ರಾಜಕೀಯ ಬದಿಗಿಟ್ಟು ಕೇಂದ್ರಕ್ಕೆ ಬೆಂಬಲ-ಜಾರಕಿಹೊಳೆ-support the Centre-Jarakihole

SUDDILIVE || SHIVAMOGGA

ರಾಜಕೀಯ ಬದಿಗಿಟ್ಟು ಕೇಂದ್ರಕ್ಕೆ ಬೆಂಬಲ-ಜಾರಕಿಹೊಳೆ-Politics aside, support the Centre - Jarakihole

Support, center

ರಾಜಕೀಯ ಬದಿಗಿಟ್ಟು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಸಚಿವ ಸತೀಶ್ ಜಾರಕಿಹೊಳೆ ಪಾಕ್ ವಿರುದ್ಧದ ಹೇಳಿಕೆಗೆ ಮಾಹಿತಿ ನೀಡಿದರು. 

ಐಬಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿದ್ದು ಸದ್ಯ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ.ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ಕೇಂದ್ರ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಕೇಂದ್ರದ ನಿರ್ಧಾರಕ್ಕೆ ನಾವೀಗಾಗಲೇ ಬೆಂಬಲ ವ್ಯಕ್ತಪಡಿಸಿದ್ದೇವೆ. ರಾಜಕೀಯವನ್ನು ಬದಿಗಿಟ್ಟು ನಾವು ಬೆಂಬಲ ಸೂಚಿಸಿದ್ದೇವೆ. ಎರಡು ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷ ರಾಜ್ಯದ ಮೇಲೆ ಸದ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. 

ಸದ್ಯ ಸಂಘರ್ಷದ ಪರಿಣಾಮ ಪಂಜಾಬ್, ರಾಜಸ್ಥಾನ್, ಜಮ್ಮು- ಕಾಶ್ಮೀರದ ಮೇಲೆ ಕೇಂದ್ರೀತವಾಗಿದೆ. ಕರ್ನಾಟಕದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ತುಂಬಾ ಕಡಿಮೆ ಇದೆ. ಆದಾಗ್ಯೂ ಇಂದು ಸಂಪುಟದ ಸಭೆ ನಡೆಯಲಿದೆ ಎಂದರು. 

ಸಭೆಯಲ್ಲಿ ಸಂಘರ್ಷದ ಪರಿಣಾಮ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಪೂರ್ಣ ಪ್ರಮಾಣದ ಯುದ್ಧ ನಡೆಯುವ ಕುರಿತು ಈಗಲೇ ಏನು ಹೇಳಲು ಆಗದು. ಈ ಬಗ್ಗೆ ಏನಿದ್ದರೂ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. 

ಒಳ ಮೀಸಲಾತಿ ಅನುಕೂಲವಾಗಲಿದೆ

ಒಳ ಮೀಸಲಾತಿ ಸಮೀಕ್ಷೆ ಈಗಾಗಲೇ ರಾಜ್ಯಾದ್ಯಂತ ನಡೆಯುತ್ತಿದೆ. ಇದರಿಂದ ನಿಖರವಾದ ಅಂಕಿ ಅಂಶ ತಿಳಿಯಲಿದೆ. ಮುಂದಿನ ದಿನಗಳಲ್ಲಿ ಮೀಸಲಾತಿಯ ಕುರಿತು ನಿರ್ಧಾರ ತೆಗೆದುಕೊಳ್ಳಲು ಅನುಕೂಲ ಆಗಲಿದೆ. ಕೇಂದ್ರ ಸರ್ಕಾರ ಜಾತಿ ಮತ್ತು ಜನಗಣತಿ ನಡೆಸಲು ಮುಂದಾಗಿರುವುದು ಸರಿಯಾಗಿದೆ. 

ಅದರ ಫಲಿತಾಂಶ ಏನು ಬರಲಿದೆ ಎಂದು ಗೊತ್ತಿಲ್ಲ. ಕಾಂತರಾಜ ವರದಿ ಕುರಿತು ಸಾರ್ವಜನಿಕ ಚರ್ಚೆಗೆ ಬಿಡುತ್ತೇವೆ‌. ಸಾರ್ವಜನಿಕ ಅಭಿಪ್ರಾಯ ಆಧರಿಸಿ ಬದಲಾವಣೆ ಮಾಡಲು ನಾವು ಸಿದ್ಧವಿದ್ದೇವೆ ಎಂದು ಸಚಿವರು ತಿಳಿಸಿದರು.

support the Centre-Jarakihole    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close