SUDDILIVE || BHADRAVATHI
ನಾಪತ್ತೆಯಾದವ ಜೀವಂತವಾಗಲಿ, ಅಥವಾ ಶವವಾಗಿಯಾಗಲಿ ಪತ್ತೆಯಾಗಿಲ್ಲ, ಆದರೂ ಕೊಲೆ ಎಂದು ಎಫ್ಐಆರ್!The missing person has not been found, whether alive or dead, yet an FIR has been filed calling it murder!
ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ. ನಾಪತ್ತೆ ಪ್ರಕರಣದಲ್ಲಿ ವ್ಯಕ್ತಿಯಾಗಲಿ ಅಥವಾ ಆತನ ಮೃತ ದೇಹವಾಗಲಿ ಪತ್ತೆಯಾಗಿಲ್ಲ. ಆದರೆ ಕೊಲೆ ಎಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭದ್ರಾವತಿಯ ಕುಮರಿ ನಾರಾಯಣಪುರದಲ್ಲಿ ಮೇ.1 ನೇ ತಾರೀಖಿನಂದು ಯೋಗೀಶ್ ಎಂಬ 38 ವರ್ಷದ ವ್ಯಕ್ತಿ ಕೂಡ್ಲಿಗೆರೆಗೆ ಕೆಎ 14 ಹೆಚ್ ಎ 3084 ಕ್ರಮಸಂಖ್ಯೆಯ ಸೂಪರ್ ಸ್ಪ್ಲೆಂಡರ್ ಬೈಕ್ ನಲ್ಲಿ ತೆರಳಿದ್ದರು. ನಾಲ್ಕು ದಿನವಾದರೂ ಪತ್ತೆಯಾಗಿರಲಿಲ್ಲ.
ಎರಡು ದಿನದ ನಂತರ ಮನೆಯರು ತೀವ್ರತರನಾಗಿ ಹುಡುಕಿದ ಪರಿಣಾಮ ಆತನ ಸ್ನೇಹಿತರು ಕುಮರಿ ನಾರಾಯಣಪುರದಲ್ಲಿ ಯೋಗೀಶ್ ಮದ್ಯ ಸೇವಿಸಿದ್ದನ್ನನೋಡಿದ್ದಾರೆ. ನಂತರ ಬಾರ್ ನಲ್ಲಿ ಸಿಸಿ ಟಿವಿ ಫುಟೇಜ್ ಪರಿಶೀಲಿಸಿದಾಗ ಆತನ ಸ್ನೇಹಿತ ಶಿವು ಮತ್ತು ರಾಜು ಬೈಕ್ ನಲ್ಲಿ ಮದ್ಯ ಕೂರಿಸಿಕೊಂಡು ತೆರಳಿರುವ ದೃಶ್ಯ ಸೆರೆಯಾಗಿದೆ.
ಬಾರ್ ನವರು ಮೊದಲು ಸಿಸಿ ಟಿವಿ ಫೂಟೇಜ್ ನಲ್ಲಿ ಹುಡುಕಲು ಮೀನಾಮೇಷ ಎಣಿಸಿದ್ದರು. ನಂತರ ಯೋಗೀಶ್ ನ ಸಹೋದರ ಹೋಗಿ ಕೇಳಿದಾಗ ಫೂಟೇಜ್ ದೊರೆತಿದೆ. ಇದೇ ಸ್ನೇಹಿತರನ್ನ ಕುಟುಂಬಸ್ಥರು ಹೋಗಿ ವಿಚಾರಿಸಿದಾಗ ನಮ್ಮನ್ನ ಇಳಿಸಿ ನಿಮ್ಮಮಗ ಎಲ್ಲಿ ಹೋದ ಗೊತ್ತಿಲ್ಲ ಎಂಬ ಹಾರಿಕೆ ಉತ್ತರ ನೀಡಿದ್ದಾರೆ.
ನಂತರ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಕೂಡ್ಲಿಗೆರೆಯ ಆಟಕೆರೆ ಕ್ಯಾಂಪ್ ನ ಸ್ಮಶಾನದ ಬಳಿ ಹರಿಯುತ್ತಿದ್ದ ಭದ್ರಚಾನೆಲ್ ಬಳಿ ಯೋಗೀಶನ ಬಟ್ಟೆ, ಚಪ್ಪಲಿ ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಸ್ನೇಹಿತ ರಾಜು ಬಟ್ಟೆ ಬಿಚ್ಚಿ ಸ್ನಾನ ಮಾಡುದ್ವಿ ನಂತರ ಆತ ನೀರಿನಿಂದ ಎದ್ದು ಬಂದಿಲ್ಲ ಎಂಬ ಉತ್ತರ ನೀಡಿದ್ದಾನೆ.
ಶಿವು ಮತ್ತು ರಾಜುರವರ ಹೇಳಿಕೆಗಳು ಮತ್ತು ಯೋಗೀಶನ ಮೊಬೈಲ್ ಇವರ ಬಳಿ ಪತ್ತೆಯಾಗಿರುವುದರಿಂದ ಇವರ ಸುತ್ತನೇ ಅನುಮಾನದ ಗಿರಕಿ ಹೊಡೆಯುತ್ತಿವೆ. ಹಾಗಾಗಿ ಇವರನ್ನ ಆರೋಪಿತರನ್ನಾಗಿ ಮಾಡಲಾಗಿದೆ. ಆದರೆ ಯೋಗೀಶ್ ಜೀವಂತವಾಗಲಿ, ಶವವಾಗಿಯಾಗಲಿ ಇನ್ನೂ ಪತ್ತೆಯಾಗಿಲ್ಲ. ಮಾಹಿತಿ ಪ್ರಕಾರ ಕುಟುಂಬಸ್ಥರಿಗೆ ಪೊಲೀಸರು ಎರಡು ಮೂರು ಶವಗಳನ್ನ ತೋರಿಸಿದ್ದಾರೆ ತೋರಿಸಿದ ಅಷ್ಟು ಮೃತದೇಹಗಳು ಯೋಗೀಶನದ್ದು ಅಲ್ಲ ಎಂದು ಕುಟುಂಬಸ್ಥರು ತಿರಸ್ಕರಿಸಿದ್ದಾರೆ.
ದಾವಣಗೆರೆಯ ಮರಣೋತ್ತರ ಕೇಂದ್ರದಲ್ಲಿ ಒಂದು ಶವ ಪತ್ತೆಯಾಗಿದ್ದು ಈ ಮೃತದೇಹ ಯೋಗೀಶನದ್ದು ಎಂದು ಅಂದಾಜಿಸಲಾಗಿತ್ತು. ಈ ಶವ ಹೊನ್ನಾಳಿ ತಾಲೂಕು ಬಸವಪಟ್ಟಣದಲ್ಲಿ ಪತ್ತೆಯಾಗಿತ್ತು. ಆದರೆ ಅದು ಸಹ ಯೋಗೀಶ್ ನ ಮೃತ ದೇಹವಲ್ಲ ಎಂದು ಕುಟುಂಬ ತಿರಸ್ಕರಿಸಿದೆ. ಈ ಪ್ರಕರಣದಲ್ಲಿ ಇಸ್ಪೀಟ್ ನ ಬಗ್ಗೆ ಉಲ್ಲೇಖವಿಲ್ಲದಿದ್ದರೂ ಇಸ್ಪೀಟ್ ನ ವಾಸನೆ ತೇಲಿ ಬರುತ್ತಿದೆ. ಯೋಗೀಶ್ ಕೊಲೆಯಾಗಿದ್ದಾನೆ ಎಂಬ ಅನುಮಾನ ಹೆಚ್ಚಾಗಿದೆ.
FIR has been filed calling it murder!