ಸುಂಟರಗಾಳಿ ಆರ್ಭಟಕ್ಕೆ ಧರೆಗುರುಳಿದ ಮರ , ಮನೆಗಳು - ಸ್ಥಳಕ್ಕೆ ಶಾಸಕ ಬೇಳೂರು ಭೇಟಿ-trees and houses uprooted by the tornado

SUDDILIVE || RIPPONPETE

ಸುಂಟರಗಾಳಿ ಆರ್ಭಟಕ್ಕೆ ಧರೆಗುರುಳಿದ ಮರ , ಮನೆಗಳು - ಸ್ಥಳಕ್ಕೆ ಶಾಸಕ ಬೇಳೂರು ಭೇಟಿ-MLA Belur visits the site of trees and houses uprooted by the tornado

Tree, Tornado,

ಏಕಾಏಕಿ ಬಂದ ಭಾರಿ ಪ್ರಮಾಣದ ಸುಂಟರಗಾಳಿಗೆ ವಿದ್ಯುತ್ ಕಂಬ, ಮರಗಳು ಧರೆಗುರುಳಿದ್ದು ಹಲವು ಮನೆಗಳ ಮೇಲ್ಛಾವಣಿ ಹಾರಿಹೋಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ಗವಟೂರು ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ವಿಚಾರ ತಿಳಿಯುತಿದ್ದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿ ವೈಯಕ್ತಿಕ ಪರಿಹಾರ ವಿತರಿಸಿದರು.

ಈ ಶಾಲೆಯ ಕಾಂಪೌಂಡ್, ವಿದ್ಯುತ್ ಕಂಬಗಳು ಹಾಗೂ ಮರಗಳು, ತೆಂಗಿನಮರ ಧರಾಶಾಹಿ ಘಟನೆ, ಅನೇಕ ಮನೆಗಳ ಹೆಂಚುಗಳು, ಶೀಟುಗಳು ಗಾಳಿಯ ಆರ್ಭಟಕ್ಕೆ ಹಾರಿಹೋಗಿ ಅಪಾರ ನಷ್ಟ ಸಂಭವಿಸಿದೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮರ, ವಿದ್ಯುತ್ ಕಂಬಗಳು ರಸ್ತೆ ಮೇಲೆ ಉರುಳಿ ಬಿದ್ದ ಕೆಲಕಾಲ ಹೊಸನಗರ – ರಿಪ್ಪನ್‌ಪೇಟೆ ಸಂಚಾರ ಅಸ್ತವ್ಯಸ್ತವಾಗಿತ್ತು.

trees and houses uprooted by the tornado

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close