೀಡಿದ ತಿರಂಗ ಯಾತ್ರೆ ಇಂದು ಶಿಕಾರಿಪುರದಲ್ಲಿ ನಡೆದಿದೆ. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಅವರ ನೇತೃತ್ವದಲ್ಲಿ ನಡೆದ ತಿರಂಗ ಯಾತ್ರೆಯಲ್ಲಿ  ತ್ರಿವರ್ಣ ಧ್ವಜವನ್ನ ಹಿಡಿದು ಪಥಸಂಚಲನ ನಡೆಸಲಾಯಿತು.  ಅಂಬೇಡ್ಕರ್ ಸರ್ಕಲ್ ನಿಂದ ಹೊರಟು ಹುತಾತ್ಮ ಯೋಧರ ಸ್ಮಾರಕ ಭವನದ ವರೆಗೆ ಪಥ ಸಂಚಲನ ನಡೆದಿದೆ. ನಂತರ ಹುತಾತ್ಮರ ಸ್ಮಾರಕಕ್ಕೆ  ಪುಷ್ಪ ನಮನ ಸಲ್ಲಿಸಿ ಮಾತನಾಡಿದ ರಾಜ್ಯಾಧ್ಯಕ್ಷರು, ಭಾರತದ ಏರ್ ಸ್ಟ್ರೈಕ್ ಗೆ ಪಾಕ್ ಪತರುಗಟ್ಟಿಹೋಗಿದೆ ಎಂದರು.

ಪಹಲ್ಗಾಮ್ ನಲ್ಲಿ ನಡೆದ ನರಮೇಧದ ಪ್ರತಿಕಾರವಾಗಿ ಭಾರತದಲ್ಲಿ ಆಪರೇಷನ್ ಸಿಂದೂರ ನಡೆಸಿ ಪಾಕ್ ಗೆ ನಡುಕ ಹುಟ್ಟಿಸಿದೆ. ನಾಲ್ಕುದಿನಗಳ ಕಾಲ ನಡೆದ ಯದ್ಧದಲ್ಲಿ ಪಾಕ್ ಅಮೇರಿಕದ ಕಾಲು ಹಿಡಿದುಕೊಂಡ ಪರಿಣಾಮ ಕದನ ವಿರಾಮ ಘೋಷಿಸಲಾಯಿತು. ಇಲ್ಲವಾದರೆ ಪಾಕ್ ಗೆ ಇನ್ನೂ ತೀವ್ರವಾದ ಘೋರ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದರು. ಈ ವೇಳೆ ಎಂಎಡಿಬಿಯ ಮಾಜಿ ಅಧ್ಯಕ್ಷ ಗುರುಮೂರ್ತಿ ಹಾಗೂ ಮೊದಲಾದ ಕಾರ್ಯಕರ್ತರು ಭಾಗಿಯಾಗಿದ್ದರು‌.

Tiranga Yatra led by State President B.Y. Vijendra

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close