Suddilive || Shivamogga
Centre's caste census announcement is welcome - Halappa
ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿ ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯಾ ಉಪಾಧ್ಯಕ್ಷ ಹರತಾಳ ಹಾಲಪ್ಪ ತಿಳಿಸಿದರು.
ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದಿದೆ ನಮ್ಮ ಗಣತಿ ಎಷ್ಟು ಎಂಬುದು ತಿಳಿದಿರಲಿಲ್ಲ.ಕಾಂಗ್ರೆಸ್ ಬಹಳ ಸಲ ಮುಂದೂಡಿದರು. ವಿವಿಧ ಜಾತಿಗಳ ಸ್ಥಿತಿಗತಿ ತಿಳಿಯಬೇಕಿತ್ತು. 100 ವರ್ಷದ ಹಿಂದೆ ಬ್ರಿಟೀಶ್ ಸರ್ಕಾರ ಜಾತಿಗಣತಿ ಮಾಡಿತ್ತು. 100 ವರ್ಷದ ಹಿಂದಿನ ಅಂಕಿ ಅಂಶ ಹಿಡಿದು ಹೇಗೆ ಚರ್ಚೆ ಮಾಡುವುದು ಎಂಬ ಜಿಜ್ಞಾಸೆಯಿತ್ತು. ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಬೇಕಿದೆ. ಕೇಂದ್ರ ಸರ್ಕಾರ ಈ ಗಣತಿ ಮಾಡಲು ಮುಂದಾಗಿದೆ . ಅದಕ್ಕೆ ಹಣ ಬೇಕಿದೆ ಎಂದರು.
ಹಣ ಎಲ್ಲಿದೆ ಎಂದು ಕೇಳಲಾಗುತ್ತಿದೆ 12 ಸಾವಿರ ಕೋಟಿ ಬೇಕಿದೆ. 6 ತಿಂಗಳ ತಯಾರಿ ಬೇಕು. 18-20 ತಿಂಗಳು ಜನಗಣತಿ ನಡೆಯಲು ಬೇಕು. ನಂತರ ವರದಿ ಬಹಿರಂಗಕ್ಕೆ ಒಂದಿಷ್ಟು ತಿಂಗಳು ಬೇಕಿದೆ. ರಾಜ್ಯ ಸರ್ಕಾರದ ಜಾತಿ ಜನಗಣತಿಯಿದೆ. ರಾಜ್ಯ ಸರ್ಕಾರಕ್ಕೆ ಜಾತಿಜನಗಣತಿ ನಡೆಸಲು ಅಧಿಕಾರವಿಲ್ಲ. ಸಿಎಂ ಸಿದ್ದರಾಮಯ್ಯನವರೆ ಸ್ವಾಗತಿಸಿದ್ದಾರೆ. ಕೇಂದ್ರದ ಜಾತಿಗಣತಿ ಸ್ವಾಗತಾರ್ಹವೆಂದರು.
ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಖಂಡನೀಯ. ಬಿಜೆಪಿ ರಾಜ್ಯಾಧ್ಯಕ್ಷರು ಮಂಗಳೂರಿಗೆ ತಲುಪಿದ್ದಾರೆ. ಪೊಲೀಸ್ ಕಮಿಷನರ್ ಮಾತನಾಡಿರುವುದನ್ನ ನೋಡಿದ್ದೇನೆ. ಕಡಿದು ಸಾಯಿಸಲಾಗಿದೆ. ಬಂಧಿಸುವುದಾಗಿ ಹೇಳಿದ್ದಾರೆ. ಬಂದಿಸುವುದಲ್ಲ ಅವರನ್ನ ಕಂಡಲ್ಲೇ ಗುಂಡಿಕ್ಕಬೇಕು. ಅವರಿಗೆ ಆಶ್ರಯ ನೀಡುವವರನ್ನೂ ಶಿಕ್ಷಿಸಬೇಕು ಎಂದರು.
caste census