ಹನುಮಂತಪುರದ ದಾರಿ ಚೌಡೇಶ್ವರಿ ದೇವಸ್ಥಾನ ತೆರವು-Dari Chowdeshwari temple

SUDDILIVE || SHIVAMOGGA

ಹನುಮಂತಪುರದ ದಾರಿ ಚೌಡೇಶ್ವರಿ ದೇವಸ್ಥಾನ ತೆರವು -Hanumanthapura, Dari Chowdeshwari temple cleared



ಶಿವಮೊಗ್ಗದ ಅನುಪಿನ ಕಟ್ಟೆಯ ಹನುಮಂತಪುರದ ದಾರಿ ಚೌಡೇಶ್ವರಿ ದೇವಾಲಯವನ್ನ ಅಪ್ಪರ್ ತುಂಗ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ದೇವಸ್ಥಾನದ ತೆರವಿಗೆ ಗ್ರಾಮಸ್ಥರ ಭಾರಿ ವಿರೋಧ ವ್ಯಕ್ತವಾಗಿದೆ. 


ಅನುಪಿನಕಟ್ಟೆ, ಪುರದಾಳು,  ಗೋವಿನಪುರ, ಗೋಪಶೆಟ್ಟಿ, ಶಾಂತಿಪುರ, ಹಾಗೂ ಹನುಮಂತಪುರ ಗ್ರಾಮದ ವ್ಯಾಪ್ತಿಯ  ದೇವಸ್ಥಾನವನ್ನು ಇಂದು ಬೆಳಗಿನ ಜಾವ 4  ಗಂಟೆಗೆ  ತುಂಗಾ ಮೇಲ್ದಂಡೆ ತಿಪ್ಪ ನಾಯ್ಕ  ಡಬಲ್ ಇ ಇ ನೇತೃತ್ವದಲ್ಲಿ ಪೊಲೀಸರ ಸಹಾಯದಿಂದ ತೆರವುಗೊಳಿಸಲಾಗಿದೆ.


ಅಧಿಕಾರಿಗಳು ಹೈಕೋರ್ಟ್ ನಿರ್ದೇಶನದ ಮೇರೆಗೆ ನಾಲೆಯ ಬಫರ್ ಜೋನ್ ನಲ್ಲಿ ಬರುವ ನಿರ್ಮಾಣದ ಹಂತದಲ್ಲಿ ಬರುವ ದೇವಸ್ಥಾನವನ್ನ ತೆರವುಗೊಳಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಗ್ರಾಮಸ್ಥರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಈ ದೇವಸ್ಥಾನ ಸುಮಾರು 90 ವರ್ಷದ ಹಳೆಯ ಪುರಾತನ ದೇವಸ್ಥಾನವಾಗಿದ್ದು, ಬಫರ್ ಜೋನ್ ನಲ್ಲಿ ಇಲ್ಲವಾದರೂ ತೆರವುಗೊಳಿಸಲಾಗಿದೆ ಎಂದು ದೂರಿದ್ದಾರೆ.

ಈ ಸಾಲಿನಲ್ಲಿ ಬರುವ ಅನೇಕ ದೇವಸ್ಥಾನಗಳು ಮತ್ತು ಇತರೆ ಕಟ್ಟಡಗಳಿದ್ದರೂ ಅವುಗಳನ್ನ ಬಿಟ್ಟು ದಾರಿ ಚೌಡಮ್ಮನ ದೇವಸ್ಥಾನ ತೆರವುಗೊಳಿಸಿದ್ದಾರೆ. 

ಯಾವುದೇ ರೀತಿಯ ಆದೇಶ ಗೊಳಿಸದೆ ಇಂದು ಬೆಳಗಿನ ಜಾವ 4:00 ಗಂಟೆಗೆ ದೇವಸ್ಥಾನವನ್ನು ಕೆಡವಿದ್ದಾರೆ ಗ್ರಾಮಸ್ಥರು ತಡೆಯಲು ಹೋದಾಗ ಪೋಲಿಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ವಾದ ಪ್ರತಿವಾದ ನಡೆದಿದೆ.. ಆದರೂ ಸಹ ಇಲಾಖೆಯವರು ದೇವಸ್ಥಾನವನ್ನು ಸಂಪೂರ್ಣ ಕೆಡುವಿರುವುದಾಗಿ ಗ್ರಾಮಸ್ಥಾರು ದೂರಿದ್ದಾರೆ. 

Dari Chowdeshwari temple

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close