ಯುವ ಕಾಂಗ್ರೆಸ್ ನಿಂದ ಕಿರುಹೊತ್ತಿಗೆ ಬಿಡುಗಡೆ- Youth Congress releases booklet

SUDDILIVE || SHIVAMOGGA

ಯುವ ಕಾಂಗ್ರೆಸ್ ನಿಂದ ಕಿರುಹೊತ್ತಿಗೆ ಬಿಡುಗಡೆ-Youth Congress releases booklet

Booklet, release

ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಗದರ್ಶನದೊಂದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ರಾಜ್ಯ ಕಾರ್ಮಿಕ ಇಲಾಖೆ ಜಾರಿಗೆ ತಂದ ಕಾರ್ಮಿಕಪರ ಯೋಜನೆಗಳ ಕಿರು ನೋಟದ "ಶ್ರಮಿಕ ಬಂಧು ಸಂತೋಷ್ ಲಾಡ್' ಕಿರು ಹೊತ್ತಿಗೆಯನ್ನು ಇಂದು  ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಿದರು.

ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಬಳಿಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮುಖಂಡ ಹೆಚ್.ಪಿ. ಗಿರೀಶ್ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದವು. ಚುನಾವಣಾ ಮುನ್ನ ಪಕ್ಷ ನೀಡಿದ ಪಂಚ ಗ್ಯಾರೆಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆದ ಹಿನ್ನೆಲೆಯಲ್ಲಿ  ಮೊನ್ನೆಯಷ್ಟೇ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆದ ಸಂಕಲ್ಪ ಸಮರ್ಪಣಾ ಸಮವೇಶ ಅಭೂತ ಪೂರ್ವ ಯಶಸ್ವಿ ಕಂಡಿತು. ಇದು ನಮ್ಮ ಸರ್ಕಾರ ಜನಪರವಾದ ಸರ್ಕಾರ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.

ವಿಶೇಷವಾಗಿ ಕ್ರೀಯಾಶೀಲ ಯುವ ನಾಯಕ ಸಂತೋಷ್ ಲಾಡ್ ಅವರು ಕಾರ್ಮಿಕ ಸಚಿವರಾಗಿ ಈ ಎರಡು ವರ್ಷದ ಅವಧಿಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಮೈಲುಗಲ್ಲು ಎನ್ನುವ ಹಾಗೆ  ಅನೇಕ ಮಹತ್ತರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮೋಟಾರು ಸಾರಿಗೆ ಮತ್ತು ನಇತರ ಸಂಬAಧಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸುವ ಉದ್ದೇಶಕ್ಕೆ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬAಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಕಲ್ಯಾಣ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ವಿಶೇಷವಾಗಿ ದೇಶದಲ್ಲಿ ಇದೇ ಮೊದಲ ಬಾರಿಗೆ ಗಿಗ್ ಕಾರ್ಮಿಕರಿಗೆ ಜೀವ ವಿಮೆ ಮತ್ತು ಅಪಘಾತ ವಿಮಾ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಾಯ್ದೆ, ರಾಜ್ಯ ದಿನ ಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ, ರಾಜ್ಯದ ೪೩ ಕಡೆಗಳಲ್ಲಿ ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರಗಳ ಸ್ಥಾಪನೆ, ವಲಸೆ ಕಾರ್ಮಿಕರ ವಸತಿ ಸೌಕರ್ಯಗಳನ್ನು ಕಾರ್ಮಿಕರಿಗೆ ನೀಡಿದ್ದಲ್ಲದೆ, ನಕಲಿ ಮತ್ತು ಅನರ್ಹ ಕಾರ್ಮಿಕ ಕಾರ್ಡ್ಗಳ ರದ್ದತಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು, ನಿಜವಾದ ಕಾರ್ಮಿಕರಿಗೆ ಕಾರ್ಮಿಕ ಕಾಡ್ ð ಸಿಗುವಂತೆ ಮಾಡಿದ್ದು ಕಾರ್ಮಿಕ ಸಂತೋಷ್ ಲಾಡ್ ಅವರ ಮಹತ್ತ ಕಾರ್ಯವಾಗಿದೆ ಎಂದು ಗಿರೀಶ್ ವಿವರಿಸಿದರು.

ವಿಶೇಷವಾಗಿ ಸರ್ಕಾರ ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಅಧಾರದಲ್ಲಿ ಸೇವೆ ನೀಡುವ ಮ್ಯಾನ್ ಪವರ್ ಏಜೆನ್ಸಿಗಳಡಿ ಕೆಲಸ ಮಾಡುವ ಕಾರ್ಮಿಕರಿಗೆ ಭದ್ರತೆ ಒದಗಿದಸುವ ಉದ್ದೇಶದಿಂದ ಜಿಲ್ಲಾ ಕಾರ್ಮಿಕ ಸೇವಾ ಸಹಕಾರ ಸಂಘ ಗಳನ್ನು ಸ್ಥಾಪಿಸಲಾಗುತ್ತಿದೆ. ಇದನ್ನು ಈಗ ಬೀದರ್ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಮುಂದೆ ಮುಂದೆ ಇದು ಎಲ್ಲಾ ಜಿಲ್ಲೆಗಳಿಗೂ ಬರಲಿದೆ. ಇಂತಹ ಹತ್ತಾರು ಮಹತ್ತರ ಯೋಜನೆಗಳನ್ನು ಅವರು ಕಾರ್ಮಿಕ ಇಲಾಖೆಯಲ್ಲಿ ಮಾಡಿದ್ದಾರೆ. ಆ ಯೋಜನೆಗ ಸಂಪೂರ್ಣ ಮಾಹಿತಿ ಈ ಕಿರು ಹೊತ್ತಿಗೆಯಲ್ಲಿದೆ. ಇದನ್ನು ಯುವ ಕಾಂಗ್ರೆಸ್ ಮೂಲಕವೇ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಂಚಲಾಗುತ್ತದೆ ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ಕೆ.ರಂಗನಾಥ್, ಡಾ. ಶರತ್ ಮರಿಯಪ್ಪ, ಎಂ. ಪ್ರವೀಣ್ ಕುಮಾರ್,ಲೋಕೇಶ್, ಎಸ್. ಕುಮರೇಶ್ , ಸಂದೇಶ್, ರಾಕೇಶ್, ಇರ್ಫಾನ್, ಸಚಿನ್, ಮೋಹನ್, ಸ್ವರೂಪ್, ಎಂ. ರಾಹುಲ್, ಪವನ್, ರಾಯಿಲ್, ಬಸವರಾಜ್, ಕಿರಣ್ ಸೇರಿದಂತೆ ಮತ್ತಿತರರು ಇದ್ದರು.



ಭಾರತ್ ಜೋಡೊ ಪಾದಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಗೀಗ್ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ಗಿಗ್ ಕಾರ್ಮಿಕರಿಗೆ ಮಂಡಳಿ ಸ್ಥಾಪಿಸಲಾಗುವುದು ಎಂದಿದ್ದರು. ನಮ್ಮ ಸರ್ಕಾರ ಬಂದ ತಕ್ಷಣವೇ ಗಿಗ್ ಕಾರ್ಮಿಕರಿಗೆ ಮಂಡಳಿ ಸ್ಥಾಪಿಸಲಾಯಿತು. ಆ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಗಿಗ್ ಕಾರ್ಮಿಕರ ಮಂಡಳಿ ಸ್ಥಾಪಿಸಿದ ಸರ್ಕಾರ ಎನ್ನುವ ಹೆಗ್ಗಳಿಕೆ ನಮ್ಮದು. ಇದು ಸಾಧ್ಯವಾಗಿದ್ದು ಕಾರ್ಮಿಕ ಕಲ್ಯಾಣ ಸಚಿವರಾದ ಸಂತೋಷ್ ಲಾಡ್ ಅವರ ಇಚ್ಚಾಶಕ್ತಿಯಿಂದ.

- ಎಂ .ಪ್ರವೀಣ್ ಕುಮಾರ್, ಸೂಡಾ ಸದಸ್ಯ 

..........................................

 Youth Congress releases booklet

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close