ಧ್ಯಾನವೂ ಸಹ ಪೊಲೀಸ್ ತರಬೇತಿಯಲ್ಲಿ ಕಲಿಕೆಯ ಭಾಗ-ಸಿಪಿಐ ಶ್ರೀಶೈಲ ಕುಮಾರ್-Meditation is also a part of learning in police training

 SUDDILIVE || BHADRAVATHI

ಧ್ಯಾನವೂ ಸಹ ಪೊಲೀಸ್ ತರಬೇತಿಯಲ್ಲಿ ಕಲಿಕೆಯ ಭಾಗ-ಸಿಪಿಐ ಶ್ರೀಶೈಲ ಕುಮಾರ್-Meditation is also a part of learning in police training - CPI's Srishaila Kumar

Meditation, training

ಪೊಲೀಸ್ ತರಬೇತಿಯಲ್ಲಿ ಸಹ ಧ್ಯಾನವು ಒಂದು ಕಲಿಕೆಯ ವಿಭಾಗವಾಗಿರುತ್ತದೆ ಎಂದು ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ತಿಳಿಸಿದರು.

ಭಾನುವಾರ ಹಿಂದೂ ಮಹಾಸಭಾ ಸಭಾಂಗಣದಲ್ಲಿ ಏರ್ಪಡಿಸಿದ್ದ   ಪಿರಮಿಡ್ ಆಧ್ಯಾತ್ಮಿಕ ಸಮಾಜದ ಕ್ಷಣ ಎಂಬ ಶಿರೋ ನಾಮೆಯ ಸಸ್ಯಹಾರ ಸೇವನೆ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು 

ಪ್ರಸ್ತುತ ಜ್ಞಾನದ ಮಹತ್ವ ಪೊಲೀಸ ಇಲಾಖೆಗೆ ಅತ್ಯವಶ್ಯಕವಾಗಿದೆ ಸದಾ ಉದ್ವಿಕತೆ ಯಲ್ಲಿ ಇರುವ ಪೊಲೀಸ್ ಇಲಾಖೆಗೆ ಧ್ಯಾನ ಅತ್ಯವಶ್ಯಕ ಎಂದು ಅಭಿಪ್ರಾಯಸಿದರು ದೇಹವನ್ನು ಮನಸ್ಸನ್ನು ಒಂದುಗೂಡಿಸುವುದು ಧ್ಯಾನ ಹಣವೆಂಬುದು ಸಂಬಂಧಕ್ಕೆ ಬೆಲೆ ಕಡಿಮೆ ಮಾಡುತ್ತದೆ ಇದನ್ನು ಕಡಿವಾಣ ಹಾಕಲು ಧ್ಯಾನ ಅವಶ್ಯ ಎಂದರು ಪ್ರಸ್ತುತ ಮೊಬೈಲ್ ಬಳಕೆಯಿಂದ ಸೈಬರ್ ಅಪರಾಧಗಳು ಹೆಚ್ಚಳವಾಗುತ್ತಿದೆ ಇದರಿಂದಾಗಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿ ಮೊಬೈಲ್ ಗಳ ಮೂಲಕ ಕಾಲ ಕಳೆಯುವ ಯುವಜನತೆ ಆ ವೇಳೆಯನ್ನು ಧ್ಯಾನ ಮಾಡಲು ಉಪಯೋಗಿಸಿ ಎಂದು ಕರೆ ನೀಡಿದರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರಿಗೆ ವರ್ಷಕ್ಕೊಮ್ಮೆ ವೈದ್ಯಕೀಯ ಪರೀಕ್ಷೆ ಖಡ್ಡಾಯವಾಗಿದ್ದು ತಪಾಸಲೆ ಒಳಗಾದ ಪೊಲೀಸರು ಅನಾರೋಗ್ಯದಿಂದ ಹೆಚ್ಚು ದಿನವಿದ್ದಲ್ಲಿ  ಅಂತಹವರಿಗೆ ಮಾಂಸಹಾರ ಸೇವನೆ ಯಿಂದ ದೂರವಿರಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ ಸಾಧನೆ ಮಾಡಿದ  ಕ್ರೀಡಾಪಟುಗಳು ಮಾಂಸಹಾರ ಸೇವನೆ ಮಾಡುವುದಿಲ್ಲ ಇದರಿಂದಾಗಿ ಕ್ರೀಡಾಪಟುಗಳ ಮನಸು ಸೃಷ್ಟಿತಿಯಲ್ಲಿದ್ದು ದೇಹವು ಬಲಿಷ್ಠ ಉಳ್ಳುವುದರಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜನ ದೊರೆಯುವುದು ಎಂದರು 

ಪಿರಮಿಡ್ ಆಧ್ಯಾತ್ಮಿಕ ಸಮಾಜದ ಕ್ಷಣ ಸಂಸ್ಥೆಯ ದಾವಣಗೆರೆ ವಿಭಾಗದ ಪ್ರಮುಖ ಮಾರುತಿ ರಾವ್ ಮಾತನಾಡಿ ಧ್ಯಾನವು ಋಷಿಗಳಿಂದ ಪ್ರಾರಂಭವಾಗಿದ್ದು ಪ್ರಸ್ತುತ ಜಟಿಲತೆಯಿಂದ ಬಳಲುವ ಮನಸ್ಸಿಗೆ ಭೇದ ಭಾವವಿಲ್ಲದೆ ಧ್ಯಾನವೊಂದೇ ಋಷಿ ಮುನಿಗಳು ಧ್ಯಾನದ ಮೂಲಕ ತಪಸ್ಸನ್ನು ಮಾಡಿ ಪ್ರಪಂಚಕ್ಕೆ ಒಳಿತನ್ನು ತಂದು ಕೊಟ್ಟವರು ಅದನ್ನು ಉಳಿಸಿಕೊಳ್ಳಲು ನಾವಿಂದು ಧ್ಯಾನ ಮಾಡುವುದು ಆತ್ಯವಶ್ಯಕ ಎಂದರು ವಯಸ್ಸಿನ ಅಂತರವಿಲ್ಲ, ಯಾವುದೇ ಸ್ಥಳದಲ್ಲಾದರೂ ಧ್ಯಾನವನ್ನು ಮಾಡಬಹುದು ಅನ ಎಂದರೆ ಪಡೆಯುವುದು ಅಪನ ಎಂದರೆ ಬಿಡುವುದು ಸಚಿ ಎಂದರೆ ಉಸಿರನ್ನು ಗಮನಿಸುವುದು ಧ್ಯಾನದಲ್ಲಿ ಇರುವ ಅಂಶಗಳು ಧ್ಯಾನವನ್ನು ಮಾಡಲು ಇಂತಹ ವೇಳೆ ಎಂಬುದು ನಿಗದಿಯಿಲ್ಲ ಎಂದರು

ಪ್ರಸ್ತುತ ಜಂಜಾಟದಲ್ಲಿ ಪ್ರತಿಯೊಬ್ಬರಿಗೂ ಅವಶ್ಯವಿರುವ ಆರೋಗ್ಯ ಕಾರ್ಯಕ್ರಮಕ್ಕೆ ಆಗಮಿಸಲು ಮೇಲೆ ಸಿಗದಿರುವುದು ವಿಷಾದನೀಯ ಎಂದು ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಅಭಿಪ್ರಾಯಿಸಿದರು ಧ್ಯಾನವನ್ನು ಮರೆತರೆ ನಮ್ಮನ್ನು ನಾವು ಕಳೆದುಕೊಂಡಂತೆ ಇದರಿಂದಾಗಿ ಪರಿಸರ ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ ಮೈ ಮನಸ್ಸುಗಳಿಗೆ ಧ್ಯಾನವೇ ಉತ್ತಮವಾದ ಆರೋಗ್ಯಕರವಾದ ಔಷಧಿ ಧ್ಯಾನಕ್ಕೆ ಬರುವಾಗ ತಮ್ಮ ಅಕ್ಕಪಕ್ಕದವರನ್ನು ಸ್ನೇಹಿತರನ್ನು ಬಂಧುಗಳನ್ನು ಕರೆತಂದು ಧ್ಯಾನದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು ಸಮಯವನ್ನು ವ್ಯರ್ಥ ಮಾಡಬೇಡಿ ಸಮಯ ಸಿಕ್ಕಾಗ ಧ್ಯಾನ ಮಾಡಿ ಮಾಂಸಹಾರ ಸಸ್ಯಹಾರ ಸೇವನೆ ಗೊಂದಲದಲ್ಲಿದ್ದರು ಸಸ್ಯಹಾರ ಆರೋಗ್ಯಕ್ಕೆ ಸನ್ಹವಿದೆ ಸಸ್ಯಹಾರ ಸೇವಿಸಿದರೆ ಕೆಲವೇ ಗಂಟೆಗಳಲ್ಲಿ ಜೀರ್ಣವಾಗುವುದು ಆದರೆ ಮಾಂಸಹಾರ ಜೀರ್ಣ ಕ್ರಿಯೆ ತಡವಾಗುವುದು ಜ್ಞಾನದಿಂದ ಮನುಷ್ಯನ ಆರೋಗ್ಯ ವೃದ್ಧಿಗೊಳ್ಳುವುದರಿಂದ ಉತ್ತಮ ಆಲೋಚನೆಗಳು ಬರುವುದು ಇದರಿಂದಾಗಿ ರಾಷ್ಟ್ರ ಸಮೃದ್ಧಿಯಾಗುವುದು ಎಂದರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಶ್ರೀ ನಗೇಶ್ ಮಾತನಾಡಿ ಧ್ಯಾನವನ್ನು ತಮ್ಮ ಪ್ರತಿನಿತ್ಯದ ಕಾರ್ಯಗಳ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು ಇದರಿಂದಾಗಿ ಮಾನವ ದೇಹವು ಸುಸ್ಥಿತಿಯಲ್ಲಿ ಇರಲು ಸಾಧ್ಯ ಅಲ್ಲದೆ ಅನಾರೋಗ್ಯದಿಂದ ದೂರವಿರಲು ಧ್ಯಾನ ಯಾವುದೇ ಖರ್ಚಿಲ್ಲದೆ ಸಿಗುವ ಒಂದು ಉತ್ತಮ ಔಷದ ಎಂದರು ಧ್ಯಾನದ ಶಿಬಿರವನ್ನು ನಡೆಸಲು ತಮ್ಮ ಸಮಾಜದ ಸರ್ವರನ್ನು ಪಾಲ್ಗೊಳ್ಳುವಂತೆ ಕರೆ ನೀಡುವ ಮೂಲಕ ಸ್ಥಳಾವಕಾಶವನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.

ವಿಸ್ಮಯ ಪ್ರಾರ್ಥಿಸಿ ಸೌಮ್ಯ ಸ್ವಾಗತಿಸಿ ಶುಭ ಗಿರಿರಾಜ್ ಪ್ರಾಸ್ತಾವಿಕದೊಂದಿಗೆ ಕಾರ್ಯಕ್ರಮ ನಿರೂಪಿಸಿದರು  ಕಾರ್ಯಕ್ರಮದ ಮುಖಂಡ ಮೇಘ ಗೌಡ ಮಾತನಾಡಿ ಆರೋಗ್ಯ ಪಡೆಯಲು ಸರ್ವರೂ ಮುಂದೆ ಬರಬೇಕೆಂದು ಕರೆ ನೀಡಿ ತಾವು ಆನ್ಲೈನ್ ಮೂಲಕ ಜ್ಞಾನದ ಬಗ್ಗೆ ತಿಳಿಸುತ್ತಿದ್ದು ಸೇರಲು ಇಚ್ಚಿಸುವರು ತಮ್ಮ ಮೊಬೈಲ್ ಸಂಖ್ಯೆ 89 71 33 5955 ನ್ನು ಸಂಪರ್ಕಿಸುವಂತೆ ಮನವಿ ಮಾಡಿದರು

Meditation is also a part of learning in police training

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close