SUDDILIVE || SHIVAMOGGA
ಬಸವೋತ್ಸದ ರಿಹರ್ಸಲ್ ಹೇಗಿದೆ? Basavothsava rehearsal
ನಾಳೆ ನಡೆಯುವ ಬಸವೋತ್ಸವ ಕಾರ್ಯಕ್ರಮದ ರಿಹರ್ಸಲ್ ನಡೆದಿದೆ. ನಾಳೆ ಏಕಕಾಲದಲ್ಲಿ ಸಾವಿರ ಕಂಠಗಳೊಂದಿಗೆ ಬಸವರ ವಚನಗಳು ಮೊಳಗಲು ಇಂದು ರಿಹರ್ಸಲ್ ನಡೆಸಲಾಗಿದೆ.
ನಾಳೆ ಮೇ.9 ರಂದು ಶುಕ್ರವಾರ ಸಂಜೆ 6ರಿಂದ 8:30ರ ವರೆಗೆ ಒಂದು ಐತಿಹಾಸಿಕ ಘಟನೆ ನಡೆಯಲಿದೆ. ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಈ ಕಾರ್ಯಕ್ರಮ 260 ಅಡಿ ವಿಶಾಲ ವೇದಿಕೆಯಲ್ಲಿ 1200 ಗಾಯಕರು ಹಾಡಲಿದ್ದಾರೆ. ವಿಶ್ವಗುರು ಜಗತ್ಜ್ಯೋತಿ ಬಸವೇಶ್ವರರ 38 ವಚನಗಳನ್ನು ಗಾಯನ ಮಾಡುವ ಭವ್ಯ ಕಾರ್ಯಕ್ರಮ ನಡೆಯಲಿದೆ.
ನಾಳೆ ನಡೆಯುವ ಈಐತಿಹಾಸಿಕ ಕಾರ್ಯಕ್ರಮಕ್ಕೆ ಸಾರ್ವಜನಿಕರು, ತಮ್ಮ ಸ್ನೇಹಿತರೊಂದಿಗೆ, ಬಂಧುಗಳೊಂದಿಗೆ ಮತ್ತು ಶ್ರೇಯೋಭಿಲಾಷಿಗಳಲ್ಲಿ ಕನಿಷ್ಠ 50 ಜನರಿಗೆ ತಮ್ಮ ಕುಟುಂಬದೊಂದಿಗೆ ಭಾಗವಹಿಸಲು ಬಸವ ಜಯಂತಿ ಆಚರಣಾ ಸಮಿತಿ ಕೋರಿದೆ.
Basavothsava rehearsal