ತೀರ್ಥಹಳ್ಳಿ ಟು ಶಿವಮೊಗ್ಗ, 127 ಗ್ರಾಂ ಚಿನ್ನಾಭರಣ ಕಳವು-Thirthahalli to Shivamogga

 SUDDILIVE || SHIVAMOGGA

 ತೀರ್ಥಹಳ್ಳಿ ಟು ಶಿವಮೊಗ್ಗ 127 ಗ್ರಾಂ ಚಿನ್ನಾಭರಣ ಕಳವು-Thirthahalli to Shivamogga, 127 grams of gold jewellery stolen

Thirthahalli, shivamogga


ತೀರ್ಥಹಳ್ಳಿಯಿಂದ ಶಿವಮೊಗ್ಗದ ಗಜಾನನ ಗೇಟ್ ವರೆಗೆ ಬರುತ್ತಿದ್ದ ಮಹಿಳೆಯ ಹತ್ತಿರವಿದ್ದ 4.09 ಲಕ್ಷ ರೂ ಮೌಲ್ಯದ 127 ಗ್ರಾಂ ಚಿನ್ನಾಭರಣ ಕಳುವಾಗಿದ್ದು, ಮಹಿಳೆಯ ಪಕ್ಕದಲ್ಲಿ ಸಹಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಮತ್ತೋರ್ವ ಅಪರಿಚಿತದ ಮಹಿಳೆಯು ಚಿನ್ನಾಭರಣದ ಬ್ಯಾಗ್ ಕಳುವು ಮಾಡಿರುವ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಲಾಗಿದೆ. 

ಅಗಸವಳ್ಳಿಯ ಮಹಿಳೆಯೊಬ್ಬರು ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಮದುವೆಗೆ ಹೋಗಿದ್ದು, ಮದುವೆ ಮುಗಿಸಿ ತೀರ್ಥಹಳ್ಳಿಯ ಕೊಂಡ್ಲೂರಿನಲ್ಲಿರುವ ಅಕ್ಕನ ಮನೆಗೆ ಹೋಗಿ ಮೇ.11 ರಂದು ಖಾಸಗಿ ಬಸ್ ನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದರು. ಈ ವೇಳೆ ಪಕ್ಕದಲ್ಲಿ ಅಪತಿಚಿತ ಮಹಿಳೆಯೊಬ್ಬರು ಬಂದು ಕುಳಿತಿದ್ದರು. 

ತನ್ನ ಕಾಲಿನ ಕೆಳಗೆ ಇಟ್ಟುಕೊಂಡಿದ್ದ ಬ್ಯಾಗ್ ನ್ನ ಅರಿಚಿತ ಮಹಿಳೆ ತನ್ನ ಕಾಲು ಚಾಚಲು ಕಷ್ಟವಾಗುತ್ತಿದೆ. ಸಪೋರ್ಟಾಗಿ ಅಗಸವಳ್ಳಿ ಮಹಿಳೆಯಿಂದ ಪಡೆದುಕೊಂಡು ತನ್ನ ಕಾಲಿನ ಅಡಿ ಇಟ್ಟುಕೊಂಡಿದ್ದಳು. ಹರಕೆರದ ಬಳಿ ಬಸ್ ಬರುತ್ತಿದ್ದಂತೆ ಅಪರಿಚಿತ ಮಹಿಳೆ ಕಾಲಿನ ಅಡಿಯಲ್ಲಿದ್ದ ಬ್ಯಾಗ್ ನ್ನ ಬಗ್ಗಿ ಬಗ್ಗಿ ನೋಡುತ್ತಿದ್ದರು ಎಂಬುದನ್ನ ಅಗಸವಳ್ಳಿ ಮಹಿಳೆ ಗಮನಿಸಿದ್ದಾರೆ.

ಶಿವಮೊಗ್ಗದ ಗಜಾನನ ಗೇಟ್ ಬಳಿ ಬಸ್ ಬರುತ್ತಿದ್ದಂತೆ ಅಗಸವಳ್ಳಿ ಮಹಿಳೆ ಕೆಳಗಿಳಿದಿದ್ದಾರೆ. ಬ್ಯಾಗ್ ಗಳನ್ನ ಪರಿಶೀಲಿಸಿದ್ದಾರೆ. 127 ಗ್ರಾಂ ಬ್ಯಾಗ್ ಇಲ್ಲದಿರುವುದು ತಿಳಿದುಬಂದಿದೆ. ಅಪರಿಚಿತ ಮಹಿಳೆಯ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. 

Thirthahalli to Shivamogga 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close