SUDDILIVE || SHIVAMOGGA
ರಾಜ್ಯ, ಜಿಲ್ಲೆ, ತಾಲೂಕ ಮಟ್ಟದಲ್ಲಿ ತಿರಂಗಯಾತ್ರೆ-Tiranga Yatra at state, district and taluka levels
ಪೆಹಲ್ಗಾಮ್ ದಾಳಿಯಲ್ಲಿ ಸತ್ತ 26 ಜನರ ಹಿಂದೂಗಳ ನರಮೇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ದೇಶದಲ್ಲಿ ಅಭಿಪ್ರಾಯ ಮೂಡಿತ್ತು. ಅದರಂತೆ ಆಪರೇಷನ್ ಸಿಂದೂರ ಎಂಬ ಹೆಸರಿನಲ್ಲಿ ಉಗ್ರರ ಅಡ್ಡದ ಮೇಲೆ ದಾಳಿ ನಡೆಸಲಾಗಿತ್ತು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂದೂರ್ ಬಗ್ಗೆ ತೀರ್ಮಾನ ಕೈಗೊಂಡಾಗ ಎಲ್ಲಾ ದೇಶಗಳು ಚೀನಾ ನತ್ತು ಪಾಕ್ ಹೊರತು ಪಡಿಸಿ ಭಾರತಕ್ಕೆ ಬೆಂಬಲಿಸಿದವು. ಪಾಕಿಸ್ತಾನದಲ್ಲಿ ಧ್ವಂಸ ಮಾಡಲಾಯಿತು. ಅಡಗುತಾಣ ಮತ್ತು ಲಾಂಚಿಂಗ್ ಪ್ಯಾಡ್ ಮೇಲೆ ದಾಳಿ ನಡೆಸಲಾಗಿತ್ತು.
ಭಾರತ ಈ ರೀತಿ ನುಗ್ಗಿ ದಾಳಿಯನ್ನ ಹಿಂದೆಂದೂ ಮಾಡಿರಲಿಲ್ಲ. ಮುದಾಸಿರ್ ಖಾದಿಯಬ್ ಖಾಸ್ , ಹಫೀಸ್ ಮೊಮದ್ ಜಮೀದ್, ಖಾಲೀದ್, ಮೊಹಮದ್ ಹಸನ್ ಖಾನ್, ಅಸ್ಗಲ್, ರೌಫ್, ಮೊಹಮದ್ ಯೂಸಪ್ ಅಜರ್ ಸೇರಿ 8 ಜನ ಉಗ್ರಗಾಮಿಗಳನ್ನ ಈತನ ಹತ್ಯೆ ಏರ್ ಸ್ಟ್ರೈಕ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದರು.
ಆಪರೇಷನ್ ಸಿಂದೂರ್, ನಾಲ್ಕು ದಿನಗಳ ಅಂತರದಲ್ಲಿ ಸ್ವತಃ ಪಾಕ್ ಅಮೇರಿಕಾವನ್ನ ಸಂಪರ್ಕಿಸಿ ಯುದ್ಧ ನಿಲ್ಲಿಸಲು ಬೇಡಿಕೊಂಡಿತ್ತು. ಅಲ್ಲಿನ ಅಧ್ಯಕ್ಷರು ಭಾರತೀಯರನ್ನ ಸಂಪರ್ಕಿಸಿ ಕದನ ವಿರಾಮ ಘೋಷಣೆ ಮಾಡಲು ಸೂಚಿಸಿದ್ದರಿಂದ ಕದನ ವಿರಾಮವಾಗಿದೆ. ನಿನ್ನೆ ಪ್ರಧಾನಿ ಮೋದಿ ಮಾತನಾಡಿ, ಯುದ್ದ ವಿರಾಮ ಶಾಶ್ವತವಲ್ಲ. ಪಾಕ್ ಕಡೆಯಿಂದ ಯಾವುದೇ ಉಗ್ರ ಚಟುವಟಿಕೆ ನಡೆದರೂ ಅದನ್ನ ಯುದ್ಧ ಎಂದೇ ಪರಿಗಣಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.
ನೀರು ಮತ್ತು ರಕ್ತ ಎರಡೂ ಸಹ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪಾಕ್ ಗೆ ಸಿಂದು ನೀರು ಹರಿಸಲು ಉಗ್ರ ಚಟುವಟಿಕೆಗೆ ಬ್ರೇಕ್ ಬೀಳಬೇಕೆಂದು ನೀಡಿದ್ದಾರೆ. ನೂಕ್ಲಿಯರ್ ಬೊಡ್ಡು ಬೆದರಿಕೆಗೆ ಹೆದರೊಲ್ಲ. ಪಾಕ್ ಉಳಿಯಲು ಉಗ್ರ ಚಟುವಟಿಕೆಯನ್ನ ನಿಲ್ಲಿಸಬೇಕೆಂದು ಹೇಳಿದ್ದಾರೆ. ಉಗ್ರವಾದ ಪ್ರಪಂಚಕ್ಕೆ ತಗುಲುತ್ತಿರುವ ಪಿಡುಗುವಾಗಿದೆ ಎಂದು ತಿಳಿದರು.
ತಿರಂಗ ಯಾತ್ರ
ಆಪರೇಷನ್ ಸಿಂದೂರ್ ಯಶಸ್ವಿಯ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನೆಡ್ಡ ರಾಜ್ಯದ ಎಲ್ಲೆಡೆ ತಿರಂಗ ಯಾತ್ರೆಗೆ ಸೂಚಿಸಿದ್ದಾರೆ. ಅದರಂತೆ ನಮ್ಮ ರಾಜ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದು ರಾಜಕೇತರ ಯಾತ್ರೆಯಾಗಿ ಆಚರಿಸಲಾಹುತ್ತಿದೆ. ಮೇ14 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ನಿವೃತ್ತ ಯೋಧರು, ರೈತರು, ವಿದ್ಯಾರ್ಥಿಗಳು, ಎಲ್ಲಾ ವರ್ಗದ ಸದಸ್ಯರನ್ನ ಸೇರಿಸಿಕೊಂಡು ಆಯೋಜಿಸಲಾಗಿದೆ. ಮೇ15ಕ್ಕೆ ಮಂಗಳೂರು ಬೆಳಗಾವಿಯಲ್ಲಿ ನಡೆದರೆ, ಮೇ16 ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯಲಿದೆ. 18 ರಿಂದ 23 ವರೆಗೆ ತಾಲೂಕು ಮಟ್ಟದಲ್ಲಿ ನಡೆಯಲಿದೆ. ಶಿವಮೊಗ್ಗದಲ್ಲಿ ನಡೆಯುವ ತಿರಂಗ ಯಾತ್ರೆಯಲ್ಲಿ ಭಾಗಿಯಾಗಲಿದ್ದೇನೆ ಎಂದರು.
ಕದನ ವಿರಾಮ ರಾಜನೀತಿ
ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಕದನ ವಿರಾಮದ ನಂತರ ಹಗೂರವಾಗಿ ಮಾತನಾಡಲು ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಟ್ರಂಪ್ ಗೆ ಶರಣಾಗಿರುವಂತೆ ಹೋಲಿಸಿ ಮಾತನಾಡಿದ್ದಾರೆ. ಕದನ ವಿರಾಮ ಎಂದರೆ ಶಾಶ್ವತವಲ್ಲ. ಉಗ್ರ ಚಟುವಟಿಕೆ ನಡೆದರೆ ಆಕ್ಟ್ ಆಫ್ ವಾರ್ ಎಂಬುದನ್ನ ಕಾಂಗ್ರೆಸ್ ತಿಳಿದುಕೊಳ್ಳಬೇಕು. ಕದನ ವಿರಾಮ ರಾಜನೀತಿ ಎಂದು ವಿವರಿಸಿದರು.
ಕದನ ವಿರಾಮ ಆದ ನಂತರವೂ ಪಾಕ್ ದಾಳಿ ನಡೆಸಿದೆ. ಅದನ್ನ ಗಂಭೀರವಾಗಿ ಪರಿಗಣಿಸಲಿದ್ದೇವೆ. ಪೆಹಲ್ಗಾಮ್ ಉಗ್ರರು ಎಲ್ಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ನಮ್ಮ ಶಸ್ತ್ರ ಪಡೆಗಳು ಯಾವಾಗಲೂ ಉಗ್ರರನ್ನ ಸದೆಬಡೆಯಲು ಸಜ್ಜಾಗಿದ್ದಾರೆ. ಕದನ ವಿರಾಮ ನಾಳೆ ಏನು ಬೇಕಾದರೂ ಆಗಬಹುದು. ಇದು ಯುದ್ಧ ಮಾಡುವ ಮತ್ತು ಉಗ್ರ ಚಟುವಟಿಕೆಗೆ ಬೆಂಬಲಿಸುವ ಕಾಲ ಅಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಅದನ್ನ ಕಾಂಗ್ರೆಸ್ ಅರಿತುಕೊಳ್ಳಬೇಕು ಎಂದರು.
Tiranga Yatra