ಕ್ರೀಡಾಪಟುವಿಗೆ ಸನ್ಮಾನಿಸಿ ಆರ್ಥಿಕ ನೆರವು-honored with financial assistance

SUDDILIVE || SHIVAMOGGA

ಕ್ರೀಡಾಪಟುವಿಗೆ ಸನ್ಮಾನಿಸಿ ಆರ್ಥಿಕ ನೆರವು-Sportsperson honored with financial assistance

ಅಂತರಾಷ್ಟ್ರಿಯ ಮಟ್ಟದ ಸ್ಕೆಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವ ಶಿವಮೊಗ್ಗದ ಯುವ ಪ್ರತಿಭೆಯನ್ನ ಜಿಲ್ಲಾ ಜೆಡಿಎಸ್ ಸನ್ಮಾನಿಸಿದೆ‌. ಭಾಗಿಯಾಗುತ್ತಿರುವ ರೋಷನ್ ರವರಿಗೆ ಆರ್ಥಿಕ ನೆರವು ನೀಡಲಾಯಿತು.

ಇಂಡೋನೆಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಕೆಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿದಿಸುತ್ತಿರುವ ಶಿವಮೊಗ್ಗದ ಯುವ ಪ್ರತಿಭೆ ರೋಷನ್ ರವರಿಗೆ ಇಂದು ನಗರ ಜೆಡಿಎಸ್ ವತಿಯಿಂದ ನಗರಾಧ್ಯಕ್ಷ ದೀಪಕ್ ಸಿಂಗ್ ಅದ್ಯಕ್ಷತೆಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಕಡಿದಾಳು ಗೋಪಾಲ್ ರವರು ಹಾಗೂ ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಆದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರ ನೇತೃತ್ವದಲ್ಲಿ ಅಭಿನಂದಿಸಿ ಪಂದ್ಯಾವಳಿಯಲ್ಲಿ ಗೆದ್ದು ಭಾರತಕ್ಕೆ ಮತ್ತಷ್ಟು ಕೀರ್ತಿ ತರುವಂತೆ ಹಾರೈಸಿ 

ಇದೆ ಸಂದರ್ಭ ಜಿಲ್ಲಾ ಜೆಡಿಎಸ್ ಪ್ರದಾನ ಕಾರ್ಯದರ್ಶಿ ಸಂಗಯ್ಯ, ಜಿಲ್ಲಾ ವಕ್ತಾರ ನರಸಿಂಹ ಗಂಧದಮನೆ, ಜೆಡಿಎಸ್ ಮುಖಂಡರುಗಳಾದ ಕೃಷ್ಣ ದಯಾನಂದ್, ಲೋಹಿತ್, ಯುವ ಜೆಡಿಎಸ್ ನ ಸಂಜಯ್ ಕಶ್ಯಪ್, ಮಂಜುನಾಥ್, ಮಾಧವ್ ಮೂರ್ತಿ, ಲೋಹಿತ್, ಗೋಪಿ ಮೊದಲಿಯರ್, ವೆಂಕಟೇಶ್, ಸಿದ್ದೇಶ್ ವೀರೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

honored with financial assistance

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close