SUDDILIVE || SHIVAMOGGA
ನಂದಿನಿ ಡೀಲರ್ ದಾರರ ಸಮಸ್ಯೆ ಬಗೆಹರಿಯುತ್ತಾ?Will the Nandini dealer's problem be resolved?
ಶಿವಮೊಗ್ಗ ಹಾಲು ಒಕ್ಕೂಟದ ಡೀಲರ್ ದಾರರ ಸಭೆ ಇಂದು ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಅಧ್ಯಕ್ಷ ವಿದ್ಯಾದರ ಅವರ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಡೀಲರ್ ದಾರರ ಸಮಸ್ಯೆಯನ್ನ ಆಲಿಸಲಾಗಿದೆ.
ಬೀದಿ ಬದಿ ನಂದಿನಿ ಡೀಲರ್ ದಾರರು 50-100 ಮಾರಾಟ ಮಾಡಿದರೆ ಪ್ರೋತ್ಸಹ ಧನ, 40% ವೀಸಿಙಗ್ ಕೂಲರ್ ಸ್ವಂತ ಹಣ ದಿಂದ ಪಡೆದರೆ ಅವರಿಗೆ ಸಬ್ಸಿಡಿ ನೀಡುವುದು ಎರಡು ದಿನಗಳ ಭದ್ರತಾ ಹಣವನ್ನ ಮೂರು ದಿನ ಹೆಚ್ಚಿಸುವಂತೆ. ಕ್ರೇಟ್ ಗಳನ್ನ ಸರಿಯಾದ ಸಮಯಕ್ಕೆ ನೀಡುವಂತೆ, 11 ಸಾವಿರ ರೂ. ವ್ಯವಹಾರ ಮಾಡಿದ ಡೀಲರ್ ದಾರರು ಖಡ್ಡಾಯವಾಗಿ ಜಿಎಸ್ ಟಿ ಹೊಂದುವಂತೆ ಅಧಿಕಾರಿಗಳು ಸೂಚಿಸಿದರು.
ನಂತರ ನಡೆದ ಕುಂದು ಕೊರತೆ ಬಗ್ಗೆ ಚರ್ಚೆ ಆಯಿತು. ಜಿಎಸ್ ಟಿ ಕಟ್ ಆಗಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಬರ್ತಾಯಿದೆ. ಪೇಮೆಂಟ್ ಮಾಡುವಾಗ ಜಿಎಸ್ ಟಿ ಪ್ರತ್ಯೇಕವಾಗಿ ಆಗುತ್ತಿದೆ. ಮತ್ತೆ ಜಿಎಸ್ ಟಿ ಕಟ್ಟುವುದು ಯಾಕೆ ಎಂದು . ಚನ್ನಗಿರಿ ತಾಲೂಕು ಗೊಪ್ಪೇನಹಳ್ಳಿಯ ಡೀಲರ್ ದಾರರು ಪ್ರಶ್ನಿಸಿದರು.
ನಂತರ ಮಾತನಾಡಿದ ಮಾರುಕಟ್ಟೆಯ ಅಧಿಕಾರಿಗಳು, ಅದು ಜಿಎಸ್ ಟಿ ಅಲ್ಲ, ಟಿಸಿಎಸ್ ಹಣವಾಗಿದ್ದು, ಆಡಿಟರ್ ನ್ನ ಸಂಪರ್ಕಿಸಿ ಕಡಿತಗೊಂಡ ಟಿಸಿಎಸ್ ಹಣವನ್ನ ವಾಪಾಸ್ ಪಡೆಯಿರಿ ಎಂದು ಸಲಹೆ ನೀಡಿದರು. ಇಂಡೆಂಟ್ ಗೆ ಸಂಜೆ 5 ಗಂಟೆಯ ವರೆಗೆ ಡೆಡ್ ಲೈನ್ ನೀಡಿದ್ದು ಇದನ್ನ ಒಂದು ಗಂಟೆ ವಿಸ್ತರಿಸುವಂತೆ ಸೀಲಿಂಗ್ ಲೀಕೇಜ್ ಆದ ಹಾಲುಗಳನ್ನ ವಾಪಾದ್ ಪಡೆಯಿರಿ ಎಂದು ಮನವಿ ಮಾಡಲಾಯಿತು. ಮಾರುಕಟ್ಟೆ ಅಧಿಕಾರಿ ಸುಂದರೇಶ್ ಗೆ ಅಧ್ಯಕ್ಷ ವಿದ್ಯಾಧರ ವೇದಿಕೆ ಮೇಲ್ಎಯೇ ಕ್ಲಾಸ್ ತೆಗೆದುಕೊಂಡು, ಈ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.
ಶೇಖರ್ ನಾಯ್ಕ್ ಎಂಬ ಠೇವಣೆದಾರರು ಪಿಎಫ್ ವ್ಯವಸ್ಥೆ ಮಾಡಿಕೊಡಿ, ಡೀಲರ್ ಗೆ ಆರೋಗ್ಯ ವಿಮೆ ಕೊಡುವಂತೆ ವಿನಂತಿ, ರಜಾ ದಿನಗಳಲ್ಲಿ ಎಂಡಿಯವರಿಗೆ ಕರೆ ಮಾಡಿ ಇಂಡೆಂಟ್ ಹಾಕಲಾಗುತ್ತಿದೆ ಎಂದು ದೂರು ನೀಡಿದರು. ರೂಟ್ ಆಫೀಸರ್ ರೆಸ್ಪಾನ್ಸ್ ಮಾಡಲು ಅಧ್ಯಕ್ಷರು ಸೂಚನೆ ನೀಡಿದರು. ಒಟ್ಟಿನಲ್ಲಿ ಮಾರುಕಟ್ಟೆ ಅಧಿಕಾರಿಗಳ ಮತ್ತು ಡೀಲರ್ ದಾರರ ನಡುವೆ ಒಂದು ತರಹ ತಿಕ್ಕಾಟ ಇರುವುದು ಮಾತ್ರ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಸಾಮರಸ್ಯವನ್ನ ಅಧಿಕ್ಷರು ಕಾಪಾಡಿಕೊಂಡು ಹೋಗುವುದೇ ಒಂದು ಸವಾಲಾಗಿದೆ.
Will the Nandini dealer's problem be resolved