SUDDILIVE || THIRTHAHALLI
ಬೈಕ್ ಮೇಲೆ ವಿದ್ಯುತ್ ತಂತಿ ಬಿದ್ದು ಯುವ ಕಲಾವಿದ ಸಾವು Young artist dies after electric wire falls on bike
ಬೈಕ್ ನಲ್ಲಿ ಚಲಿಸುವಾಗ ವಿದ್ಯುತ್ ತಂತಿವೊಂದು ತುಂಡಾಗಿ ಬಿದ್ದ ಪರಿಣಾಮ ಯುವ ಯಕ್ಷಗಾನ ಕಲಾವಿದ ಸಾವು ಕಂಡಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಸಂಭವಿಸಿದೆ
ನಿನ್ನೆ ತೀರ್ಥಹಳ್ಳಿಯ ಕೊಪ್ಪ ಸಮೀಪದ ಕವಡೆಕಟ್ಟೆ ಬಳಿ ಸೂರಾಲು ಮೇಳದ ಯಕ್ಷಗಾನ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ರದ್ದು ಆಗಿದ್ದರಿಂದ ಯಕ್ಷಗಾನ ಕಲಾವಿದರಾದ ರಂಜಿತ್ ಬನ್ನಾಡಿ ಹಾಗೂ ವಿನೋದ್ ರಾಜ್ ಬೈಕ್ ನಲ್ಲಿ ಹೋಗುತ್ತಿದ್ದರು.
ದ್ವಿಚಕ್ರ ವಾಹನದ ಮೇಲೆ ವಿದ್ಯುತ್ ಕಂಬದ ತಂತಿಯೊಂದು ಬಿದ್ದು ಕಲಾವಿದ ರಂಜಿತ್ ಬನ್ನಾಡಿ ಸಾವನ್ನಪ್ಪಿದರೆ ವಿನೋದ್ ರಾಜ್ ಎಂಬುವವರಿಗೆ ಗಾಯವಾಗಿದೆಗಾಯಗೊಂಡ ವಿನೋದ್ ರಾಜ್ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
electric wire falls on bike