SUDDILIVE ||SHIRALKOPPA
Accused of breaking the lock and committing theft arrested
ಬಾಗಿಲಿನಬೀಗ ಮುರಿದು ಕಳ್ಳತನ ನಡೆಸಿದ್ದ ಆರೋಪಿಯನ್ನ ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಆತನಿಂದ 44 ಗ್ರಾಂ ಚಿನ್ನ ಮತ್ತು ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆದಿದ್ದಾರೆ.
ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರ ಕೇರಿಯ ವಾಸಿ ಮಹಿಳೆಯೊಬ್ಬರ ವಾಸದ ಮನೆಯೊಂದರಲ್ಲಿ, ದಿನಾಂಕಃ 18-03-2025 ರಂದು ಯಾರೋ ಕಳ್ಳರು ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಮನೆಯ ಒಳಗೆ ಬೆಡ್ ರೊಂ ನಲ್ಲಿದ್ದ ಅಂದಾಜು ಮೌಲ್ಯ 3,60,000/- ರೂಗಳ 45 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 12,000/- ರೂ ನಗದು ಹಣವನ್ನು ಕಳ್ಳತನವಾಗಿತ್ತು. ಪ್ರಕರಣ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರರಣದಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಎ. ಜಿ. ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಕೇಶವ ಕೆ.ಇ ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ಸಂತೋಷ್ ಪಾಟೀಲ್ ಸಿಪಿಐ ಶಿಕಾರಿಪುರ ಟೌನ್ ವೃತ್ತ ರವರ ನೇತೃತ್ವದಲ್ಲಿ ಪ್ರಶಾಂತ್ ಕುಮಾರ ಟಿ ಬಿ, ಪಿ.ಎಸ್.ಐ ಶಿರಾಳಕೊಪ್ಪ ಪೊಲೀಸ್ ಠಾಣೆ. & ಶರತ್ ಪಿ.ಎಸ್.ಐ ಶಿಕಾರಿಪುರ ನಗರ ಪೊಲೀಸ್ ಠಾಣೆ ಹಾಗೂ ಶಿಕಾರಿಪುರ ಉಪ ವಿಭಾಗದ ಪೊಲೀಸ್ ಠಾಣೆಗಳ ಸಿಬ್ಬಂಧಿಗಳಾದ ಸಿ.ಹೆಚ್.ಸಿ ಸಂತೋಷಕುಮಾರ ಆರ್, ಸಿ.ಪಿ.ಸಿ-ರಾಕೇಶ್ ಜಿ, ಸಲ್ಮಾನ್ ಖಾನ್ ಹಾಜಿ, ಹಜರತ್ ಅಲಿ, ಪ್ರಶಾಂತ್ ಕುಮಾರ್, ಜಗದೀಶ್, ಗಿರೀಶ್ ನಾಯ್ಕ್ & ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ವಿಭಾಗದ ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್ ಹಾಗೂ ಎ ಪಿ ಸಿ ಆದರ್ಶ ರವರುಗಳನ್ನೊ ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ಪ್ರಕರಣದ ಆರೋಪಿ ಕೃಷ್ಣಪ್ಪ, 24 ವರ್ಷ, ವಾಸ ನಿಡನೇಗಿಲು ಗ್ರಾಮ ಹಿರೆಕೇರೂರು ತಾಲ್ಲೂಕು, ಹಾವೇರಿ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಅಂದಾಜು ಮೌಲ್ಯ 4,36,000/- ರೂಗಳ 44 ಗ್ರಾಂ 840 ಮಿಲಿ ತೂಕದ ಬಂಗಾರದ ಆಭರಣಗಳನ್ನು ಹಾಗೂ ಬಜಾಜ್ ಪಲ್ಸರ್ ಬೈಕ್ ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
committing theft arrested