SUDDILIVE || SHIVAMOGGA
ಎರಡು ಸಾವಿರ ರೂ ಮುಂದಿನ ಪೀಳಿಗೆಗೆ ಒಳಿತಾಗಲಿದೆ-ಸೌಮ್ಯ ರೆಡ್ಡಿ-Rs 2,000 will benefit the next generation - Soumya Reddy
ರಾಜ್ಯದಲ್ಲಿ ಕಾಂಗ್ರೆಸ್ 140 ಸೀಟು ಬಂದಿರುವುದು ಕಾರ್ಯಕರ್ತರ ಶ್ರಮದಿಂದ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿ ನಾಲ್ಕು ವರ್ಷ ಆಡಳಿತ ನೀಡಿದರೂ ೪೦ ಪರ್ಸೆಂಟ್ ಸರ್ಕಾರ ಎಂಬ ಹೆಸರು ಬಂತು. 65 ಸ್ಥಾನಕ್ಕೆ ಸೀಮಿತವಾಯಿತು. ಕಾಂಗ್ರೆಸ್ ೧೪೦ ಸೀಟು ಬಂದಿರುವುದಕ್ಕೆ ಪಕ್ಷದ ಕಾರ್ಯಕರ್ತರು ಕಾರಣ ಎಂದರು.
ಮಹಿಳೆಯರು ಮನೆ ಬಿಟ್ಟು ಹೊರಗಡೆ ಬಂದು ಕೆಲಸ ಮಾಡುವುದು ಸುಲಭವಲ್ಲ. ರಾಜ್ಯದಲ್ಲಿ ೩.೫ ಕೋಟಿ ಮಹಿಳೆಯರಿದ್ದೇವೆ. ಮಹಿಳೆಯರಿಗೆ ಸಾಮಾಜಿಕ, ರಾಜಕೀಯ ಸ್ಥಾನಮಾನ ಸಿಗಬೇಕು ಎಂಬುದು ರಾಜೀವ್ ಗಾಂಧಿ ಕನಸು. ಆದರೂ ಪುರುಷ ಪ್ರಧಾನ ಸಮಾಜವಾಗಿಯೇ ನಮ್ಮ ದೇಶ ಗುರುತಿಸಿಕೊಂಡು ಬಂದಿದೆ. ಜಾತಿ ಧರ್ಮದ ಹೆಸರಲ್ಲಿ ಜನರನ್ನು ಹೊಡಯುವುದು ಬಿಜೆಪಿ ಕೆಲಸ. ಎಲ್ಲರನ್ನೂ ಒಂದಿಗೂಡಿಸುವುದು ಕಾಂಗ್ರೆಸ್ ಕೆಲಸ ಎಂದು ತಿಳಿಸಿದರು.
ಎರಡು ಸಾವಿರ ರೂ. ಮಹಿಳೆಯರಿಗೆ ಕೊಟ್ಟರೆ ಮುಂದಿನ ಪೀಳಿಗೆಗೆ ಒಳಿತಾಗುತ್ತದೆ. ಸ್ವಾಭಿಮಾನದಿಂದ ಉದ್ಯಮ ಶುರು ಮಾಡುತ್ತಾರೆ. ಜನರಿಗೋಸ್ಕರ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಅನೇಕ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಜಿಪಂ, ತಾಪಂ, ಪಾಲಿಕೆ ಚುನಾವಣೆ ಬರಲಿದೆ. ಅಧಿಕಾರದಲ್ಲಿದ್ದರೆ ಮಾತ್ರ ಜನರಿಗೆ ಸೇವೆ ಮಾಡಲು ಸಾಧ್ಯ. ಹಾಗಾಗಿ ಯೋಜನೆಗಳ ಬಗ್ಗೆ ಎಲ್ಲರಿಗೂ ತಿಳಿಸಬೇಕು. ವಿಶೇಷವಾಗಿ ಮಹಿಳೆಯರಿಗೆ ಮನವರಿಕೆ ಮಾಡಬೇಕು ಎಂದರು.
ಕಾಂಗ್ರೆಸ್ ನ ಇತಿಹಾಸ ದೇಶದ ಇತಿಹಾಸವಾಗಿದೆ. ಈ ವಿಷಯದಲ್ಲಿ ಬಿಜೆಪಿಯವರಿಗೆ ಹೇಳಿಕೊಳ್ಳಲು ಏನೂ ಇಲ್ಲ. ಸಂಘಟನೆ ಮಾಡಬೇಕು. ಹೆಚ್ಚು ಜನರ ಸೇವೆ ಮಾಡಬೇಕಿದೆ. ಬೂತ ಮಟ್ಟದಲ್ಲಿ ಐದೈದು ಮಹಿಳೆಯರು ಕೆಲಸ ಮಾಡಬೇಕು.ಪ್ರತಿ ಕ್ಷೇತ್ರದಲ್ಲಿ ಸದಸ್ಯತ್ವ ನೋಂದಣಿ ಹೆಚ್ಚಿಗೆ ಮಾಡಬೇಕು. ಜೊತೆ ಜೊತೆಗೆ ಕಾರ್ಯಕರ್ತರು ತಮ್ಮ ಆರೋಗ್ಯದ ಕಡೆ ಗಮನ ಕೊಡುವಂತೆ ವಿನಂತಿಸಿಕೊಂಡರು.
ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ ಮಾತನಾಡಿ, ಪಕ್ಷ ಅಧಿಕಾರಕ್ಕೆ ಬಂದಿರುವುದು ಮಹಿಳೆಯರ ಸಂಘಟನೆಯಿಂದ ಬಂದಿದೆ.ಬೇರೆಯವರೂ ಕಾರಣ ಇಲ್ಲ ಎಂದು ಹೇಳುವುದಿಲ್ಲ. ಆದರೆ ಕಳೆದ ಬಾರಿ ಕೊರತೆ ಇತ್ತು. ಬಿಜೆಪಿ ಯವರು ಮಹಿಳಾ ಸಬಲೀಕರಣ ಮಾಡಿರುವುದಾಗಿ ಹೇಳಿದೆ. ಆದರೆ ನಿಜವಾಗಿಯೂ ಶಕ್ತಿ ಕೊಟ್ಟಿದ್ದು ನಮ್ಮದು. ಸಮಾನತೆ ಕೊಟ್ಟಿರುವುದು ಕಾಂಗ್ರೆಸ್ ಪಕ್ಷ. ಸಂಘಟನೆಗೆ ಶಕ್ತಿ ಕೊಡುವ ಕೆಲಸ ನಮ್ಮಿಂದ ಆಗಲಿದೆ.
ಇಂದಿರಾಗಾಂಧಿ ಪ್ರಧಾನಿ ಆಗಿ ೨೦ ಅಂಶಗಳ ಯೋಜನೆ ಕೊಟ್ಟಿದ್ದರು. ಈಗ ಯುದ್ಧದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಒಬ್ಬ ಹೆಣ್ಣು ಮಗಳು ಆ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಗ್ಯಾರಂಟಿಗಳು ಜನರಿಗೆ ಮನವರಿಕೆ ಮಾಡಿದರೆ ಜಿಪಂ, ತಾಪಂ, ಪಾಲಿಕೆ ಚುನಾವಣೆಗಳಲ್ಲಿ ಪಕ್ಷ ಮೇಲುಗೈ ಸಾಧಿಸಲಿದೆ ಎಂಬ ವಿಶ್ವಾಸ ಹೆಚ್ಚಿಸಿದೆ.
ಕಾರ್ಯಕ್ರಮದಲ್ಲಿ ಎಂಎಲ್ ಸಿ ಬಲ್ಕಿಷ್ ಬಾನು,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ವಕ್ತಾರ ಆಯನೂರು ಮಂಜುನಾಥ್, ಜಿಲ್ಲಾ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮುಖಂಡ ಎಚ್.ಸಿ.ಯೋಗೇಶ್, ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ಜಿಲ್ಲಾಧ್ಯಕ್ಷೆ ಪುಷ್ಪಾ ಶಿವಕುಮಾರ್, ಕಲಗೋಡು ರತ್ನಾಕರ್, ಸಿ.ಎಸ್.ಚಂದ್ರಭೂಪಾಲ್, ಡಾ. ಶ್ರೀನಿವಾಸ್ ಕರಿಯಣ್ಣ, ಕಲೀಂ ಉಲ್ಲಾ ಖಾನ್, ಶಿವಕುಮಾರ್, ವಿಜಯಲಕ್ಷ್ಮಿ ಪಾಟೀಲ್ ಉಪಸ್ಥಿತರಿದ್ದರು.
Rs 2,000 will benefit the next generation