ಮೈದಾನದಲ್ಲಿ ಪ್ರತಿಭಟನೆ ಬೇಡ-ಈಶ್ವರಪ್ಪ- No protests on the ground - Eshwarappa

 Suddilive || Shivamogga

ಮೈದಾನದಲ್ಲಿ ಪ್ರತಿಭಟನೆ ಬೇಡ-ಈಶ್ವರಪ್ಪ -No protests on the ground - Eshwarappa

Protest, Eshwarappa

ಜಾತಿ ಗಣತಿ ಮತ್ತು ಜನಗಣತಿ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜಕೀಯವೂ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದರ ಕ್ರೆಡಿಟ್ ರಾಜಕಾರಣ ನಡೆಯುತ್ತಿದೆ. ರಾಜ್ಯದಲ್ಲಿ ಜಾತಿ ಜನಗಣತಿ ನಡೆದು 10 ವರ್ಷ ಆಗಿದೆ. ಜಾರಿಗೆ ತರಲು ಈಗ ಸಚಿವ ಸಂಪುಟದ ಮುಂದೆ ಬಂದಿದೆ. 2015 ರಲ್ಲಿ ಜಾತಿ ಗಣತಿ ವರದಿ ಆಯೋಗ ರಚನೆಯಾದಾಗ 2018 ಕ್ಕೆ ಅದು ಅಸೆಂಬ್ಲಿ ಮುಂದೆ ಬರಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ಬರಲಿಲ್ಲ. 

ಒಕ್ಕಲಿಗ ಮತ್ತು ಲಿಂಗಾಯಿತ ಶಾಸಕರು ಸಭೆ ಸೇರಿ ಜಾತಿಗಣತಿಯನ್ನ ವಿರೋಧಿಸುತ್ತಿದ್ದಾರೆ. ಹಾಗಾಗಿ ಜಾತಿಗಣತಿಗೆ ಮುಕ್ತಿಯಿಲ್ಲ ಎಂಬಂತಾಗಿದೆ. ಜಾತಿ ಜನಗಣತಿ ಹೊರಗಡೆ ಬಿಡುಗಡೆಯಾಗಬೇಕು. ಗೊಂದಲ ಮಾಡಬೇಡಿ ಎಂದು ಬಿಜೆಪಿ ಹೇಳುತ್ತಿದೆ. ಬಿಡುಗಡೆ ಮಾಡಬೇಡಿ ಎಂದು ಹೇಳುತ್ತಿಲ್ಲ. ತಾಕತ್ತಿದ್ದರೆ ಇಷ್ಟುದಿನಗಳ ಒಳಗೆ ಜಾತಿಗಣತಿ ಹೊರಗೆ ತನ್ನಿ ಎಂದು ಸವಾಲು ಎಸೆದರು. 

ಡೆಡ್ ಲೈನ್ ನೀಡಿ ಬಿಡುಗಡೆ ಮಾಡಿದರೆ ನಿಮ್ಮ ದೈರ್ಯವನ್ನ‌ಮೆಚ್ಚ ಬಹುದಾಗಿದೆ. ಕ್ಯಾಬಿನೆಟ್ ನಲ್ಲಿ ಒಮ್ಮೆ ಅನುಮತಿ ನೀಡಿ. ನಂತರ ತಿದ್ದುಪಡಿ ಮಾಡಲು ಅವಕಾಶವಿದೆ. ರಾಜಕಾರಣ ಮಾಡಬೇಡಿ. ಕೇಂದ್ರದ ಜಾತಿಜನಗಣತಿಯನ್ನ ಸ್ವಾಗತಿಸುವೆ. ರಾಹುಲ್ ಮತ್ತು ಖರ್ಗೆ ಸ್ವಾತಂತ್ರ್ಯ ಬಂದಾಗಿನಿಂದ ಜಾತಿ ಜನಗಣತಿ ತರಲು ಆಗಲಿಲ್ಲ. ಇದನ್ನ‌ ಮೂರು ತಿಂಗಳಲ್ಲಿ ಜಾರಿ ಮಾಡಿ ಎಂದು ರಾಹುಲ್ ಗಾಂಧಿ ಮತ್ತು ಖರ್ಗೆ ಹೇಳುದ್ದಾರೆ. ನಿಮ್ಮ ನಾಟಕವನ್ನ‌ ನಿಲ್ಸಿ ಎಂದರು. 

ನಿಮ್ಮ ಶಿಷ್ಯ ಸಿದ್ದರಾಮಯ್ಯ ಜಾತಿಗಣತಿ ಮಾಡಿ ಎಷ್ಟು ವರ್ಷ ಆಯಿತು? ಎಂದು ಪ್ರಶ್ನಿಸಿದರು. ನೀವು ಯಾವಾಗ ಜಾರಿಗೆ ತರ್ತೀರಿ ಹೇಳಿ ಎಂದರು. 

ರಾಜ್ಯದಲ್ಲಿ ಮುಸ್ಲೀಂ ಗೂಂಡಾಗಿರಿ ಹೆಚ್ಚಾಗಿದೆ. ಮುಸ್ಲೀಂ ಮೀಸಲಾತಿ ನೀಡಿದ ನಂತರ ಸಿದ್ದರಾಮಯ್ಯನವರ ಸರ್ಕಾರವನ್ನ‌ನಮ್ಮ ಸರ್ಕಾರ ಎಂದು ತಿಳಿದು ಕೊಲೆಗೆ ಇಳಿದಿದ್ದಾರೆ. ಮೊನ್ನೆ ಟಿಪ್ಪುನಗರದಲ್ಲಿ ರೌಡಿಶೀಟರ್ ಇರ್ಫಾನ್ ಯಾನೆ ಗೌತಮ್ ಮೂರು ಬಾರಿ ಗುಂಡು ಹಾರಿಸಿದ್ದಾನೆ. ಎಸ್ಪಿ ಬಂಧಿಸುವುದಾಗಿ ಹೇಳಿದ್ದಾರೆ. ಬಂಧಿಸಿದ್ದಾರೆ. ಸ್ವಾಗತಿಸುವೆ ಎಂದರು. 

ಒರಿಜಿನಲ್ ಗನ್ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಏರ್ ಗನ್ನ ಅಥವಾ ಒರಿಜಿನಲ್ ಗನ್ ಆಗಿದ್ದರೆ ಪೊಲೀಸರೆ ತೀರ್ಮಾನಿಸಲಿ. ನಿನ್ನೆ ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ನೋಡಿ ಗಾಬರಿಯಾಗಿದೆ ಪೊಲೀಸರು ಸತ್ತು ಹೋಗಿದ್ದಾರಾ ಎಂದು ಪ್ರಶ್ನಿಸಿದರು. 

ಎರಡು ವರ್ಷಗಳ ಹಿಂದೆ ಸುಹಾಸ್ ಶೆಟ್ಟಿ ಯಾರನ್ನೋ ಕೊಲೆ ಮಾಡಿದ್ದನಂತೆ, ಆತ ಇನ್ನ್ಯಾರನ್ನೋ ಕೊಲೆ ಮಾಡಿದನಂತೆ ಹಾಗಾದರೆ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆಯಾ? ಇವರು ಇವರೇ ಕೊಲೆ ಮಾಡಿಕೊಳ್ಳುವುದಾದರೆ ಪೊಲೀಸರು ಯಾಕೆ ಬೇಕು ಎಂದರು. 


ಸಿಎಂ ಅಧಿಕಾರಿಗಳಿಗೆ ಗೌರವ ನೀಡಲಿ


ಕಪ್ಪು ಬಾವುಟ ತೋರಿಸಿದ್ದು ಪ್ರಜಾಪ್ರಭುತ್ವದ ವ್ಯವಸ್ಥೆಯಾಗಿದ್ದು, ಹಾಗಂತ ಇದು ಭದ್ರತಾ ವೈಫಲ್ಯವಲ್ಲ. ಪಹಲ್ಗಾಮ್ ದಾಳಿಯನ್ನ ಸಿಎಂ ಸಿದ್ದರಾಮಯ್ಯ ಭದ್ರತಾ ವೈಫಲ್ಯ ಎಂದು ಹೇಳುವುದಾದರೆ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಯನ್ನ‌ಇಂಟೆಲಿಜೆನ್ಸಿ ಫೇಲ್ಯೂರ್ ಎಂದು ಹೇಳಲಾಗುತ್ತಾ  ಎಂದು ಪ್ರಶ್ನಿಸಿದರು. ಸಿಎಂ ಅಧಿಕಾರಿಗಳಿಗೆ ಗೌರವ ನೀಡುವುದನ್ನ ಮೊದಲು ಕಲಿಯಬೇಕು. ವೇದಿಕೆ ಮೇಲೆ ಪೊಲೀಸ್ ಅಧಿಕಾರಿಯ ಮೇಲೆ ಕೈ ಮಾಡಿರುವುದು ಸರಿಯಲ್ಲ. ಈ ಘಟನೆ ನಡೆದ ಮೇಲಾದರೂ ಯಾರೂ ಖಂಡಿಸಿಲ್ಲ ಎಂದು ದೂರಿದರು. 


ಪ್ರತಿಭಟನೆಗೆ ಅವಕಾಶ ಕೊಡಬಾರದು


ಡಿಸಿ ಕಚೇರಿ ಎದುರಿನ ಆಟದ ಮೈದಾನ ಅಥವಾ‌ ಪಾರ್ಕ್ ಗೆ ಮೀಸಲಾದ ಜಾಗ ವಕ್ಫ್ ಜಾಗವಲ್ಲ. ಹೈಕೋರ್ಟ್ ನ್ಯಾಯ ಮೂರ್ತಿ ನಾಗಪ್ರಸನ್ನ ಅವರು ವಕ್ಫ್ ವಿಷಯ ಸುಪ್ರೀಂ ನಲ್ಲಿದೆ ರಾಜ್ಯ ಸರ್ಕಾರ ಪ್ರತಿಭಟನೆಗೆ ಅವಕಾಶ ನೀಡುತ್ತಿದೆ ಎಂದು ಪ್ರಶ್ನಿಸಿದರು. ಸರ್ಕಾರದ ಪರವಾದ ವಕೀಲರು ಇನ್ನುಬಮುಂದೆ ಅನುಮತಿಯನ್ನ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾಳೆ ನಡೆಯುವ ಪ್ರತಿಭಟನೆಗೆ ಅವಕಾಶ ನೀಡಬಾರದು. 


ಕೋರ್ಟ್ ಆದೇಶ ಬಂದರೆ ಪ್ರತಿಭಟನೆ ನಿಲ್ಲಬೇಕು


ಅಲ್ಲದೆ ಈ ಆಸ್ತಿ ಪಾಲಿಕೆ ಆಸ್ತಿಯಾಗಿದೆ. ಸುನ್ನಿ ಜಮಾಯತೆ ಇಸ್ಲಾಂ ಡಿಸಿ ಕಚೇರಿ ಎದುರಿನ ಜಾಗ ವಕ್ಫ್ ಜಾಗ ಎಂದು ಮನವಿ ನೀಡಿದೆ. ಆದರೆ ಅದು ಅವರ ಜಾಗವನ್ನ ಪಾಲಿಕೆ ಜಾಗ ಎಂದಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಇವತ್ತು ಬರಬಹುದು. ಕಾನೂನು ಪ್ರಕಾರ ಏನು ಬೇಕಾದರು ಮಾಡಿ ಪರವಾಗಿಲ್ಲ. ಕೋರ್ಟ್ ಆದೇಶ ಬಂದರೆ ಪ್ರತಿಭಟನೆ ನಿಲ್ಲಿಸಬೇಕು. ಮೇ5 ರಂದು ಸುಪ್ರೀಂ ಕೋರ್ಟ್ ತೀರ್ಮಾನ ಬರಲಿದೆ. ಅಲ್ಲಿಯ ವರೆಗೆ ಪ್ರತಿಭಟನೆ ಮಾಡಬಾರದು ಎಂದು ಹೈಕೋರ್ಟ್ ಹೇಳಿದೆ ಎಂದರು. 


ಮೈದಾನಕ್ಕೆ ಒಳ್ಳೆ ಹೆಸರಿಡಿ


ಮುಸ್ಲೀಂ ವೈಯುಕ್ತಿಕ ಮಂಡಳಿ ಏ.10 ರಿಂದ ಮೇ07 ರವರೆಗೆ ಪ್ರತಿಭಟನೆಗೆ ಕರೆನೀಡಲಾಗಿದೆ. ಕೋರ್ಟ್ ಆದೇಶ ಹೊರಬಿದ್ದರೆ ನಾಳೆ ಪ್ರತಿಭಟನೆ ನಿಲ್ಲಲಿದೆ. ಮೈದಾನವನ್ನ ವಕ್ಫ್ ಸುನ್ನಿ ಈದ್ಗಾ ಮೈದಾನ ಎಂದು ಕರೆಯಲಾಗುತ್ತಿತ್ತು.  ಒತ್ತುವರಿ ಮಾಡಿ ಮಾಡಿಕೊಳ್ಳಲಾಗಿತ್ತು. ಕಾರ್ಪರೇಷನ್ ಜಾಗ ಎಂದು ನಾವು ದಾಖಲು ಕೊಟ್ಟಿದ್ದೇವೆ. ಆ ಜಾಗಕ್ಕೆ ನೀವೆ ಸಾರ್ವಜನಿಕರ ಕರೆ ನೀಡಿ ಹೊಸ ಹೆಸರು ಇಡಲು ಸಲಹೆ ನೀಡಿದರು. ಮಾಡದಿದ್ದರೆ ಸಾರ್ವಜನಿಕರು ನನಗೆ ಪತ್ರ ಬರೆಯಿರಿ ನಾನು ಆಯುಕ್ತರಿಗೆ ನಿಮ್ಮ‌ ಸಲಹೆ ಕೊಡುವೆ ಎಂದರು. 

protests on the ground - Eshwarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close