Suddilive || Ripponpete
ಅರಸಾಳುವಿನಲ್ಲಿ ಭೀಕರ ಬೈಕ್ ಅಪಘಾತ – ಯುವಕ ಸಾವು-Fatal bike accident in Arasalu – young man dies
ಹೋಬಳಿಯ ಅರಸಾಳು ಕೆರೆ ಏರಿ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಅಪಘಾತವಾಗಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮೃತಪಟ್ಟ ಯುವಕನನ್ನು ಅರಸಾಳು ಗ್ರಾಮದ ಅನೂಪ್ ( 22) ಎಂದು ಗುರುತಿಸಲಾಗಿದೆ.
ಖಾಸಗಿ ಮೆಡಿಕಲ್ ಕಂಪನಿಯಲ್ಲಿ ರೆಪ್ ಆಗಿ ಕಾರ್ಯನಿರ್ವಹಿಸುತಿದ್ದ ಅನೂಪ್ ಕಾರ್ಯನಿಮಿತ್ತ ರಿಪ್ಪನ್ ಪೇಟೆಗೆ ತೆರಳಿ ಅರಸಾಳುವಿಗೆ ಹಿಂದಿರುಗುತಿದ್ದಾಗ ಅರಸಾಳು ಗ್ರಾಮದ ಕೆರೆ ಏರಿ ಮೇಲಿನ ಕಬ್ಬಿಣದ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿದೆ. ಕೆರೆ ಏರಿ ಮೇಲೆ ಹೋಗುತ್ತಿರುವಾಗ ಎದುರಿನಿಂದ ಬಂದ ವಾಹನ ಸೈಡ್ ನೀಡದೇ ಇದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.
ಈ ಘಟನೆಯಲ್ಲಿ ಬೈಕ್ ನ ಹಿಂಬದಿ ಸವಾರನಿಗೂ ಕಾಲು ಮತ್ತು ಕೈಗೆ ಗಂಭೀರ ಗಾಯಗಳಾಗಿದೆ ಎನ್ನಲಾಗುತ್ತಿದೆ ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಿಪ್ಪನ್ ಪೇಟೆ ಆಸ್ಪತ್ರೆಯಲ್ಲಿರಿಸಲಾಗಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Fatal bike accident