SUDDILIVE || SHIVAMOGGA
ಶಿವಮೊಗ್ಗದ ರನ್ ವೇಯಲ್ಲಿ ನಡೆಯಿತು ಮಾಕ್ ಡ್ರಿಲ್!Mock drill held on the runway in Shimoga!
ದೇಶದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಪಾಕ್ ಮತ್ತು ಭಾರತದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಎರಡನೇ ದಿನವೂ ಪಾಕ್ ನೆಲದಲ್ಲಿ ಭಾರತ ಡ್ರೋಣ್ ದಾಳಿ ನಡೆಸಿ ಏರ್ ಬೇಸ್ ನ್ನ ಹೊಡೆದುರುಳಿಸಿದೆ. ಈ ನಡುವೆ ಶಿವಮೊಗ್ಗದಲ್ಲಿ ಯುದ್ದದ ಮಾಕ್ ಡ್ರಿಲ್ ನಡೆದಿದೆ.
ದೇಶದ ಹಲವೆಡೆ ಮಾಕ್ ಡ್ರಿಲ್ ನಡೆಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಿವಮೊಗ್ಗದ ಏರ್ ಪೋರ್ಟ್ ನಲ್ಲಿ ಮಾಕ್ ಡ್ರಿಲ್ ನಡೆಸಲಾಗಿದೆ. ಶಿವಮೊಗ್ಗದ ಸೋಗಾನೆಯಲ್ಲಿರುವ ಏರ್ಪೋಟ್ ನಲ್ಲಿ ಮಾಕ್ ಡ್ರಿಲ್ ಮೂಲಕ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.
ಯುದ್ಧದ ಸಂದರ್ಭದಲ್ಲಿ ತಮ್ಮ ರಕ್ಷಣೆ ಹಾಗೂ ಸಾರ್ವಜನಿಕರ ರಕ್ಷಣೆಯನ್ನ ಹೇಗೆ ಮಾಡುವುದನ್ನ ನಡೆಸಲಾಗಿದೆ. ಗಾಯಾಳುಗಳ ರಕ್ಷಣೆ ಬಗ್ಗೆ ಮಾಕ್ ಡ್ರಿಲ್ ಮೂಲಕ ತಿಳಿಸಲಾಗಿದೆ. ಗಾಯಾಳುಗಳ ಹೊತ್ತೋಯ್ದು ಮಾಕ್ ಡ್ರಿಲ್ ಗಳ ಮೂಲಕ ರಕ್ಷಣೆಯನ್ನ ಸಿಬ್ಬಂದಿಗಳು ತಿಳಿಸಿದರು.
ಏರ್ಪೋರ್ಟ್ ಟರ್ಮಿನಲ್ ಹಾಗೂ ರನ್ ವೇ ಗಳಲ್ಲಿ ಮಾಕ್ ಡ್ರೀಲ್ ನಡೆದಿದೆ. ಮಾಕ್ ಡ್ರೀಲ್ ನಲ್ಲಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದೆ.
runway in Shimoga