ಭಾರತೀಯ ಸೈನಿಕರ ಆತ್ಮ ವಿಶ್ವಾಸ ಹೆಚ್ಚಿಸಲು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಮಸೀದಿಗಳಲ್ಲಿ ಪ್ರಾರ್ಥನೆ-boost the self-confidence of Indian soldiers

SUDDILIVE || SHIVAMOGGA

 ಭಾರತೀಯ ಸೈನಿಕರ ಆತ್ಮ ವಿಶ್ವಾಸ ಹೆಚ್ಚಿಸಲು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಮಸೀದಿಗಳಲ್ಲಿ ಪ್ರಾರ್ಥನೆ-Special pujas in temples, prayers in mosques to boost the self-confidence of Indian soldiers

Indian, soldiers


ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ದದ ಕಾರ್ಮೋಡ ಕವಿದಿದೆ. ಈ ಕಾರ್ಮೋಡದ ಹಿನ್ನೆಲೆಯಲ್ಲಿ ಭಾರತೀಯ ಸೇನೆಗೆ ಆತ್ಮ ವಿಶ್ವಾಸ ಹೆಚ್ಚಿಸಲು ಹಲವು ದೇವಸ್ಥಾನ ಹಾಗೂ ವಕ್ಫ್ ನ ಮಸೀದಿಗಳಲ್ಲಿ ಪೂಜೆ ಮತ್ತು ವಿಶೇಷ ಪ್ರಾರ್ಥನೆ ನಡೆದಿದೆ. 

ಬೆಳಿಗ್ಗೆ ಕೋಟೆ ಸೀತಾರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನಡೆಸಲಾಯಿತು. ಆ ಪೂಜೆಯಲ್ಲಿ ಎಂಎಲ್ಎ ಚೆನ್ನಬಸಪ್ಪ ಹಾಗೂ ಇತರ ಬಿಜೆಪಿ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಶಾಸಕ ಶೌರ್ಯದ ಆರಾಧನೆ – ಸೇನೆಯ ವಿಜಯಕ್ಕೆ ನಮ್ಮ ಪ್ರಾರ್ಥನೆಯಾಗಿದೆ. ಕಾಶ್ಮೀರ ಕಣಿವೆ ಪೆಹಲ್ಗಮ್ ನಲ್ಲಿ ಉಗ್ರರ ಹೇಡಿ ಕೃತ್ಯಕ್ಕೆ ಪ್ರತೀಕಾರವಾಗಿ ಸತತ ಮೂರು ದಿನಗಳಿಂದ ನಡೆಯುತ್ತಿರುವ 'ಆಪರೇಷನ್ ಸಿಂಧೂರ್' ಯಶಸ್ಸಿಗೆ ಹಾಗೂ ಭಯೋತ್ಪಾದಕರನ್ನು ಹೊಡೆದುರುಳಿಸುವಂತೆ ಪ್ರಾರ್ಥಿಸಲಾಗಿದೆ ಎಂದರು. 


ಅದರಂತೆ ಪಿಳ್ಳಂಗೆರೆಯ ಶ್ರೀಲಕ್ಷ್ಮೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದರೆ,  ವಕ್ಫ್ ಮಸೀದಿಗಳಲ್ಲಿ ಭಾರತೀಯ ಸೈನಿಕರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಶುಕ್ರವಾರದ ನಮಾಜ್ ನಂತರ ವಿಶೇ  ಪ್ರಾರ್ಥನೆ ನಡೆದಿದೆ. ವಕ್ಫ್ ಸಚಿವ ಜಮೀರ್ ಅಹಮದ್ ಅವರ  ಮಹತ್ವದ ಸೂಚನೆಯಲ್ಲಿ ಈ ಪ್ರಾರ್ಥನೆ ಮಹತ್ವ ಪಡೆದುಕೊಂಡಿದೆ. 


ಅದರಂತೆ ಪ್ರಿಯದರ್ಶಿನಿ ಶಾಕೆಯ ಮಕ್ಕಳಿಂದ ಭಾರತೀಯ ಸೈನೆಗಾಗಿ ಶಿವಪ್ಪ ನಾಯಕ ಪ್ರತಿಮೆ ಬಳಿ ಸಲ್ಯೂಟ್ ಇಂಡಿಯನ್ ಆರ್ಮಿ ಎಂದು ಬ್ಯಾನರ್ ಹಿಡಿದು ಸಲ್ಯೂಟ್ ಹೊಡೆಯಲಾಯಿತು.

ಈ ಕೋಟೆ ಆಂಜನೇಯ ಸ್ವಾಮಿದೇವಸ್ಥಾನದಲ್ಲಿ ನಡೆದ ಪೂಜೆಯಲ್ಲಿ ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್ ಕೆ, ನಗರಾಧ್ಯಕ್ಷರಾದ, ಮೋಹನ್ ರೆಡ್ಡಿ, ಜಿಲ್ಲಾ ಹಾಗೂ ನಗರದ ಪ್ರಮುಖರು, ಮೋರ್ಚಾಗಳ ಪದಾಧಿಕಾರಿಗಳು ಸೇರಿದಂತೆ ನಮ್ಮ ಕಾರ್ಯಕರ್ತರು ಉಪಸ್ಥಿತರಿದ್ದರು.

boost the self-confidence of Indian soldiers

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close