Suddilive || Bhadravathi
Forest case against KRS party leader
ಭದ್ರಾವತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನೌಕರರೆಲ್ಲಾ ಸೇರಿ ಕೆಆರ್ ಎಸ್ ಪಕ್ಷದ ನಾಯಕನ ಮೇಲೆ ಮುಗಿ ಬಿದ್ದಿವೆ. ಆತನ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಹಾಗೂ ಅವ್ಯಚ್ಯ ಶಬ್ದಗಳಿಂದ ಬೈದಿರುವ ಹಿನ್ನಲೆಯಲ್ಲಿ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಆರ್ ಎಸ್ ಪಕ್ಷದ ಸ್ಥಾಪಿತರಾದ ರವಿಕೃಷ್ಣ ರೆಡ್ಡಿ ಹಾಗೂ ಆ ಪಕ್ಷದ ನಾಯಕರು ಸರ್ಕಾರಿ ಅಧಿಕಾರಿಗಳ ವಿರುದ್ಧ ಸುದ್ದಿ ಮಾಡುವುದು ಕಾಮನ್, ಇದೇ ಭದ್ರಾವತಿಯಲ್ಲಿ ಮರಳು ಪ್ರಕರಣದಲ್ಲಿ ಮಹಿಳಾ ಅಧಿಕಾರಿಯ ಮೇಲೆ ಬೈದಾಗ ಪ್ರಪ್ರಥಮ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಖಂಡಿಸಿದ್ದರು.
ಅಂತಹ ಪಕ್ಷದ ತೀರ್ಥೇಶ್ ಸಿ ವಿರುದ್ಧ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪದ ಮೇರೆಗೆ ದೂರು ದಾಖಲಿಸಲಾಗಿದೆ. ಭ್ರಷ್ಠಾಚಾರ, ಅಧಿಕಾರಿಗಳ ಕರ್ತವ್ಯದ ಬಗ್ಗೆ ಜನರ ಜಾಗೃತಿ ಮೂಡಿಸಲು ಫಣತೊಟ್ಟಿರುವ ಈ ಸಂಘಟನೆ ನಾಯಕನನ್ನ ಹಣಿಯುವ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿರುವ ಅನುಮಾನವೂ ಹೆಚ್ಚಿಸಿದೆ.
ತೀರ್ಥೇಶ್ ಮಾಡಿದ್ದು ಇಷ್ಟೆ, ಶುಕ್ರವಾರ ಮೇ.2 ರಂದು ಮಧ್ಯಾಹ್ನ 1-30 ರಂದು ಭದ್ರಾವತಿ ಉಪ ಅರಣ್ಯ ಇಲಾಖೆಯ ಅ್ಇಸೂಚಿತ ಅಕ್ಷರಸ್ಥ ಸಹಾಯಕ ಪ್ರಕಾಶ್ ಅವರ ಮಗಳ ಮದುವೆಗೆ ಅರ್ಧ ದಿನ ಸಾಂಧರ್ಭಿಕ ರಜೆ ಹಾಕಿ ನಾಲ್ಕೈದು ಸಿಬ್ಬಂದಿಗಳು ಹೋಗಿದ್ದರು.
ಆ ವೇಳೆ ಬಂದ ಕೆಆರ್ ಎಸ್ ನಾಯಕ ತೀರ್ಥೇಶ್ ಮತ್ತು ಇತರರು ಕಚೇರಿಗೆ ಬಂದು ವಿಡಿಯೋ ಮಾಡಿಕೊಂಡಿದ್ದರು. ನಂತರ ನೌಕರರು ಬರುವವರೆಗೆ ಕಾದು ನಂತರ ಕಚೇರಿಗೆ ಬಂದ ಸಿಬ್ಬಂದಿಗಳಿಗೆ ತೀರ್ಥೇಶ್ ಮತ್ತು ಆತನ ಜೊತೆ ಬಂದವನು ಮದುವೆ ಚೆನ್ನಾಗಿತ್ತಾ, ಮದುವೆ ಮಾಡಿಸ್ತೀವಿ ತಾಳಿ ಎಂದು ವ್ಯಂಗ್ಯವಾಡಿದ್ದಾರೆ.
ಗೌತಮ್, ಶ್ರೀಮತಿ ನಂದ, ಮೊನೀಶಾ, ಸರೋಜಮ್ಮ, ವಸಂತಮ್ಮ, ಗಂಗಮ್ಮ ಇವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ಆರೋಪಿಸಲಾಗಿದೆ. 100 ಗೆ ಕರೆ ಮಾಡಿದಾಗ ಪೊಲೀಸರು ಬಂದು ಹೋದರೂ ಇವರು ಗಲಾಟೆ ಮಾಡಿರುವ ಆರೋಪ ಮಾಡಲಾಗಿದೆ.
case against KRS party leader