SUDDILIVE || SHIVAMOGGA
ಸಿಗಂದೂರು ಲಾಂಚ್ ಗೆ ಸಿಗಲಿದೆಯೇ ಹೊಸ ರೂಪ-Will Sigandur launch get a new look?
ಇಷ್ಟು ದಿನ ಪ್ರವಾಸಿಗರಿಗೆ ಕಣ್ಮನಸೆಳೆದ ಹಾಗೂ ವಿಭಿನ್ನ ಅನುಭವ ನೀಡಿದಂತಹ ಜೊತೆಗೆ ದೀಪದ ಜನರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಸಿಗಂದೂರು ಲಾಂಚ್ ಗೆ ಇನ್ನು ಕೆಲವೇ ದಿನಗಳ ಆಯಸ್ಸು ಉಳಿದಿದೆ.
ದೇಶದ ಎರಡನೇ ಅತಿದೊಡ್ಡ ರೋಪ್ ಸೇತುವೆ ಆದ ಸಿಗಂದೂರು ಸೇತುವೆ ಆರಂಭದ ನಂತರ ಸಿಗಂದೂರು ಲಾಂಚ್ ಗತಿ ಏನು? ಎಂಬ ಪ್ರಶ್ನೆಗೆ ಕೆಲ ಸಾಧ್ಯತೆಯ ಉತ್ತರಗಳು ಲಭಿಸುತ್ತಿದೆ.
ನೀರಿನ ಮೇಲೆ ತೇಲುವ ಹೋಟೆಲ್ ಆಗುತ್ತದೆಯೇ ಸಿಗಂದೂರು ಲಾಂಚ್ ? ಎಂಬ ಉತ್ತರಕ್ಕೆ ಸ್ಪಷ್ಟತೆ ಸಿಗಬೇಕಿದೆ. ಕಾರವಾರದಿಂದ ಬಂದ ಲಾಂಚ್ ವಾಪಾಸಾಗಲಿದೆಯಾ? ಅಥವ ಇಲ್ಲಿಯೇ ಉಳಿದುಕೊಳ್ಳಲಿದೆಯಾ ? ಪ್ರವಾಸೋದಗಯಮವನ್ನ ಹೆಚ್ಚಿಸಲಾಗುವುದಾ ಎಂಬ ಪ್ರಶ್ನೆಗೆ ಅಸ್ಪಷ್ಟತೆಯ ಉತ್ತರ ಸಿಗುತ್ತಿದೆ.
ಪ್ರವಾಸಿಗರನ್ನ ಸೆಳೆಯಲು ಹಾಗೂ ಲಾಂಚ್ ಅನ್ನು ಉಳಿಸಿಕೊಳ್ಳಲು ಇನ್ನೇನು ಮಾಡಬಹುದು ಎನ್ನುವುದಕ್ಕೆ ಉತ್ತರ ಇಲ್ಲಿದೆ ನೋಡಿ!ಐತಿಹಾಸಿಕ ಸಿಗಂದೂರು ಲಾಂಚ್ ನ ಮುಂದಿನ ಕಥೆ ಏನು? ಸಿಗಂದೂರು ಲಾಂಚ್ ಗೆ ಸಿಗಲಿದೆಯೇ ಹೊಸ ರೂಪ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಐತಿಹಾಸಿಕ ಸಿಗಂದೂರು ಸೇತುವೆ ಉದ್ಘಾಟನೆಗೆ ಕ್ಷಣಗಣನೆ ಹಿನ್ನೆಲೆಯಲ್ಲಿ ಲಾಂಚ್ ವ್ಯವಸ್ಥೆ ಏನಾಗಲಿದೆ ಎಂಬ ಪ್ರಶ್ನೆ ಮೂಡಿತ್ತು. ಪ್ರವಾಸಿಗರಿಗೆ ಮುದ ನೀಡುತ್ತಿರುವ ಲಾಂಚ್ ಗೆ ಹೊಸ ರೂಪ ದೊರೆಯಲಿದೆ ಎಮಬ ಭರವಸೆ ಮುಡಿದೆ. ಸೇತುವೆ ಆರಂಭದ ನಂತರ ಲಾಂಚ್ ವಾಪಾಸ್ ಕಾರಾವಾರಕ್ಕೆ ತೆರಳಲಿದೆ ಎಂಬ ಮಾತು ಕೇಳಿಬಂದಿತ್ತು. ದ್ವೀಪದ ಜನರು ಹಾಗೂ ಪ್ರವಾಸಿಗರಿಗೆ ಆಸರೆಯಾಗಿರುವ ಲಾಂಚ್ ಸೇವೆ ಮುಂದುವರಿಯುತ್ತಾ ಅಥವಾ ಬೇರೆ ಲಾಂಚ್ ನಲ್ಲಿ ಆ ಸೇವೆ ಸಿಗುತ್ತಾ ಎಂಬ ಪ್ರಸ್ನೆಗೆ ಉತ್ತರ ಸಿಗಬೇಕಿದೆ.
ದೇಶದ ೨ನೇ ಅತಿದೊಡ್ಡ ರೋಪ್ ಸೇತುವೆ ಉದ್ಘಾಟನೆಗೊಂಡ ನಂತರ ಲಾಂಚ್ ವ್ಯವಸ್ಥೆಯನ್ನ ನೀರಿನ ಮೇಲೆ ತೇಲುವ ಹೋಟೆಲ್ ಆಗಿ ಪರಿವರ್ತನೆಗೊಳ್ಳಲಿದೆ ಎಂಬ ಮಾತು ಕೇಳಿಬರುತ್ತಿದೆ. ಸಿಗಂದೂರು ಲಾಂಚ್ ಹೋಟೆಲ್ ಆಗಿ ಪರಿವರ್ತಿತವಾಗಲಿದೆ ಎಂಬ ಮಾತು ಕೇಳಿ ಬಂದಿದೆ. ಈ ಮೂಲಕ ಪ್ರವಾಸಿಗರನ್ನ ಸೆಳೆಯಲು ಹಾಗೂ ಲಾಂಚ್ ಅನ್ನು ಉಳಿಸಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
Will Sigandur launch get a new look